Accident Case: ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು!
ಬೆಂಗಳೂರು ಗ್ರಾಮಾಂತರ:- ರಸ್ತೆ ಬದಿಯ ಕಲ್ಲಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಸೊಣ್ಣಮಾರನಹಳ್ಳಿ ಬಳಿ ಜರುಗಿದೆ. ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 6 ಮಂದಿ ದುರ್ಮರಣ, ಓರ್ವ ಗಂಭೀರ! ಕೊನಘಟ್ಟ ಮೂಲದ ಮಣಿಕುಮಾರ್ (30) ಮೃತ ದುರ್ದೈವಿ. ರಸ್ತೆ ತಿರುವಿನಲ್ಲಿ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಮೃತನ ಶವವನ್ನು ದೊಡ್ಡಬಳ್ಳಾಪುರ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Copy and paste this URL into your WordPress site to embed
Copy and paste this code into your site to embed