Close Menu
Ain Live News
    Facebook X (Twitter) Instagram YouTube
    Thursday, June 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Health Tips: ಮುಖದ ಮೇಲಿನ ಸುಕ್ಕು ನಿಮ್ಮ ಅಂದಗೆಡಿಸುತ್ತಿದಿಯೇ..? ಹಾಗಿದ್ರೆ ಇಲ್ಲಿದೆ ನೋಡಿ ಸಿಫಲ್‌ ಟಿಪ್ಸ್‌

    By Author AINMay 1, 2025
    Share
    Facebook Twitter LinkedIn Pinterest Email
    Demo

    ಮುಖದ ಮೇಲೆ ನೆರಿಗೆಗಳು ಮೂಡುವುದು ವೃದ್ದಾಪ್ಯದ ಲಕ್ಷಣವಾಗಿರುವ ಕಾರಣ ಹೀಗೆ ಕಾಣಿಸಿಕೊಳ್ಳಲು ಯಾರಿಗೂ ಇಷ್ಟವಾಗುವುದಿಲ್ಲ. ಬಟ್ಟೆಗಳಿಗೇ ನೆರಿಗೆ ಮೂಡಿಸಲು ನಮಗೆ ಇಷ್ಠವಿಲ್ಲದಿರುವಾಗ ಮುಖದ ಮೇಲೆ ಇರುವುದು ಇಷ್ಟ ವಾಗುತ್ತದೆಯೇ? ಚರ್ಮದಲ್ಲಿ ಆರ್ದತೆ ಮತ್ತು ಸೆಳೆತ ಇಲ್ಲವಾದಾದ ನೆರಿಗೆ ಸಹಜವಾಗಿ ಮೂಡುತ್ತದೆ. ಇದಕ್ಕೆ ವಯಸ್ಸು, ವಾತಾವರಣ ಹಾಗೂ ಕೆಲವು ಅನುವಂಶಿಕ ಗುಣಗಳು ಕಾರಣವಾಗಿವೆ.

    ಊಟದ ಬಳಿಕ ಪಾತ್ರೆಗಳನ್ನು ತೊಳೆಯದೇ ಹಾಗೆ ಬಿಡ್ತೀರಾ!? ನೀವು ನೋಡಲೇಬೇಕಾದ ಸ್ಟೋರಿ!

    ಈ ಸ್ಥಿತಿಗೆ ಕಾರಣ ನಿರ್ಲಕ್ಷ್ಯ ಮತ್ತು ಸರಿಯಾದ ಆರೈಕೆಯ ಕೊರತೆ ಎನ್ನುತ್ತಾರೆ ಚರ್ಮ ತಜ್ಞರು. ಈಗ ನೀವು ಹೇಗಾದರೂ ಕೈಗಳಿಂದ ಸುಕ್ಕುಗಳನ್ನು ತೆಗೆದು ಹಾಕಲೇಬೇಕು ಎಂದು ಯೋಚಿಸುತ್ತಿದ್ದರೆ ನಾವು ನಿಮಗಿಲ್ಲಿ ಸುಲಭವಾದ ಐಡಿಯಾ ಕೊಡುತ್ತಿದ್ದೇವೆ ನೋಡಿ ಓದಿ.

    ​ನಿಂಬೆ

    • ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ನಿಮಗೆಲ್ಲ ಗೊತ್ತಿರುವ ಹಾಗೆ ವಿಟಮಿನ್ ಸಿ ಅಂಶ ಒಂದು ಅತ್ಯಂತ ಬಲವಾದ ಆಂಟಿ ಆಕ್ಸಿಡೆಂಟ್ ಅಂಶವಾಗಿದ್ದು, ತನ್ನ ಬ್ಲೀಚಿಂಗ್ ಗುಣಲಕ್ಷಣಗಳಿಂದ, ವಯಸ್ಸಾಗುತ್ತಿದ್ದಂತೆ ಮುಖದ ಮೇಲೆ ಕಂಡುಬರುವ ಕಲೆಗಳು ಮತ್ತು ಗೆರೆಗಳನ್ನು ಅತ್ಯಂತ ಸುಲಭವಾಗಿ ಹೋಗಲಾಡಿಸುತ್ತದೆ.
    • ನಿಮ್ಮ ತ್ವಚೆಯ ಮೇಲೆ ಪ್ರತಿ ದಿನ ತಾಜಾ ನಿಂಬೆ ಹಣ್ಣಿನ ರಸ ಅನ್ವಯಿಸಿ ಸುಮಾರು ಹದಿನೈದು ನಿಮಿಷಗಳು ಹಾಗೆ ಬಿಟ್ಟು ನಂತರ ಸ್ವಚ್ಛವಾದ ನೀರಿನಿಂದ ಮುಖ ತೊಳೆದುಕೊಳ್ಳಿ.

     

    ಸೌತೆಕಾಯಿ

    • ಸೌತೆಕಾಯಿಯಲ್ಲಿ ನಿಮ್ಮ ಚರ್ಮದ ಮೃದುತ್ವವನ್ನು ಹೆಚ್ಚು ಮಾಡುವ ಗುಣವಿದೆ. ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶ ಇರುವುದರಿಂದ ಕಣ್ಣುಗಳ ಸುತ್ತಲಿನ ಕಪ್ಪು ಕಲೆಗಳನ್ನು ಹೋಗಲಾಡಿಸುವ ಜೊತೆಗೆ ಕಣ್ಣುಗಳು ಊದಿಕೊಂಡಿರುವ ಸಮಸ್ಯೆಯನ್ನು ತಪ್ಪಿಸುತ್ತದೆ.
    • ನೀವು ಸೌತೆಕಾಯಿ ಜೊತೆಗೆ ಸ್ವಲ್ಪ ಮೊಸರನ್ನು ಹಾಕಿ ನಿಮ್ಮ ಮುಖದ ಚರ್ಮದ ಮೇಲ್ಭಾಗದಲ್ಲಿ ಅನ್ವಯಿಸಿದರೆ ಚರ್ಮದ ಸತ್ತ ಜೀವಕೋಶಗಳು ನಿವಾರಣೆಯಾಗುತ್ತವೆ. ಇದರಿಂದ ನಿಮ್ಮ ತ್ವಚೆ ಹೊಸದರಂತೆ ತಾಜಾ ಆಗಿ ಕಾಣುತ್ತದೆ.

    ​ದಿನಕೊಂದು ಗ್ಲಾಸ್ ಗ್ರೀನ್ ಟೀ ಕುಡಿಯಿರಿ

    • ಗ್ರೀನ್ ಟೀನಲ್ಲಿ ಕಂಡುಬರುವ anti-inflammatory ಗುಣಲಕ್ಷಣಗಳ ಜೊತೆಗೆ ಆಂಟಿಆಕ್ಸಿಡೆಂಟ್ ಅಂಶಗಳು ಚರ್ಮದ ಮೇಲಿನ ಸುಕ್ಕು ಗಳನ್ನು ನಿವಾರಣೆ ಮಾಡಿ ಸಣ್ಣ ಸಣ್ಣ ಗೆರೆಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತದೆ.
    • ಇದಕ್ಕಾಗಿ ನೀವು ಕೆಲವು ಗ್ರೀನ್ ಟೀ ಎಲೆಗಳನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಹಾಕಿ ನಂತರ ಅದನ್ನು ರುಬ್ಬಿ ಪೇಸ್ಟ್ ತಯಾರು ಮಾಡಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಫೇಸ್ ಮಾಸ್ಕ್ ರೆಡಿ ಮಾಡಿಕೊಳ್ಳಿ. ಮುಖದ ಮೇಲೆ ಇದನ್ನು ಸುಮಾರು 15 ನಿಮಿಷಗಳ ಕಾಲ ಅನ್ವಯಿಸಿ, ನಂತರ ತಂಪಾದ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

    ​ಸೀಬೆ ಮರದ ಎಲೆಗಳು

    • ಇದಕ್ಕಾಗಿ ನೀವು ಒಣಗಿದ ಅಥವಾ ಹಸಿ ಸೀಬೆ ಮರದ ಎಲೆಗಳನ್ನು ತೆಗೆದುಕೊಳ್ಳಬಹುದು. ಅವುಗಳನ್ನು ಚೆನ್ನಾಗಿ ಜಜ್ಜಿ ಪುಡಿಮಾಡಿಕೊಂಡು ಅಥವಾ ಪೇಸ್ಟ್ ತಯಾರಿಸಿಕೊಂಡು ಕುದಿಯುವ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ.
    • ಸ್ವಲ್ಪ ಹೊತ್ತು ಕಳೆದ ಮೇಲೆ ನೀರಿನ ಬಣ್ಣ ಕಂದು ಬಣ್ಣಕ್ಕೆ ಬದಲಾಗುತ್ತದೆ. ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಿಸಿ ಆನಂತರ ಮುಖದ ಮೇಲೆ ಹಚ್ಚಿ ಸುಮಾರು 15 ನಿಮಿಷಗಳು ಹಾಗೆ ಬಿಟ್ಟು ನಂತರ ಮುಖ ತೊಳೆದುಕೊಳ್ಳಬಹುದು. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು.

    ​ಪಪ್ಪಾಯ ಹಣ್ಣಿನ ಪೇಸ್ಟ್

    • ಮೊದಲಿಗೆ ಪಪ್ಪಾಯ ಹಣ್ಣಿನ ಪೇಸ್ಟ್ ತಯಾರಿಸಿಕೊಳ್ಳಬೇಕು.
    • ನಂತರ ಒಂದು ಟೀ ಚಮಚ ಪಪ್ಪಾಯ ಪೇಸ್ಟ್ ಗೆ ಅರ್ಥ ಟೀ ಚಮಚ ಅಕ್ಕಿ ಹಿಟ್ಟನ್ನು ಸೇರಿಸಿ, ಮಿಶ್ರಗೊಳಿಸಿ.
    • ಮಿಶ್ರಣವನ್ನು ಮುಖಕ್ಕೆ ಹಚ್ಚಿ.
    • ವೃತ್ತಾಕಾರದಲ್ಲಿ 5 ನಿಮಿಷಗಳ ಕಾಲ ಮುಖವನ್ನು ಮೃದುವಾಗಿ ಮಸಾಜ್ ಅಥವಾ ಸ್ಕ್ರಬ್ ಮಾಡಿ.
    • ಸ್ವಲ್ಪ ಸಮಯ ಆರಲು ಬಿಡಿ.
    • ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.
    • ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ವಾರದಲ್ಲಿ 1-2 ಬಾರಿ ಪ್ರಯತ್ನಿಸಬಹುದು.

    ​ಜೇನುತುಪ್ಪ ಮತ್ತು ಹಾಲಿನ ಮಿಶ್ರಣದೊಂದಿಗೆ ಓಟ್ ಮೀಲ್

    ಈ ಫೇಸ್ ಪ್ಯಾಕ್ ಅನ್ನು ತಯಾರು ಮಾಡಲು ಬೇಕಾಗಿರುವ ಸಾಮಗ್ರಿಗಳು: –

    • ಎರಡು ಟೇಬಲ್ ಚಮಚದಷ್ಟು ಜೇನುತುಪ್ಪ
    • ಒಂದು ಟೇಬಲ್ ಚಮಚದಷ್ಟು ಓಟ್ ಮೀಲ್ ಹಿಟ್ಟು
    • ಒಂದು ಟೇಬಲ್ ಚಮಚದಷ್ಟು ಹಾಲು

    ತಯಾರು ಮಾಡುವ ವಿಧಾನ

    • ಮೊದಲಿಗೆ ಒಂದು ಬಟ್ಟಲಿಗೆ ಓಟ್ ಮೀಲ್ ಹಿಟ್ಟನ್ನು ಹಾಕಿಕೊಂಡು, ಅದಕ್ಕೆ ಜೇನು ತುಪ್ಪ ಸೇರಿಸಿ ಚೆನ್ನಾಗಿ ಕಲಸಿ. ಇದು ಗಟ್ಟಿಯಾದ ನಂತರ ಇದಕ್ಕೆ ಹಾಲನ್ನು ಸೇರಿಸಿ ಮೃದುವಾಗಿ ಒಂದು ಹದಕ್ಕೆ ಬರುವವರೆಗೆ ಮತ್ತೆ ಕಲಸಿ.
    • ಹೀಗೆ ತಯಾರಾದ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಚೆನ್ನಾಗಿ ಲೇಪನ ಮಾಡಿ ಸುಮಾರು 15 ರಿಂದ 20 ನಿಮಿಷಗಳ ವರೆಗೆ ಹಾಗೆ ಒಣಗಲು ಬಿಡಿ.
    • ಸಾಮಾನ್ಯವಾಗಿ ಈ ಫೇಸ್ ಪ್ಯಾಕ್ ಒಣ ಚರ್ಮ ಹೊಂದಿರುವವರಿಗೆ ಮತ್ತು ಚರ್ಮದಲ್ಲಿ ಉರಿಯೂತದ ಸಮಸ್ಯೆ ಹೊಂದಿರುವವರಿಗೆ ಹಾಗೂ ಮುಖದಲ್ಲಿ ಸಣ್ಣ ಪ್ರಾಯದಲ್ಲಯೇ ಮೂಡುವ ಸುಕ್ಕು, ನೆರಿಗೆ ಸಮಸ್ಯೆಗೆ ಬಹಳ ಸೂಕ್ತ. ಏಕೆಂದರೆ ಈ ಮಿಶ್ರಣದಲ್ಲಿರುವ ಅಂಶಗಳು ಚರ್ಮದ ಉರಿಯೂತದ ಸಮಸ್ಯೆಯನ್ನು ನಿವಾರಣೆ ಮಾಡಿ ಚರ್ಮವನ್ನು ಮೃದುವಾಗಿಸುತ್ತದೆ.

     

     

     

    Demo
    Share. Facebook Twitter LinkedIn Email WhatsApp

    Related Posts

    ನೀವು ಯಾವಾಗಲೂ ಮೊಬೈಲ್, ಟಿವಿ ಜಾಸ್ತಿ ನೋಡುತ್ತೀರಾ? ಹಾಗಿದ್ರೆ ನಿಮ್ಮ ಲೈಂಗಿಕ ಜೀವನ ಕಷ್ಟ..ಕಷ್ಟ!

    June 12, 2025

    ನೀವು ಊಟ ಮಾಡುವಾಗಲೂ ಹೆಚ್ಚು ಕೂದಲು ಸಿಗುತ್ತಾ!? ಹಾಗಿದ್ರೆ ಈ ಸಮಸ್ಯೆಗಳಿರುವುದು ಫಿಕ್ಸ್!

    June 12, 2025

    ಈ ಆಹಾರ ಅಪ್ಪಿತಪ್ಪಿಯೂ ಸೇವಿಸಬೇಡಿ: ಹಾರ್ಟ್‌ ಅಟ್ಯಾಕ್‌ ಅಪಾಯ ಹೆಚ್ಚು!

    June 12, 2025

    ಕಂಕುಳಿನ ಕಪ್ಪು ಕಲೆ ಬೆಳ್ಳಗಾಗಬೇಕಾ!? ಹಾಗಿದ್ರೆ ಶಾಂಪೂಗೆ ಈ ಪದಾರ್ಥ ಮಿಕ್ಸ್ ಮಾಡಿ ಹಚ್ಚಿ!

    June 11, 2025

    ಮಣ್ಣಿನ ಮಡಕೆ ನೀರು ಕುಡಿಯೋದು ಒಳ್ಳೆಯದಂತೆ: ಯಾಕೆ ಗೊತ್ತಾ?

    June 11, 2025

    ತೂಕ ಇಳಿಸಿಕೊಳ್ಳಲು ನೀವು ಅನ್ನ ತ್ಯಜಿಸಲೇಬೇಕಾ? ಬೇಕಾಗಿಲ್ಲ.. ಈ ಅಕ್ಕಿ ಬಳಸಿ ಸಾಕು ವೇಟ್ ಲಾಸ್ ಪಕ್ಕಾ

    June 11, 2025

    ಮಹಿಳೆಯರಿಗೆ ಬ್ಲ್ಯಾಕ್ ಕಾಫಿ ಒಂದು ವರದಾನ: ಯಾವಾಗ ಕುಡಿಯಬೇಕು? ಇದರಿಂದ ಸಿಗುವ ಪ್ರಯೋಜನಗಳೇನು?

    June 11, 2025

    ಜಸ್ಟ್ ಈ ಎಲೆ ಜಗಿದು ರಸ ಸೇವಿಸಿದ್ರೆ ಸಾಕು ಕೊಲೆಸ್ಟ್ರಾಲ್ ಕರಗಿ ಹೋಗುತ್ತೆ!

    June 11, 2025

    ನಿಮ್ಮ ಕಿವಿಯ ಮೇಲೆ ಕೂದಲು ಇದ್ಯಾ!? ಹಾಗಿದ್ರೆ ಇದು ಶುಭವೋ? ಅಶುಭವೋ ಎಂದು ಇಲ್ಲಿ ತಿಳಿಯಿರಿ!

    June 11, 2025

    ಮನೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಈ ಸಸ್ಯ ಇಂದೇ ತನ್ನಿ!

    June 10, 2025

    ಎಚ್ಚರ.. ನೀವು ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುತ್ತೀರಾ..? ಈ ಸಮಸ್ಯೆಗಳು ಉದ್ಭವಿಸಬಹುದು

    June 10, 2025

    ಒಣಗಿದ ಬಾದಾಮಿ ಮಾತ್ರವಲ್ಲ, ಹಸಿ ಬಾದಾಮಿ ಕೂಡ ನಮಗೆ ತುಂಬಾ ಪ್ರಯೋಜನಕಾರಿ.!

    June 10, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.