ಚಾಮರಾಜನಗರ: ನಿಲ್ಲದ ಕಾಡಾನೆಗಳ ಹಾವಳಿ, ಬಾಳೆ ತೋಟಕ್ಕೆ ನುಗ್ಗಿ ಅಪಾರ ಬೆಳೆ ನಾಶ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ  ಮಂಚಹಳ್ಳಿ ಗ್ರಾಮದಲ್ಲಿ ಆನೆಗಳ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದ ಬಾಳೆ ಬೆಳೆ ಹಾಗೂ ತೆಂಗಿನ ಗಿಡಗಳನ್ನು ನಾಶ ಮಾಡಿವೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಓಂಕಾರ ಅರಣ್ಯ ವಲಯದ ಮಂಚಳ್ಳಿ ಗ್ರಾಮದ ವಿರೂಪಾಕ್ಷ  ಎಂಬುವರ ಬಾಳೆ ತೋಟಕ್ಕೆ  ಮಂಗಳವಾರ  ತಡರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು ಜಮೀನಿನಲ್ಲಿ ಬೆಳೆದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ ಮಾಡಿವೆ. ಹೀಗಾಗಿ ಅರಣ್ಯ ಇಲಾಖೆ ರೈತರಿಗೆ ಪರಿಹಾರ ನೀಡುವಂತೆ  ಸ್ಥಳೀಯರು ಒತ್ತಾಯಿಸಿದ್ದಾರೆ.