ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಿಲ್ಲ. ಇದರಿಂದ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಗಿದೆ. ಕನ್ನಡದ ಮೂಲ ತಮಿಳು ಎಂದು ಹೇಳಿದ್ದ ಅವರು, ಕ್ಷಮೆ ಕೇಳಲು ನಿರಾಕರಿಸಿದ್ದರು. ಇದು ಅವರ ಸಿನಿಮಾಗೆ ದೊಡ್ಡ ಹೊಡೆತ ಕೊಟ್ಟಿದೆ. ಇದರ ನಡುವೆ ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದರೂ, ಸುಪ್ರೀಂಕೋರ್ಟ್‌ನಲ್ಲಿ ಅವರು ಮನವಿ ಮಾಡಿದ್ದಾರೆ. ಆದರೆ, ಅಲ್ಲಿ ಅವರಿಗೆ ಹಿನ್ನಡೆ ಆಗಿದೆ. ಮನವಿಯನ್ನು ನೋಡಿದ ಸುಪ್ರೀಂಕೋರ್ಟ್ ಹೈಕೋರ್ಟ್ನತ್ತ ಬೆರಳು ಮಾಡಿದೆ. ಹೀಗಾಗಿ ಕಮಲ್ಅವರು ಹೈಕೋರ್ಟ್ ಆದೇಶ ಬರುವವರೆಗೆ ಕಾಯಲೇಬೇಕಿದೆ.
ನಿಮ್ಮ ಲ್ಯಾಪ್ ಟಾಪ್ ನಲ್ಲಿ ಬೇಗ ಚಾರ್ಜ್ ಕಡಿಮೆ ಆಗುತ್ತಾ!? ಹಾಗಿದ್ರೆ ಈ ರೀತಿ ಮಾಡಿ!
‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂಬ ಕಮಲ್ ಹಾಸನ್ ಹೇಳಿಕೆಗೆ ಎಲ್ಲ ಕಡೆಗಳಲ್ಲಿ ವಿರೋಧ ವ್ಯಕ್ತವಾಯಿತು. ಈ ಹೇಳೆಯನ್ನು ಕನ್ನಡಿಗರು ಬಹುವಾಗಿ ಖಂಡಿಸಿದರು. ಈ ಕಾರಣದಿಂದಲೇ ಅವರ ನಟನೆಯ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡದಿರಲು ನಿರ್ಧರಿಸಲಾಯಿತು. ಈ ವಿಚಾರ ಕಮಲ್ನ ಕೆರಳಿಸಿದೆ. ಆರಂಭದಲ್ಲಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದ ಅವರು, ಸಿನಿಮಾ ರಿಲೀಸ್ ವೇಳೆ ಭದ್ರತೆಗೆ ಮನವಿ ಮಾಡಿದ್ದರು.
ಈ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಇದು ಅಸಾಧ್ಯ ಎಂದಿದೆ. ‘ಕನ್ನಡಿಗರ ಬಳಿ ಕ್ಷಮೆ ಕೇಳಿದರೆ ಮಾತ್ರ ಸಮಸ್ಯೆಗೆ ಪರಿಹಾರ’ ಎಂದು ಕೋರ್ಟ್ ಪರೋಕ್ಷವಾಗಿ ಹೇಳಿತ್ತು. ಸದ್ಯ ಅರ್ಜಿ ವಿಚಾರಣೆ ಜೂನ್ 10ರಂದು ನಡೆಯಬೇಕಿದೆ. ಅದಕ್ಕೂ ಮೊದಲೇ ಕಮಲ್ ಹಾಸನ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿ ಅವರಿಗೆ ಹಿನ್ನಡೆ ಆಗಿದೆ.
‘ಥಗ್ ಲೈಫ್ ವಿರುದ್ಧ ಕರ್ನಾಟಕದಲ್ಲಿ ಬೆದರಿಕೆಗಳು ಬರುತ್ತಿವೆ. ಚಿತ್ರ ಪ್ರದರ್ಶನಕ್ಕೆ ಬಿಡುತ್ತಿಲ್ಲ’ ಎಂದು ಸುಪ್ರೀಂನಲ್ಲಿ ತಂಡ ಅರ್ಜಿ ಸಲ್ಲಿಸಿದೆ. ಅರ್ಜಿ ವಿಚಾರಣೆಗೆ ನ್ಯಾಯಮೂರ್ತಿ ಪಿಕೆ ಮಿಶ್ರಾ ನಿರಾಕರಣೆ ಮಾಡಿದ್ದಾರೆ. ಅರ್ಜಿದಾರರು ಹೈ ಕೋರ್ಟ್ ಮೊರೆ ಹೋಗುವಂತೆ ಸೂಚನೆ ನೀಡಿದೆ.