ಪುಡಿರೌಡಿಗಳ ಅಟ್ಟಹಾಸ ; ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿದು ಪರಾರಿ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪುಡಿರೌಡಿಗಳು ತಡರಾತ್ರಿ ಅಟ್ಟಹಾಸ ಮೆರೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನಿಗೆ ಸಾರ್ವಜನಿಕ‌ ಸ್ಥಳದಲ್ಲೇ ಚಾಕು ಇರಿದು ಪರಾರಿಯಾಗಿರುವ ಘಟನೆ ನಗರದ ಬಾಕಳೆ ಗಲ್ಲಿಯಲ್ಲಿ ನಡೆದಿದೆ. ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಕಳೆ ಗಲ್ಲಿಯಲ್ಲಿ ಈ‌ ಘಟನೆ ನಡೆದಿದ್ದು, ಇಬ್ಬು ಸಿತಾರವಾಲೆ ಎಂಬ ಯುವಕನಿಗೆ ಮೂವರು ಯುವಕರು ಚಾಕು ಇರಿದು ಪರಾರಿಯಾಗಿದ್ದಾರೆ. ಬಾಕಳೆ ಗಲ್ಲಿಯಲ್ಲಿರುವ ಬೇಕರಿಯೊಂದಕ್ಕೆ ಕೇಕ್ ತರಲು ತೆರಳಿದ್ದ ಇಬ್ಬು‌ ಸಿತಾರವಾಲೆ ಮೇಲೆ ಏಕಾಏಕಿ‌ ಅಟ್ಯಾಕ್ ಮಾಡಿರುವ ಮೂವರು ಯುವಕರು ಚಾಕುವಿನಿಂದ … Continue reading ಪುಡಿರೌಡಿಗಳ ಅಟ್ಟಹಾಸ ; ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿದು ಪರಾರಿ