ಕಲಬುರಗಿ : ಗ್ಯಾಸ್ ಕಟರ್ ಬಳಸಿ ಎಟಿಎಮ್ ಮುರಿದು ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ರಾಮನಗರದದಲ್ಲಿನ ಚೌಕ್ ಬಳಿಯ ಎಸ್ ಬಿಐ ಶಾಖೆಗೆ ಸೇರಿದ ಎಟಿಎಂಗೆ ಖದೀಮರು ಕನ್ನ ಹಾಕಿದ್ದಾರೆ.
ಸಿಸಿಟಿವಿಗೆ ಬ್ಲಾಕ್ ಸ್ಪ್ರೇ ಮಾಡಿ, ಗ್ಯಾಸ್ ಕಟರ್ ಬಳಸಿ ಎಟಿಎಂ ಮುರಿದು ಲೂಟಿ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಮಂಗಳವಾರ ಸಂಜೆ ಆರು ಗಂಟೆಗೆ ಎಟಿಎಂಗೆ ಹಣ ಹಾಕಿದ್ದರು. ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಇಲ್ಲದನ್ನ ಗಮನಿಸಿ ಕಳ್ಳರು , ಇಂದು ನಸುಕಿನ ಜಾವ ನಾಲ್ಕು ಗಂಟೆಗೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಎಟಿಎಂ ನಲ್ಲಿದ್ದ 18 ಲಕ್ಷ ರೂಪಾಯಿ ದೋಚಿದ್ದಾರೆ.
ಇನ್ನೂ ಘಟನೆಯ ಸಂಬಂಧ ಸಬ್ ಅರ್ಬನ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.