ಬೆಂಗಳೂರು: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡು ಪೊಲೀಸ್ ಅಧಿಕಾರಿ ಮೇಲೆ ಸಿಟ್ಟಾಗಿ ಅವರ ಮೇಲೆ ಕೈಮಾಡಲು ಮುಂದಾದ ಘಟನೆ ನಡೆದಿದೆ. ಇನ್ನೂ ವಿಚಾರವಾಗಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಯಾವನಲೇ ಎಸ್ಪಿ ಅಂತ ಕರೆದಾಗ ಎಎಸ್‌ಪಿ ನಾರಾಯಣ್ ಅನ್ನೋರು ಬರುತ್ತಾರೆ. ಸಿಎಂ ಕರೆದು ಕಪಾಳಮೋಕ್ಷ ಮಾಡಲು ಮುಂದಾಗುತ್ತಾರೆ. ಆಗ ಹೆಚ್ಚುವರಿ ಎಸ್‌ಪಿ ಒಂದು ಹೆಜ್ಜೆ ಹಿಂದೆ ಹೋಗುತ್ತಾರೆ. ಇಲ್ಲದಿದ್ರೆ ಅವರಿಗೆ ಕಪಾಳಮೋಕ್ಷ ಆಗುತ್ತಿತ್ತು. ಪೊಲೀಸರು ಇವರ ಗುಲಾಮರು ಅಂದುಕೊಂಡಿದ್ದಾರಾ?
ಮಾವಿನಹಣ್ಣನ್ನು ರಾತ್ರಿ ವೇಳೆ ತಿಂತೀರಾ!? ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!
ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಘೇರಾವ್ ಹಾಕುತ್ತಾರೆ ಅನ್ನೋದೇ ಗೊತ್ತಿಲ್ಲ. ಇದು ಇಂಟೆಲಿಜೆನ್ಸ್ ಫೇಲ್ಯೂರ್ ಅಲ್ವಾ? ಕದ್ದು ಮುಚ್ಚಿ ಬಂದ ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ಗುಂಡು ಹಾರಿಸಿದರು. ಅದನ್ನ ಇಂಟಲಿಜೆನ್ಸ್ ಫೇಲ್ಯೂರ್, ಮೋದಿ ಫೇಲ್ಯೂರ್ ಎನ್ನುತ್ತಾರೆ. ಮುತ್ತಿಗೆಯಂತಹ ಸಣ್ಣ ವಿಷಯವೇ ನಿಮಗೆ ಗೊತ್ತಾಗಿಲ್ಲ. ಇನ್ನು ಜನರನ್ನು ಕೊಲ್ಲೋ ವಿಚಾರ ಹೇಗೆ ಗೊತ್ತಾಗಲಿದೆ ಎಂದು ಹರಿಹಾಯ್ದರು.
ಬೆಳಗಾವಿಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಪಕ್ಷದ ಕಾರ್ಯಕ್ರಮ ಮಾಡಲು ಹೋಗಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ದೇಶದ ವಿರುದ್ಧವಾಗಿ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಕಪ್ಪು ಬಟ್ಟೆ ತೋರಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಯಾರೂ ಮಚ್ಚು, ದೊಣ್ಣೆ, ಎಕೆ-47 ತೆಗೆದುಕೊಂಡು ಹೋಗಿಲ್ಲ. ಪೊಲೀಸರು ಬಂಧನ ಮಾಡಿದ ಬಳಿಕ, ಕಾಂಗ್ರೆಸ್ ಗೂಂಡಾಗಳು ಅವರ ಮೇಲೆ ಮುಗಿಬಿದ್ದಿದ್ದಾರೆ. ಇದು ಈ ಗೂಂಡಾ ಸರ್ಕಾರದ ವರ್ತನೆ ಎಂದು ವಾಗ್ದಾಳಿ ನಡೆಸಿದರು.