ಬೈಕ್ ಗೆ ಕಾರು ಡಿಕ್ಕಿ: ಸವಾರ ದುರ್ಮರಣ!

ಚಾಮರಾಜನಗರ:- ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಸಮೀಪ ಜರುಗಿದೆ. ಚಿತ್ರದುರ್ಗ: ಕುರಿ ಮೈ ತೊಳೆಯಲು ಹೋಗಿ ದಂಪತಿ ಸಾವು! ಸಕಲೇಶಪುರ ಮೂಲದ ಜಗದೀಶ್ ಸಾವಿಗೀಡಾದ ದುರ್ದೈವಿ. ಕೇರಳ ಮೂಲದ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಚಾಮರಾಜನಗರದಿಂದ ಗುಂಡ್ಲುಪೇಟೆ ಪಟ್ಟಣದತ್ತ ತೆರಳುವಾಗ ದುರ್ಘಟನೆ ಸಂಭವಿಸಿದೆ. ತೆರಕಣಾಂಬಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.