Close Menu
Ain Live News
    Facebook X (Twitter) Instagram YouTube
    Sunday, June 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ʼ45ʼ ಸಿನಿಮಾದ ʼಶಿವಂ ಶಿವಂ ಸನಾತನಂʼ ಹಾಡು ಬಿಡುಗಡೆ..ಶಿವ ಹೆಸರಿನ ನಂಟು ಬಿಚ್ಚಿಟ್ಟ ಶಿವಣ್ಣ!

    By Author AINMay 24, 2025
    Share
    Facebook Twitter LinkedIn Pinterest Email
    Demo

    ಕರುನಾಡ ‌ಚಕ್ರವರ್ತಿ ಡಾ||ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ, ವಿಜಯ್ ಪ್ರಕಾಶ್ ಹಾಡಿರುವ ಹಾಗೂ ಅರ್ಜುನ್ ಜನ್ಯ ಅವರೆ ಸಂಗೀತ ನೀಡಿರುವ “ಶಿವಂ ಶಿವಂ ಸನಾತನಂ” ಚಿತ್ರದ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಆನಂದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ದೂರದ ದೆಹಲಿಯಿಂದ ಆಗಮಿಸಿ ಶಿವನ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡದವನ್ನು ಆಶೀರ್ವದಿಸಿದರು. ಈ ಹಾಡಿಗೆ ಶಿವರಾಜಕುಮಾರ್ ಅವರು ನೃತ್ಯ ಮಾಡಿದ್ದು ವಿಶೇಷವಾಗಿತ್ತು. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಶಿವನ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ‌ಮಾತನಾಡಿದರು.‌

    ”ಈ ಸಿನಿಮಾ ವಿಶ್ವಾದ್ಯಂತ ತಲಪಬೇಕು. ನನಗೆ ಈ ಹಾಡು ಕೇಳಿದ ಮೇಲೆ ಸಿನಿಮಾ ಮೇಲಿನ ಅಭಿಮಾನ ಮತ್ತಷ್ಟು ಜಾಸ್ತಿಯಾಗಿದೆ. ಯಾವಾಗ ಈ ಚಿತ್ರ ನೋಡುತ್ತೇನೋ ಅನಿಸುತ್ತಿದೆ. ನಿರ್ಮಾಪಕ ರಮೇಶ್ ರೆಡ್ಡಿ‌ ನಮ್ಮ ಕುಟುಂಬವಿದ್ದಂತೆ. ಈಗಾಗಲೇ ಕನ್ನಡ ವರ್ಷನ್ ಡಬ್ಬಿಂಗ್ ಮಾಡಿದ್ದೇನೆ. ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕ ಅರ್ಜುನ್ ಜನ್ಯ ಅವರು ಬಹಳ ಚೆನ್ನಾಗಿ ನಿರ್ದೇಶನದ ಹೊಣೆಯನ್ನು ನಿಭಾಯಿಸಿದ್ದಾರೆ. ನನಗೆ ಶಿವ ಅಂತಾ ಹೆಸರಿಟ್ಟಿದ್ದು ನಮ್ಮ ತಂದೆ ತಾಯಿ. ನಾನು 9 ವರ್ಷಗಳ ಬಳಿಕ ಹುಟ್ಟಿದ್ದು. ಅವರ ಮಗ ಅಂತಾ ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನನ್ನ ಮೂಲ ಹೆಸರು ನಾಗರಾಜ ಶಿವಪುಟ್ಟಸ್ವಾಮಿ.‌ ಹೀಗಾಗಿ, ಶಿವ ಎಂಬ ಹೆಸರು ನನ್ನ‌ ಅಪ್ಪ ಅಮ್ಮನ ಆಶೀರ್ವಾದ” ಎಂದು ತಿಳಿಸಿದರು.

    ಒತ್ತಡದ ಕಾರ್ಯಗಳಿದ್ದರೂ ದೂರದ ಊರಿನಿಂದ ಬಂದು ಹಾಡು ಬಿಡುಗಡೆ ಮಾಡಿಕೊಟ್ಟ ಪೂಜ್ಯರಿಗೆ ಅನಂತ ಧನ್ಯವಾದ ಎಂದು ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ ,‌ ನಮ್ಮ ಚಿತ್ರಕ್ಕೆ ಅರ್ಜುನ್ ಜನ್ಯ ಅವರಂತಹ ನಿರ್ದೇಶಕರು ಸಿಕ್ಕಿದ್ದು ಬಹಳ ಖುಷಿಯಾಗಿದೆ. ಈ ಚಿತ್ರದ ಆರಂಭದಿಂದಲೂ ಅವರು ಈ ಚಿತ್ರಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನೂ ಇಂದು ಬಿಡುಗಡೆಯಾಗಿರುವ ಶಿವನ ಕುರಿತಾದ ಹಾಡಂತೂ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಈ ಹಾಡು ಇಡೀ ದೇಶದೆಲ್ಲೆಡೆ ಸದ್ದು ಮಾಡಲಿದೆ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ವಿಜಯ್ ಪ್ರಕಾಶ್ ಅವರ ಗಾಯನ ಮಧುರವಾಗಿದೆ. ಶಿವರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಇಡೀ ತಂಡಕ್ಕೆ ಧನ್ಯವಾದ ಎಂದರು.

    ಶಿವನ ಕುರಿತಾದ ಈ ಹಾಡು ಬರೆದುಕೊಟ್ಟ ವಿ.ನಾಗೇಂದ್ರಪ್ರಸಾದ್ ಹಾಗೂ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದ. ಈ ಹಾಡು ಹಾಗೂ ಚಿತ್ರ ಇಷ್ಟು ಚೆನ್ನಾಗಿ ಮೂಡಿಬರಲು ನಿರ್ಮಾಪಕ ರಮೇಶ್ ರೆಡ್ಡಿ ಅವರೆ ಪ್ರಮುಖ ಕಾರಣ. ಇನ್ನೂ, ನಾನು ನಿರ್ದೇಶನ ಮಾಡಲು ಪ್ರೇರಣೆ ನೀಡಿದವರೆ ಶಿವರಾಜಕುಮಾರ್. ಅವರ ಪ್ರೋತ್ಸಾಹಕ್ಕೆ ನಾನು ಸದಾ ಚಿರ ಋಣಿ. ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರ ಸಹಕಾರ ಕೂಡ ಅಪಾರ. ಸದ್ಯದಲ್ಲೇ ನಮ್ಮ ಚಿತ್ರತಂಡದಿಂದ ಅಭಿಮಾನಿಗಳಿಗೆ ಮತ್ತೊಂದು ಸಸ್ಪೆನ್ಸ್ ಸಹ ಇದೆ ಎಂದರು ನಿರ್ದೇಶಕ ಅರ್ಜುನ್ ಜನ್ಯ.

    ಅರ್ಜುನ್ ಜನ್ಯ ಕರ್ನಾಟಕ ಮಾತ್ರ ಅಲ್ಲ ಇಡೀ ಭಾರತದಲ್ಲೇ ಉತ್ತಮ ನಿರ್ದೇಶಕನಾಗಿ ಹೆಸರು ಮಾಡುತ್ತಾರೆ. ಇಂದು ಬಿಡುಗಡೆಯಾಗಿರುವ ಶಿವನ ಹಾಡಂತೂ ಬಹಳ ಸೊಗಸಾಗಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅವರು ನಮ್ಮ ಕುಟುಂಬದವರ ಹಾಗೆ. ಕಳೆದ ವರ್ಷ ನಾನು ಈ ಚಿತ್ರದ (ಕನ್ನಡ) ಡಬ್ಬಿಂಗ್ ಮುಗಿಸಿದ್ದೆ. ಈಗ ತಮಿಳಿನಲ್ಲಿ ಡಬ್ ಮಾಡುತ್ತಿದ್ದೇನೆ. ಆದಷ್ಟು ಎಲ್ಲಾ ಭಾಷೆಗಳಲ್ಲೂ ನಾನೇ ಡಬ್ ಮಾಡುತ್ತೇನೆ‌. ನನ್ನ ಧ್ವನಿ ಎಲ್ಲಾ ಕಡೆ ತಲುಪಲಿ ಅಂತ ಅಷ್ಟೇ ಎಂದು ಶಿವರಾಜಕುಮಾರ್ ತಿಳಿಸಿದರು. ‌

    ಹಾಡಿನ ಬಗ್ಗೆ ಡಾ||ವಿ.ನಾಗೇಂದ್ರ ಪ್ರಸಾದ್ ಮಾಹಿತಿ ನೀಡಿದರು. ಗಾಯಕ ವಿಜಯ್ ಪ್ರಕಾಶ್ ಸಹ ಹಾಡಿನ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.

    Demo
    Share. Facebook Twitter LinkedIn Email WhatsApp

    Related Posts

    ಜನಸಾಮಾನ್ಯರ ಮಕ್ಕಳಿಗಾಗಿ ಕೃಷಿ ಕಾಲೇಜು ಸ್ಥಾಪನೆ: ಡಿಸಿಎಂ ಡಿ.ಕೆ.ಶಿವಕುಮಾರ್

    June 22, 2025

    ಸಂಕಷ್ಟದಲ್ಲಿ ಮಾವು ಬೆಳೆಗಾರರು: ನೆರವಿಗೆ ಮುಂದಾದ ಕೇಂದ್ರ: 2.5 ಲಕ್ಷ ಟನ್​​ ಮಾವು ಖರೀದಿಗೆ ಒಪ್ಪಿಗೆ!

    June 22, 2025

    ಇನ್ಮುಂದೆ ಸುಳ್ಳು ಸುದ್ದಿ, ದ್ವೇಷ ಭಾಷಣ ಮಾಡಿದ್ರೆ ದಂಡದ ಜೊತೆ ಜೈಲೂಟ ಫಿಕ್ಸ್!

    June 22, 2025

    ವಿದ್ಯಾರ್ಥಿಗಳು, ಪೋಷಕರು ಮಿಸ್ ಮಾಡ್ದೆ ಸುದ್ದಿ ಓದಿ: ಇನ್ಮುಂದೆ ಶಾಲೆಗಳಲ್ಲಿ ಹೊಸ ರೂಲ್ಸ್! ಏನದು?

    June 22, 2025

    ಆಗಸದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿ: ಬೆಂಗಳೂರಲ್ಲಿ ತುರ್ತು ಭೂಸ್ಪರ್ಶ!

    June 22, 2025

    ಬೆಂಗಳೂರಿಗರ ಗಮನಕ್ಕೆ: ಇಂದು ಈ ಪ್ರದೇಶದಲ್ಲಿ ಇರಲ್ಲ ಕರೆಂಟ್!

    June 22, 2025

    ಎತ್ತಿನಹೊಳೆ ಯೋಜನೆಯಲ್ಲಿ ಮೊದಲು ಕುಡಿಯುವ ನೀರು ಪೂರೈಕೆ, ನಂತರ ಕೆರೆಗಳಿಗೆ ನೀರು: ಡಿಸಿಎಂ ಡಿ.ಕೆ. ಶಿವಕುಮಾರ್

    June 21, 2025

    ವಂಚನೆ ಆರೋಪ: ಬೆಂಗಳೂರಿನ ಸಂಧ್ಯಾ ಪವಿತ್ರ ವಿರುದ್ಧ FIR!

    June 21, 2025

    ಐಟಿ ಕ್ಷೇತ್ರದ ಹುದ್ದೆಗಳನ್ನ ಎಐ ಕಿತ್ತುಕೊಳ್ಳುತ್ತಾ!? ಇನ್ಫೋಸಿಸ್ ದಿಗ್ಗಜ ಎನ್‌.ಆರ್ ನಾರಾಯಣಮೂರ್ತಿ ಏನಂದ್ರೂ!?

    June 21, 2025

    ಮಾವು ಮಾರುಕಟ್ಟೆ ಮಧ್ಯಪ್ರವೇಶ : ಬೆಲೆ ವ್ಯತ್ಯಾಸ ಪಾವತಿಗೆ ಸರ್ಕಾರದ ಒಪ್ಪಿಗೆ ಎನ್. ಚಲುವರಾಯಸ್ವಾಮಿ!

    June 21, 2025

    19 ವರ್ಷದ ಯುವಕ ಪಾರ್ಕ್ ನಲ್ಲಿ ನೇಣಿಗೆ ಶರಣು: ಸೂಸೈಡ್ ಗೆ ಕಾರಣ!?

    June 21, 2025

    ಜಲಮಂಡಳಿಯ ವತಿಯಿಂದ ತ್ವರಿತವಾಗಿ ಹೊಸ ಚರಂಡಿ ನಿರ್ಮಿಸಲು ಸೂಚನೆ: ಸ್ನೇಹಲ್

    June 21, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.