ತಮ್ಮ ಸುಮಧುರ ಕಂಠ ಹಾಗೂ ಸಂಗೀತದ ಮೂಲಕ ಕನ್ನಡ ಮನಸ್ಸುಗಳನ್ನು ಗೆದ್ದಿರುವ ವಾಸುಕಿ ವೈಭವ್ ಅಪ್ಪನಾಗುತ್ತಿರುವ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ತಾಯಂದಿರ ದಿನದಂದೇ ಗಾಯಕ ವಾಸುಕಿ ವೈಭವ್ ಹಾಗೂ ಬೃಂದಾ ವಿಕ್ರಮ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಮಾಹಿತಿ ಕೊಟ್ಟಿದ್ದರು. ಈ ವಿಚಾರವನ್ನು ವಾಸುಕಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿಕೊಂಡಿದ್ದರು. ಅಪ್ಪ-ಅಮ್ಮನಾಗುತ್ತಿರುವ ಈ ಜೋಡಿಗೆ ಅರುಣ್ ಸಾಗರ್ ದಂಪತಿ ಸರ್‌ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ.
ನಟ, ನಿರ್ದೇಶಕ, ನಿರೂಪಕ ಹಾಸ್ಯ ಕಲಾವಿದರ ಅರುಣ್ ಸಾಗರ್ ಹಾಗೂ ಪತ್ನಿ ಮೀರಾ ಅರುಣ್ ಸಾಗರ್ ವಾಸುಕಿ ದಂಪತಿಯನ್ನು ಮನೆಗೆ ಕರೆದು ಸ್ಪೆಷಲ್ ಅಡುಗೆ ಮಾಡಿ ಬಡಿಸಿದ್ದಾರೆ. ಒಂದೇ ಬಳೆ ಎಲೆಯಲ್ಲಿ ಈ ಜೋಡಿ ಊಟ ಸವಿದಿದ್ದಾರೆ. ಆ ನಂತರ ಅರುಣ್ ಸಾಗರ್ ದಂಪತಿ ಅದಿತಿ ಸಾಗರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಕ್ಷಣವನ್ನು ಬೃಂದಾ ವಾಸುಕಿ ಎಂಜಾಯ್ ಮಾಡಿದ್ದಾರೆ. ಬಳಿಕ ಕುಂಕುಮ್ಮ-ಅರಿಶಿಣಿ ಕೊಟ್ಟು ಬೃಂದಾರನ್ನು ಮೀರಾ ಸಾಗರ್ ಸತ್ಕರಿಸಿದ್ದಾರೆ.
2023 ನವೆಂಬರ್ 16ರಂದು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಬೃಂದಾ ಅವರ ಜೊತೆ ಹಸೆಮಣೆ ಏರಿದ್ದರು. ಬೃಂದಾ ಮೂಲತಃ ರಂಗಭೂಮಿ ಕಲಾವಿದೆ. ಸಾಕಷ್ಟು ವರ್ಷದಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದು ಹಲವು ನಾಟಕಗಳಲ್ಲಿ ನಟಿಸಿದ್ದಾರೆ. ಹಲವಾರು ಸ್ಟೇಜ್ಗಳಲ್ಲಿ ಶೋ ಪರ್ಫಾಮ್ ಮಾಡಿದ್ದಾರೆ. ಜೊತೆಗೆ ಶಿಕ್ಷಕಿಯಾಗಿಯೂ ಕೆಲಸ ಮಾಡ್ತಿದ್ದಾರೆ.