ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಸರ್ಕಾರ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಸರ್ಕಾರಕ್ಕೆ ೨ ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮೇ.20 ಕ್ಕೆ ಹೊಸಪೇಟೆಯಲ್ಲಿ ಬಹಳ ದೊಡ್ಡ ಮಾಡ್ತಿದ್ದೇವೆ. ಮುಖ್ಯವಾಗಿ ಇದು ಕಂದಾಯ ಇಲಾಖೆಯ ಕಾರ್ಯಕ್ರಮ. ಕಂದಾಯ ಇಲಾಖೆಯಿಂದ 50 ಸಾವಿರ ಜನರಿಗೆ ಹಕ್ಕು ಪತ್ರ ಕೊಡ್ತಿದ್ದೇವೆ. ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಸುಮಾರು 50 ಸಾವಿರ ಜನರಿಗೆ ಹಕ್ಕು ಪತ್ರ ಕೊಡುವ ಕಾರ್ಯಕ್ರಮ ಮಾಡ್ತಿದ್ದಾರೆ. ಇದೊಂದು ಸರ್ಕಾರಿ ಕಾರ್ಯಕ್ರಮ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಎಲ್ಲರೂ ಬರ್ತಾರೆ. ಇದು ಕಾಂಗ್ರೆಸ್ ನ ಸಾಧನಾ ಸಮಾವೇಶ ಅಲ್ಲ. ಇದೊಂದು ಸರ್ಕಾರದ ಕಾರ್ಯಕ್ರಮ. ರಾಜ್ಯ ಸರ್ಕಾರಕ್ಕೆ ಎರಡು ವರ್ಷ ಆಗಿದೆ. ಹೀಗಾಗಿ ಮಾಡ್ತಿದ್ದೇವೆ. ಸರ್ಕಾರದ ಸಾಧನಾ ಸಮಾವೇಶ ಬೇರೆ ಮಾಡ್ತೇವೆ. ಸಾಧನಾ ಸಮಾವೇಶವನ್ನು ಪ್ರತ್ಯೇಕವಾಗಿ ಮಾಡ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಚೈತ್ರಾ ಕುಂದಾಪುರ ಕಳ್ಳಿ, ಅವಳ ಗಂಡ ಕೂಡ ಕಳ್ಳ..ತಂದೆಯ ಸ್ಫೋಟಕ ಹೇಳಿಕೆ