Close Menu
Ain Live News
    Facebook X (Twitter) Instagram YouTube
    Saturday, June 21
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    IPL 2025: ಟೂರ್ನಿಯಿಂದ ಮೊದಲ ತಂಡವಾಗಿ ಹೊರಬಿದ್ದ ಚೆನ್ನೈ: CSK ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್‌ ದೋನಿ

    By Author AINMay 1, 2025
    Share
    Facebook Twitter LinkedIn Pinterest Email
    Demo

    ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ (CSK vs PBKS) ನಡುವೆ ನಡೆದ 2025 ರ ಐಪಿಎಲ್​ನ (IPL 2025) 49ನೇ ಪಂದ್ಯದಲ್ಲೂ ಸಿಎಸ್​ಕೆ ತಂಡ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 190 ರನ್ ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ಪಂಜಾಬ್ ಕಿಂಗ್ಸ್ ಕೊನೆಯ ಓವರ್​ನಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.

    ಪಂಜಾಬ್ ಪರ ಪ್ರಭ್ಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕ ಇನ್ನಿಂಗ್ಸ್ ಆಡಿದರೆ, ಬೌಲಿಂಗ್​ನಲ್ಲಿ ಮಿಂಚಿದ ಚಾಹಲ್ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಪಂಜಾಬ್ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಸಿಎಸ್​ಕೆ ತಂಡ ಅಧಿಕೃತವಾಗಿ ಪ್ಲೇಆಫ್ ರೇಸ್‌ನಿಂದ ಹೊರಬಿತ್ತು.

    ಈ ಸೋಲಿನ ಬಳಿಕ ಮಾತನಾಡಿದ ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಈ ಪಂದ್ಯದಲ್ಲಿ ನಾವು ಚೆನ್ನಾಗಿ ಆಡಿದ್ದೆವು. ಅದರಲ್ಲೂ ನಮ್ಮ ಬ್ಯಾಟಿಂಗ್ ಉತ್ತಮವಾಗಿತ್ತು. ಇದೇ ಮೊದಲ ಬಾರಿಗೆ ನಾವು ಸಾಕಷ್ಟು ರನ್​ಗಳಿಸಲು ಯಶಸ್ವಿಯಾದೆವು.

    ಊಟದ ಬಳಿಕ ಪಾತ್ರೆಗಳನ್ನು ತೊಳೆಯದೇ ಹಾಗೆ ಬಿಡ್ತೀರಾ!? ನೀವು ನೋಡಲೇಬೇಕಾದ ಸ್ಟೋರಿ!

    ಆದರೆ ಇದು ಉತ್ತಮ ಸ್ಕೋರ್ ಆಗಿತ್ತೇ ಎಂದು ಕೇಳಿದರೆ, ಖಂಡಿತವಾಗಿಯೂ ಅಲ್ಲ. ಅಂತಿಮ ಹಂತದಲ್ಲಿ ಸ್ಕೋರ್​ಗಳಿಸುವಲ್ಲಿ ನಾವು ಎಡವಿದೆವು. ಕೊನೆಯ ಓವರ್​ಗಳ ವೇಳೆ ಮತ್ತಷ್ಟು ರನ್​ಗಳಿಸಿದ್ದರೆ ಉತ್ತಮ ಪೈಪೋಟಿ ನೀಡಬಹುದಿತ್ತು ಎಂದು ಧೋನಿ ಹೇಳಿದ್ದಾರೆ.

    ನಮ್ಮ ಪರ ಡೆವಾಲ್ಡ್ ಬ್ರೆವಿಸ್ ಮತ್ತು ಸ್ಯಾಮ್ ಕರನ್ ಉತ್ತಮ ಜೊತೆಯಾಟ ಪ್ರದರ್ಶಿಸಿದ್ದರು. ಆದರೆ ಕೊನೆಯ 4 ಎಸೆತಗಳಿರುವಾಗಲೇ ನಾವು ಆಲೌಟ್ ಆಗಿದ್ದು ದುಬಾರಿಯಾಯಿತು. ಅಂತಿಮ ಹಂತದಲ್ಲಿ ನಾಲ್ವರು ಬ್ಯಾಟರ್​ಗಳು ವಿಕೆಟ್ ಒಪ್ಪಿಸಿದ್ದು ಸ್ಕೋರ್ ಕಡಿಮೆಯಾಗುವಂತೆ ಮಾಡಿತು.

    ಇದಾಗ್ಯೂ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದ್ದವು. ಹೀಗಾಗಿ ಬೌಲರ್​ಗಳಿಂದ ಉತ್ತಮ ಪೈಪೋಟಿ ನಿರೀಕ್ಷಿಸಿದ್ದೆವು. ಆದರೆ ನಮ್ಮ ಫೀಲ್ಡರ್​ಗಳು ಮಾಡಿದ ತಪ್ಪಿನಿಂದಾಗಿ ಸೋಲನುಭವಿಸಬೇಕಾಯಿತು. ನಾವು ಕೈ ಬಿಟ್ಟ ಕೆಲ ಕ್ಯಾಚ್​ಗಳು ಇಡೀ ಪಂದ್ಯದ ಮೇಲೆ ಪರಿಣಾಮ ಬೀರಿತು. ಕೈಚೆಲ್ಲಿದ ಕ್ಯಾಚ್​ಗಳಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಸೋಲನುಭವಿಸಬೇಕಾಯಿತು ಎಂದು ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

     

    Demo
    Share. Facebook Twitter LinkedIn Email WhatsApp

    Related Posts

    ಚಿನ್ನಸ್ವಾಮಿ ದುರಂತ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಚುರುಕು.. ಕೆ.ಎಸ್.ಸಿ.ಎ ಖಜಾಂಚಿ- ಸೆಕ್ರೆಟ್ರಿಗೆ ನೋಟಿಸ್ ಜಾರಿ!

    June 21, 2025

    IND vs ENG Test: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ: ಹೀಗಿದೆ ನೋಡಿ ಉಭಯ ತಂಡಗಳ ಪ್ಲೇಯಿಂಗ್ XI

    June 20, 2025

    Sachin Tendulkar: ನಾನು ಕ್ಯಾಪ್ಟನ್ ಆಗಿದ್ರೆ ಪಂತ್’ಗೆ ಇದೇ ರೀತಿಯ ಎಚ್ಚರಿಕೆ ನೀಡುತ್ತಿದ್ದೆ: ಸಚಿನ್ ತೆಂಡೂಲ್ಕರ್

    June 20, 2025

    ಟೆಸ್ಟ್ ಗೆಲ್ಲಲು ಬ್ಯಾಟಿಂಗ್ ಕ್ರಮಾಂಕ ಬದಲಿಸಲು ನಾನು ಸಿದ್ಧ: ಶುಭ್​ಮನ್ ಗಿಲ್!

    June 20, 2025

    Team India: BCCI ನಾಯಕತ್ವಕ್ಕೆ ಪರಿಗಣಿಸಿದೆ.. ನನಗೆ ಅದು ಬೇಡ.. ಟೆಸ್ಟ್ ಕ್ಯಾಪ್ಟನ್ ಆಫರ್ ಬಗ್ಗೆ ಬುಮ್ರಾ ಹೇಳಿದ್ದೇನು..?

    June 19, 2025

    ಲಂಡನ್’ನಲ್ಲಿರುವ ಕೊಹ್ಲಿ ನಿವಾಸಕ್ಕೆ ಶುಭಮನ್ ಗಿಲ್, ಪಂತ್ ಭೇಟಿ.! ಯಾಕೆ ಗೊತ್ತಾ..?

    June 19, 2025

    Sophie Devine: ವಿಶ್ವಕಪ್ ನಂತರ ವಿದಾಯ.. ಏಕದಿನ ಪಂದ್ಯಗಳಿಂದ ನಿವೃತ್ತಿಯಾಗಲು ಕಿವೀಸ್ ನಾಯಕಿ ನಿರ್ಧಾರ..!

    June 18, 2025

    Smriti Mandhana: ಮಹಿಳೆಯರ ODI ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ ಸ್ಮೃತಿ ಮಂಧಾನ..!

    June 17, 2025

    Test Matches: 4 ದಿನಗಳ ಟೆಸ್ಟ್’ಗೆ ಐಸಿಸಿ ಸಿದ್ಧ: ಓವರ್’ಗಳನ್ನು 98 ಕ್ಕೆ ಹೆಚ್ಚಿಸುವ ನಿರೀಕ್ಷೆ!

    June 17, 2025

    WTC Celebration: ಟ್ರೋಫಿ ಜೊತೆ ‘ಗನ್ ಸೆಲೆಬ್ರೇಷನ್’: ಬವುಮಾ ವಿಡಿಯೋ ವೈರಲ್..!

    June 16, 2025

    ಕೊಹ್ಲಿ ನನ್ನ ಜೊತೆ ಕೆಲವು ತಿಂಗಳು ಮಾತನಾಡಲಿಲ್ಲ.. ಏಕೆಂದರೆ..! ಹೀಗೆ ಹೇಳಿದ್ದು ಯಾರು ಗೊತ್ತಾ..?

    June 16, 2025

    ಗುಂಡಿಯಲ್ಲಿ ಮೊಸಳೆ ಪತ್ತೆ: ಜನರಲ್ಲಿ ಹೆಚ್ಚಿದ ಆತಂಕ!

    June 16, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.