Close Menu
Ain Live News
    Facebook X (Twitter) Instagram YouTube
    Sunday, June 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮಗಿದು ಗೊತ್ತಾ!? ಅತಿಯಾಗಿ ಮೊಬೈಲ್, ಲ್ಯಾಪ್‌ಟಾಪ್‌ ಬಳಸೋದ್ರಿಂದ ಮೂಳೆಗಳಿಗೆ ಮಾರಕವಂತೆ!

    By AIN AuthorMay 2, 2025
    Share
    Facebook Twitter LinkedIn Pinterest Email
    Demo

    ಇಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿದೆ. ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌, ಕಂಪ್ಯೂಟರ್ ಬಳಕೆ ಹೆಚ್ಚಿದೆ. ಮಕ್ಕಳು, ವಯಸ್ಕರರು, ವೃದ್ಧರು ಹೀಗೆ ಎಲ್ಲಾ ವಯೋಮಾನದವರು ಮೊಬೈಲ್ ಗೆ ಅಂಟಿಕೊಂಡಿದ್ದಾರೆ. ಇವು ಜೀವನದ ಅವಿಭಾಜ್ಯ ಅಂಗಗಳಾಗಿವೆ. 100 ಪ್ರತಿಶತ ಜನರು ಈ ಗ್ಯಾಜೆಟ್‌ಗಳ ಮೇಲೆ ಅವಲಂಬಿತರಾಗಿದ್ದಾರೆ.

    ಪ್ರತಿಯೊಂದು ವರ್ಗದವರು ಮೊಬೈಲ್, ಲ್ಯಾಪ್‌ಟಾಪ್‌ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಆದರೆ ಹೀಗೆ ದೀರ್ಘಕಾಲ ಪರದೆಯ ಮುಂದೆ ಕುಳಿತುಕೊಳ್ಳುವುದು ಹೆಚ್ಚು ಕಾಯಿಲೆಗಳ ಉತ್ಪತ್ತಿಗೂ ಕಾರಣವಾಗುತ್ತಿದೆ. ನಿದ್ರಾಹೀನತೆ, ಫ್ಯಾಟ್, ಹೊಟ್ಟೆಯ ಸುತ್ತಳತೆ ಹೆಚ್ಚಳ, ಚಟುವಟಿಕೆ ಇಲ್ಲದ ದೇಹ, ಜೀರ್ಣಕ್ರಿಯೆ ಸಮಸ್ಯೆ ಹೀಗೆ ಹಲವು ಕಾಯಿಲೆಗಳು ಸುತ್ತುವರೆಯುತ್ತಿವೆ.

    ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಎಂದ ಸೋನು ನಿಗಮ್..ಕೆಚ್ಚೆದೆಯ ಕನ್ನಡಿಗರನ್ನು ಕೆಣಕಿದ ಗಾಯಕ

    ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಕೆಯಿಂದಾಗಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಬರುವುದು. ಅದರಲ್ಲೂ ಕೆಲವರಲ್ಲಿ ಬೆನ್ನು ನೋವು, ಸೊಂಟ ನೋವು ಹಾಗೂ ಕುತ್ತಿಗೆ ನೋವಿನ ಸಮಸ್ಯೆಗಳು ಬರಬಹುದು. ಇದಕ್ಕೆ ಮುಖ್ಯ ಕಾರಣ ನಾವು ಬಳಕೆ ಮಾಡುತ್ತಿರುವ ಮೊಬೈಲ್ ಹಾಗೂ ಲ್ಯಾಪ್ ಟಾಪ್. ಇಂತಹ ನೋವುಗಳನ್ನು ಕಡೆಗಣಿಸಿದರೆ, ಆಗ ಇದು ತೀವ್ರವಾಗಿ ಮುಂದೆ ದೊಡ್ಡ ಸಮಸ್ಯೆಗೂ ಕಾರಣವಾಗಬಹುದು. ಹೀಗಾಗಿ ಸರಿಯಾದ ಸಮಯದಲ್ಲಿ ಇದನ್ನು ಪತ್ತೆ ಮಾಡಿಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಇಂತಹ ನೋವು ಜೀವನವನ್ನೇ ಹಾಳು ಮಾಡಿಬಿಡಬಹುದು. ಅತಿಯಾಗಿ ಸ್ಕ್ರೀನ್ ಟೈಂನಲ್ಲಿದ್ದರೆ ಆಗ ಕಾಡುವ ಐದು ಮೂಳೆಯ ಸಮಸ್ಯೆಗಳ ಬಗ್ಗೆ ತಿಳಿದು, ಎಚ್ಚರ ವಹಿಸಿಕೊಳ್ಳಿ

    ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಬಳಸುವವರಲ್ಲಿ ಇದು ಅತಿಯಾಗಿ ಕಾಡುವಂತಹ ಸಮಸ್ಯೆ. ಯಾಕೆಂದರೆ ಇದರಿಂದ ಮೊಣಕೈ ಮಧ್ಯದಲ್ಲಿ ಇರುವ ನರಗಳ ಮೇಲೆ ಒತ್ತಡ ಬೀಳುವುದು. ಕೀಬೋರ್ಡ್‌, ಮೊಬೈಲ್ ನಲ್ಲಿ ಅತಿಯಾಗಿ ಬೆರಳುಗಳನ್ನು ಬಳಕೆ ಮಾಡಿದರೆ ಆಗ ಇದರಿಂದ ನರಗಳು ಮರಗಟ್ಟುವುದು ಅಥವಾ ಝಮ್ಮೆನಿಸುವಿಕೆ ಉಟಾಗಬಹುದು. ಇಷ್ಟು ಮಾತ್ರವಲ್ಲದೆ, ಸ್ನಾಯುಗಳು ದುರ್ಬಲಗೊಂಡು ಯಾವುದೇ ವಸ್ತುಗಳನ್ನು ಹಿಡಿಯುವುದು ಅಥವಾ ಎತ್ತುವುದಕ್ಕೆ ಸಾಧ್ಯವಾಗದು. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಆಗ ಇದರಿಂದ ಶಾಶ್ವತ ವೈಕಲ್ಯ ಉಂಟಾಗುವ ಸಾಧ್ಯತೆಯು ಇರುವುದು.

    ಲ್ಯಾಪ್ ಟಾಪ್ ಅಥವಾ ಮೊಬೈಲ್ ನ್ನು ಹಲವಾರು ಗಂಟೆಗಳ ಕಾಲ ನೋಡಿದಾಗ ಈ ಕುತ್ತಿಗೆಯಲ್ಲಿ ಕಾಣಿಸುವಂತಹ ನೋವು ಅಥವಾ ಅಹಿತಕರವನ್ನು ಟೆಕ್ ನೆಕ್ ಎಂದು ಕರೆಯಲಾಗುತ್ತದೆ. ತಲೆಯನ್ನು ಮುಂದಕ್ಕೆ ತಂದಾಗ ಅದರಿಂದ ಕುತ್ತಿಗೆ ಭಾಗದ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದು. ಕುತ್ತಿಗೆಯನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ತಿರುಗಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ ಹಾಗೂ ನೋವು ಕೂಡ ಕಂಡುಬರಬಹುದು. ಭುಜ ಬಿಗಿತ್ವ, ತಲೆಬುರುಡೆಯ ಮೂಲದಲ್ಲಿ ನೋವು ಕಾಣಿಸಿಕೊಂಡರೆ, ಆಗ ಇದನ್ನು ಕಡೆಗಣಿಸಬಾರದು.

    ದೀರ್ಘಕಾಲ ತನಕ ಕೆಟ್ಟ ಭಂಗಿಯಲ್ಲಿ ಕುಳಿತಿಕೊಂಡರೆ ಆಗ ಇದರಿಂದ ಬೆನ್ನಿನ ಮೂಳೆಗಳ ಮೇಲೆ ಪರಿಣಾಮ ಬೀರುವುದು. ಇದರಿಂದ ಮೂಳೆಗಳು ದುರ್ಬಲವಾಗುವುದು ಮಾತ್ರವಲ್ಲದೆ, ಮೂಳೆಗಳಲ್ಲಿ ಬಿರುಕು ಅಥವಾ ಗಾಯವಾಗಬಹುದು. ಯಾವುದೇ ವಿಶ್ರಾಂತಿ ತೆಗೆದುಕೊಳ್ಳದೆ ದಿನವಿಡಿ ಮೊಬೈಲ್ ಅಥವಾ ಲ್ಯಾಪ್‌ ಟಾಪ್ ಬಳಸುತ್ತಿದ್ದರೆ, ಆಗ ಇದರಿಂದ ಬೆನ್ನಿನಲ್ಲಿ ಇಂತಹ ಸಮಸ್ಯೆಯು ಬರಬಹುದು

    ದಿನವಿಡಿ ಕೀಬೋರ್ಡ್ ಅಥವಾ ಮೌಸ್ ನ್ನು ಬಳಸಿದರೆ ಆಗ ಇದರಿಂದ ನೋವು ಮಾತ್ರವಲ್ಲದೆ, ಮೊಣಕೈ ಮತ್ತು ಕೈಯಲ್ಲಿ ಉರಿಯೂತ ಕೂಡ ಉಂಟಾಗಬಹುದು. ಇದರ ಪರಿಣಾಮ ಟೆನಿಸ್ ಎಲ್ಬೊ ಅಥವಾ ಬೆರಳುಗಳು ಅಥವಾ ಮಣಿಕಟ್ಟಿನ ಸೈನೋವಿಟಿಸ್ ಅನ್ನು ಪ್ರಚೋದಿಸುತ್ತದೆ. ಕೆಲವೇ ಸಮಯದಲ್ಲಿ ಸರಿಹೋಗುವಂತಹ ನೋವು ಎಂದು ಇದನ್ನು ಕಡೆಗಣಿಸ ಲಾಗುತ್ತದೆ. ಇದಕ್ಕೆ ಚಿಕಿತ್ಸೆ ವಿಳಂಬ ಮಾಡಿದರೆ ಆಗ ಇದರಿಂದ ಸಮಸ್ಯೆಯು ಇನ್ನಷ್ಟು ಕೆಡಬಹುದು.

    ಸ್ನಾಯು, ನರಗಳ ಮೇಲೆ ಅತಿಯಾಗಿ ಒತ್ತಡ ಬಿದ್ದರೆ ಆಗ ಇದರಿಂದ ಸಮಸ್ಯೆಯು ಉಲ್ಬಣಿಸಬಹುದು. ಮೃದು ಅಂಗಾಂಶಗಳ ಮೇಲೆ ಇದು ಗಣನೀಯವಾಗಿ ಪರಿಣಾಮ ಬೀರಬಹುದು ಹಾಗೂ ಇದರಿಂದ ಮೂಳೆಗಳ ಸಮಸ್ಯೆಯು ಬರುವುದು. ದೀರ್ಘಕಾಲ ತನಕ ಇದನ್ನು ಕಡೆಗಣಿಸಿದರೆ, ಆಗ ಇದರಿಂದ ಸ್ಕೋಲಿಯೋಸಿಸ್ ಅಥವಾ ಕೈಫೋಸಿಸ್ ಸಮಸ್ಯೆಯು ಕಾಡಬಹುದು.

    Demo
    Share. Facebook Twitter LinkedIn Email WhatsApp

    Related Posts

    ಎತ್ತಿನಹೊಳೆ ಯೋಜನೆಯಲ್ಲಿ ಮೊದಲು ಕುಡಿಯುವ ನೀರು ಪೂರೈಕೆ, ನಂತರ ಕೆರೆಗಳಿಗೆ ನೀರು: ಡಿಸಿಎಂ ಡಿ.ಕೆ. ಶಿವಕುಮಾರ್

    June 21, 2025

    ವಂಚನೆ ಆರೋಪ: ಬೆಂಗಳೂರಿನ ಸಂಧ್ಯಾ ಪವಿತ್ರ ವಿರುದ್ಧ FIR!

    June 21, 2025

    ಐಟಿ ಕ್ಷೇತ್ರದ ಹುದ್ದೆಗಳನ್ನ ಎಐ ಕಿತ್ತುಕೊಳ್ಳುತ್ತಾ!? ಇನ್ಫೋಸಿಸ್ ದಿಗ್ಗಜ ಎನ್‌.ಆರ್ ನಾರಾಯಣಮೂರ್ತಿ ಏನಂದ್ರೂ!?

    June 21, 2025

    ಮಾವು ಮಾರುಕಟ್ಟೆ ಮಧ್ಯಪ್ರವೇಶ : ಬೆಲೆ ವ್ಯತ್ಯಾಸ ಪಾವತಿಗೆ ಸರ್ಕಾರದ ಒಪ್ಪಿಗೆ ಎನ್. ಚಲುವರಾಯಸ್ವಾಮಿ!

    June 21, 2025

    19 ವರ್ಷದ ಯುವಕ ಪಾರ್ಕ್ ನಲ್ಲಿ ನೇಣಿಗೆ ಶರಣು: ಸೂಸೈಡ್ ಗೆ ಕಾರಣ!?

    June 21, 2025

    ಜಲಮಂಡಳಿಯ ವತಿಯಿಂದ ತ್ವರಿತವಾಗಿ ಹೊಸ ಚರಂಡಿ ನಿರ್ಮಿಸಲು ಸೂಚನೆ: ಸ್ನೇಹಲ್

    June 21, 2025

    ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಿಜೆಪಿಗೆ ಸಹಿಸಲಾಗುತ್ತಿಲ್ಲ: ಈಶ್ವರ್ ಖಂಡ್ರೆ!

    June 21, 2025

    ರಾತ್ರಿ ಮಲಗುವಾಗ ಈ ಲಕ್ಷಣ ಕಂಡುಬರುತ್ತಾ!? ಹಾಗಿದ್ರೆ ಇದು ಕಿಡ್ನಿ ಅಪಾಯದ ಮುನ್ಸೂಚನೆ!

    June 21, 2025

    ಇಂದು ದೇಶಾದ್ಯಂತ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪರಿಷತ್ ಶಾಸಕ ಟಿ. ಎ.ಶರವಣ ಭಾಗಿ

    June 21, 2025

    BJP ರಾಜ್ಯಾಧ್ಯಕ್ಷನಾಗಿ ಒಂದೂಕಾಲು ವರ್ಷ ಶ್ರದ್ಧೆಯಿಂದ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದು ವಿಜಯೇಂದ್ರ ಹೇಳಿದ್ಯಾಕೆ..?

    June 21, 2025

    BSY ಮೇಲೆ ಈಶ್ವರಪ್ಪಗೆ ಸಾಪ್ಟ್ ಕಾರ್ನರ್, BJPಗೆ ವಾಪಸ್ ಆಗ್ತಾರಾ ಮಾಜಿ ಸಚಿವ..!?

    June 21, 2025

    ನಾನು ದ್ವೇಷ ಭಾಷಣ ಮಾಡಿದ್ರು ಸಹ ನನಗೂ ನೋಟೀಸ್ ಜಾರಿ ಆಗುತ್ತದೆ: ಸಚಿವ ದಿನೇಶ್ ಗುಂಡೂರಾವ್

    June 21, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.