Close Menu
Ain Live News
    Facebook X (Twitter) Instagram YouTube
    Friday, June 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಇಂದು ಚೆನ್ನೈ-ಬೆಂಗಳೂರು ಹೈವೋಲ್ಟೇಜ್ ಮ್ಯಾಚ್: RCB ಫ್ಯಾನ್ಸ್ ಈ ವಿಚಾರ ತಿಳಿಯಲೇಬೇಕು!

    By AIN AuthorMay 3, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು;- ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬಿಗ್ ಫೈಟ್ ನಡೆಯಲಿದೆ. ಆಡಿರುವ 10 ಪಂದ್ಯದಲ್ಲಿ 7 ರಲ್ಲಿ ಗೆಲುವು ಸಾಧಿಸಿರುವ RCB ಉತ್ತಮ ಫಾರ್ಮ್ ನಲ್ಲಿ ಇದೆ. ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಸತತ ಸೋಲುಗಳಿಂದ ಕಂಗೆಟ್ಟು ಹೋಗಿದೆ.

    SSLC RESULT : ಮದ್ದೂರು ತಾಲೂಕಿಗೆ ಪೂರ್ಣ ಪ್ರಜ್ಞಾ ಶಾಲಾ ವಿದ್ಯಾರ್ಥಿಗಳದ್ದೇ ಮೇಲುಗೈ

    ಐಪಿಎಲ್​ನ ಬದ್ಧವೈರಿಗಳ ಫೈಟ್ ನೋಡೋಕೆ, ಕ್ರಿಕೆಟ್ ಜಗತ್ತೇ ಕಾಯ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಬ್ಯಾಟಲ್​ ಫೀಲ್ಡ್​ನಲ್ಲಿ ನಡೆಯಲಿರೋ ಸೌತ್ ಇಂಡಿಯನ್ ಡರ್ಬಿ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

    10 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು ಪ್ಲೇ ಆಫ್​ ಎಂಟ್ರಿಗೆ ತುದಿಗಾಲಲ್ಲಿ ನಿಂತಿರೋ ಆರ್​​ಸಿಬಿ. ಕೇವಲ 2 ಪಂದ್ಯ ಗೆದ್ದು ಟೂರ್ನಿಯಿಂದ ಹೊರ ಬಿದ್ದಿರೋ ಚೆನ್ನೈ ಸೂಪರ್​ ಕಿಂಗ್ಸ್​. ಈ ಸೀಸನ್​ನಲ್ಲಿ​ ಡಿಫರೆಂಟ್​ ​ಆಟವಾಡಿರೂ ಎರಡೂ ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿ – ಸಿಎಸ್​ಕೆ ಮುಖಾಮುಖಿಯಾಗ್ತಿದ್ದು, ಕ್ರಿಕೆಟ್​ ವಲಯದಲ್ಲಿ ಹೈವೋಲ್ಟೆಜ್​ ಕದನದ ಫೀವರ್​ ಜೋರಾಗಿದೆ

    ಈ ಸೀಸನ್​​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಜೋಷ್ ಇದೆ. ಆರ್​ಸಿಬಿ ತಂಡಕ್ಕೆ ಎದುರಾಳಿಗಳನ್ನ ಉಡಾಯಿಸೋ ತಾಖತ್ತಿದೆ. ತವರಿನ ಹೊರಗೆ ಅಜೇಯ ಓಟ ನಡೆಸ್ತಿರೋ ಆರ್​​ಸಿಬಿ, ತವರಿನಲ್ಲಿ ಸರಣಿ ಸೋಲಿಗೆ ಫುಲ್​ ಸ್ಟಾಫ್​ ಇಟ್ಟಿದೆ. ರಾಜಸ್ಥಾನ್​ ಎದುರು ಹೋಮ್​​ಗ್ರೌಂಡ್​ನಲ್ಲಿ ಮೊದಲ ಜಯ ಸಾಧಿಸಿರೋ ಬೋಲ್ಡ್​​ ಆರ್ಮಿಯಲ್ಲಿ ಗೆಲ್ಲೋ ಉತ್ಸಾಹ ಹೆಚ್ಚಿದೆ. ಹ್ಯಾಟ್ರಿಕ್ ಪಂದ್ಯ​ ಗೆದ್ದಿರುವ ಆತ್ಮವಿಶ್ವಾಸದಲ್ಲಿ ಇಂದು ಚೆನ್ನೈ ಸೂಪರ್​ಕಿಂಗ್ಸ್ ವಿರುದ್ಧ ಕಣಕ್ಕಿಳಿತಿರೋ ಆರ್​​ಸಿಬಿ ಗೆಲುವಿಗೆ ಪಣತೊಟ್ಟಿದೆ.

    ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಫುಲ್​ ಕಾನ್ಫಿಡೆಂಟ್​ ಆಗಿದೆ. ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್​ ಮೂರೂ ವಿಭಾಗದಲ್ಲಿ ಫಸ್ಟ್​ ಕ್ಲಾಸ್​ ಪರ್ಫಾಮೆನ್ಸ್​ ನೀಡ್ತಿದೆ. ಪಂದ್ಯದಿಂದ ಪಂದ್ಯಕ್ಕೆ ತಂಡದಲ್ಲಿ ಹೊಸ ಹೊಸ ಆಟಗಾರರು ಮ್ಯಾಚ್ ವಿನ್ನರ್​ಗಳಾಗಿ ಹೊರ ಹೊಮ್ಮುತ್ತಿದ್ದಾರೆ. ಕೊಹ್ಲಿ, ಫಿಲ್​ ಸಾಲ್ಟ್​, ಪಡಿಕ್ಕಲ್, ಹೇಜಲ್​ವುಡ್​, ಕೃನಾಲ್​ ಪಾಂಡ್ಯ, ಸುಯಶ್​ ಶರ್ಮಾ ಕನ್ಸಿಸ್ಟೆನ್ಸಿ ಕಾಯ್ದುಕೊಂಡಿದ್ದಾರೆ. ಕಳೆದ ಮೂರೂ ಪಂದ್ಯ ಗೆದ್ದು ಬೀಗಿರೋ ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಡೋ ತವಕದಲ್ಲಿದೆ.
    ಕಳೆದುಕೊಳ್ಳೋದು ಏನೂ ಇಲ್ಲ.

    ಈ ಸೀಸನ್​ನಲ್ಲಿ ಅತ್ಯಂತ ಹೀನಾಯ ಪರ್ಫಾಮೆನ್ಸ್​ ನೀಡಿರೋ ಚೆನ್ನೈ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಮೊದಲ ತಂಡವಾಗಿ ಸೀಸನ್​ನಿಂದ ಔಟ್​ ಆಗಿರೋ ಚೆನ್ನೈಗೆ ಈಗ ಕಳೆದುಕೊಳ್ಳೋದು ಏನೂ ಇಲ್ಲ. ಆರ್​​ಸಿಬಿಗೆ ಡ್ಯಾಮೇಜ್​ ಮಾಡೋ ಅವಕಾಶವಿದೆ.

    Demo
    Share. Facebook Twitter LinkedIn Email WhatsApp

    Related Posts

    Rain News: ಕರ್ನಾಟಕದಲ್ಲಿ ನಾಳೆಯಿಂದ ಭಾರೀ ಮಳೆ: ಈ 9 ಜಿಲ್ಲೆಗಳಿಗೆ ರೆಡ್ ಅಲರ್ಟ್​!

    June 12, 2025

    ಅಹಮದಾಬಾದ್ ವಿಮಾನ ದುರಂತ: ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಟಾಟಾ ಗ್ರೂಪ್‌!

    June 12, 2025

    ವಿಮಾನ ದುರಂತ: ಕೊಹ್ಲಿ, ರೋಹಿತ್ ಸೇರಿ ಹಲವು ಕ್ರಿಕೆಟಿಗರಿಂದ ಸಂತಾಪ!

    June 12, 2025

    ನೀವು ಯಾವಾಗಲೂ ಮೊಬೈಲ್, ಟಿವಿ ಜಾಸ್ತಿ ನೋಡುತ್ತೀರಾ? ಹಾಗಿದ್ರೆ ನಿಮ್ಮ ಲೈಂಗಿಕ ಜೀವನ ಕಷ್ಟ..ಕಷ್ಟ!

    June 12, 2025

    ಕಾಲ್ತುಳಿತ ಕೇಸ್ : ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ ನಿಖಿಲ್ ಸೋಸಲೆ​​ ಸೇರಿ ನಾಲ್ವರಿಗೆ ಜಾಮೀನು!

    June 12, 2025

    ನಿರುದ್ಯೋಗ ನಿವಾರಣೆಗೆ ಕೃಷಿ ಕ್ಷೇತ್ರ ಆಸರೆ: ಸಚಿವ ಎನ್.ಚಲುವರಾಯಸ್ವಾಮಿ.

    June 12, 2025

    ಗ್ರಾಮೀಣ-ನಗರದ ಮಕ್ಕಳಿಗೆ ವಿಜ್ಞಾನದ ಪರಿಚಯ: ರಾಜ್ಯದಲ್ಲಿ ಎರಡು ನಕ್ಷತ್ರಮಂದಿರ ನಿರ್ಮಾಣ: ಹುಲಿಕಲ್‌ ನಟರಾಜ್‌

    June 12, 2025

    ಪೈಲಟ್ ‘ಮೇಡೇ ಮೇಡ್’ ಎನ್ನುತ್ತಿದ್ದಂತೆ ಪತನಗೊಂಡ ವಿಮಾನ..! ಮುಂದೆ ಆಗಿದ್ದೇ ಘೋರ ದುರಂತ

    June 12, 2025

    BREAKING.. ಅಹ್ಮದಾಬಾದ್ ವಿಮಾನ ದುರಂತ: ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಾವು!

    June 12, 2025

    ಯಮ ವಿಮಾನ: ಅಹಮದಾಬಾದ್‌ನಲ್ಲಿ ವಿಮಾನ ಪತನಕ್ಕೆ ಹಾರಿಹೋಯ್ತು 242 ಪ್ರಯಾಣಿಕರ ಪ್ರಾಣಪಕ್ಷಿ!

    June 12, 2025

    ಇದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಳಿಗೆ: ವಿಮಾನ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

    June 12, 2025

    Ahmedabad Plane Crash: ಏರ್ ಇಂಡಿಯಾ ವಿಮಾನ ದುರಂತ: ಮೃತರ ಸಂಖ್ಯೆ 133ಕ್ಕೆ ಏರಿಕೆ..!

    June 12, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.