Close Menu
Ain Live News
    Facebook X (Twitter) Instagram YouTube
    Friday, June 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನೀವು ಹೆಚ್ಚಾಗಿ ಬೆಳ್ಳುಳ್ಳಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ ಅಂತೆ!

    By AIN AuthorMay 1, 2025
    Share
    Facebook Twitter LinkedIn Pinterest Email
    Demo

    ನಮ್ಮಲ್ಲಿರುವ ಅನೇಕ ತರಕಾರಿಗಳು, ಮಸಾಲೆ ಪದಾರ್ಥಗಳು ಬರೀ ನಮ್ಮ ಅಡುಗೆಗೆ ರುಚಿ ಕೊಡುವುದಲ್ಲದೆ, ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಸಹ ಹೊಂದಿದೆ. ಅದರಲ್ಲಿಯೂ ಶುಂಠಿ, ಬೆಳ್ಳುಳ್ಳಿ ಅಂತಹ ಆಹಾರ ಪದಾರ್ಥಗಳು ಅನೇಕ ಶತಮಾನಗಳಿಂದ ಅಡುಗೆಮನೆಯ ಭಾಗವಾಗಿದೆ. ಅಷ್ಟೇ ಅಲ್ಲದೆ, ಈ ಮೂಲಿಕೆಯು ಅದರ ಬ್ಯಾಕ್ಟೀರಿಯಾ ಮತ್ತು ನಂಜುನಿರೋಧಕ ಗುಣದಿಂದಾಗಿ ಗುಣಪಡಿಸುವ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ.

    ನಟಿ ಲಾಸ್ಯ ನಾಗರಾಜ್‌ ಕುಟುಂಬ ಕಲಹ.. ತಾಯಿಯ ಮೇಲೆ ಸ್ವಂತ ತಂಗಿಯಿಂದ ದೈಹಿಕ ಹಲ್ಲೆ!

    ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಹಸಿಯಾಗಿ ತಿನ್ನಲು ಯಾರೂ ಕೂಡ ಇಷ್ಟಪಡುವುದಿಲ್ಲ. ಏಕೆಂದರೆ ಇದರ ಗಾಢವಾದ ವಾಸನೆ ಯಾರಿಗೂ ಇಷ್ಟವಾಗುವುದಿಲ್ಲ. ಅದೂ ಅಲ್ಲದೆ ಬೆಳ್ಳುಳ್ಳಿಯನ್ನು ಹೆಚ್ಚಾಗಿ ತಿನ್ನಬಾರದು ಎಂದು ಹೇಳುತ್ತಾರೆ. ಇದು ಹೊಟ್ಟೆಯಲ್ಲಿ ಅಲ್ಸರ್ ಸೇರಿದಂತೆ ಇನ್ನು ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ತಂದುಕೊಡುತ್ತದೆ. ಏನೆಲ್ಲಾ ಆರೋಗ್ಯ ತೊಂದರೆಗಳು ಮಿತಿಮೀರಿದ ಬೆಳ್ಳುಳ್ಳಿ ಸೇವನೆಯಿಂದ ಉಂಟಾಗುತ್ತವೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

    ಹಲವು ಬಗೆಯ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ಬೆಳ್ಳುಳ್ಳಿಯ ಪಾತ್ರ ಪ್ರಮುಖವಾಗಿರುತ್ತದೆ. ಹಾಗೆಂದು ಅತಿಯಾಗಿ ತಿನ್ನಲು ಹೋದರೆ ಬೆಳ್ಳುಳ್ಳಿಯಿಂದ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಬೆಳ್ಳುಳ್ಳಿಯಲ್ಲಿ ಫ್ರಕ್ಟಾನ್ ಎನ್ನುವ ಸಂಯುಕ್ತ ಇರಲಿದ್ದು, ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಮತ್ತು ನಮ್ಮ ಕರುಳಿನ ಆರೋಗ್ಯಕ್ಕೆ ಹೆಚ್ಚು ತೊಂದರೆ ಉಂಟು ಮಾಡುತ್ತದೆ. ಮಿತಿಮೀರಿದ ಪ್ರಮಾಣದಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ನಮ್ಮ ಜೀರ್ಣನಾಳ ತೊಂದರೆಗೊಳಗಾಗುವುದು ಮಾತ್ರವಲ್ಲದೆ ಹೊಟ್ಟೆಯ ಒಳ ಪದರ ಹಾಳಾಗುತ್ತದೆ. ಇದು ಎದೆಯುರಿ, ಹೊಟ್ಟೆ ಉಬ್ಬರ, ವಾಕರಿಕೆ, ವಾಂತಿ ಮತ್ತು ಹೊಟ್ಟೆಯಲ್ಲಿ ಅಲ್ಸರ್ ಉಂಟಾಗುವ ಹಾಗೆ ಮಾಡುತ್ತದೆ.

    ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಬಾಯಲ್ಲಿ ಅದೇ ವಾಸನೆ ಯಾವಾಗಲೂ ಇರುತ್ತದೆ. ಬ್ರಷ್ ಮಾಡಿದಾಗ ಕೂಡ ಹೋಗುವುದಿಲ್ಲ. ಏಕೆಂದರೆ ಬೆಳ್ಳುಳ್ಳಿಯಲ್ಲಿ ಸಲ್ಫರ್ ಪ್ರಮಾಣ ಇರಲಿದ್ದು, ಜೀರ್ಣವಾದ ನಂತರದಲ್ಲಿ ನಮ್ಮ ರಕ್ತದ ಹರಿವಿಗೆ ಇದು ಬಿಡುಗಡೆಯಾಗುತ್ತದೆ. ಇದು ನಮ್ಮ ಶ್ವಾಸಕೋಶಕ್ಕೆ ಮತ್ತು ಗಂಟಲಿಗೆ ಸೇರಿದಂತೆ ಬಾಯಲ್ಲಿ ಕೂಡ ವಾಸನೆ ಕಂಡುಬರುವಂತೆ ಮಾಡುತ್ತದೆ. ಅಕ್ಕ ಪಕ್ಕದವರಿಗೆ ಇದು ಹೆಚ್ಚು ಕಿರಿಕಿರಿ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

    ಕೆಲವರಿಗೆ ಬೆಳ್ಳುಳ್ಳಿ ತಿಂದರೆ ಅಲರ್ಜಿಯಾಗುತ್ತದೆ ಎಂದು ಕೇಳಿದ್ದೇವೆ. ಹಾಗಾಗಿ ಇದೊಂದು ಹಾನಿಕಾರಕ ಆಹಾರ ಎಂದು ಹಲವರು ನಂಬಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಮೈ ಕೈ ಚರ್ಮದ ಮೇಲೆ ದದ್ದುಗಳು, ಕೆರೆತ ಕಂಡುಬರುತ್ತದೆ. ಇನ್ನು ಕೆಲವರಿಗೆ ಅನಾಫಿಲಾಕ್ಸಿಸ್ ಎನ್ನುವ ಭಯಾನಕ ಆರೋಗ್ಯ ಸಮಸ್ಯೆ ಕೂಡ ಉಂಟಾಗಬಹುದು. ಹಲವರಲ್ಲಿ ಉಸಿರಾಟ ತೊಂದರೆಗೆ ಬೆಳ್ಳುಳ್ಳಿ ಕಾರಣವಾಗುತ್ತದೆ. ಹೀಗಾಗಿ ಬೆಳ್ಳುಳ್ಳಿಗೆ ಅಲರ್ಜಿ ಎನ್ನುವವರು ಬೆಳ್ಳುಳ್ಳಿಯನ್ನು ಆಹಾರ ಯಾವ ಪ್ರಮಾಣದಲ್ಲಿ ಒಳಗೊಂಡಿದೆ ಎನ್ನುವುದನ್ನು ತಿಳಿದುಕೊಂಡು ಸೇವಿಸುವುದು ಒಳ್ಳೆಯದು

    ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ರಕ್ತಸ್ರಾವ ಕೂಡ ಕೆಲವರಿಗೆ ಅಧಿಕವಾಗುತ್ತದೆ. ಈಗಾಗಲೇ ರಕ್ತವನ್ನು ತೆಳ್ಳಗೆ ಮಾಡುವಂತಹ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರಿಗೆ ಅಥವಾ ಸರ್ಜರಿಗೆ ಒಳಗಾಗಿರುವವರಿಗೆ ಬೆಳ್ಳುಳ್ಳಿ ಮತ್ತಷ್ಟು ತೊಂದರೆದಾಯಕವಾಗ ಬಹುದು. ಇದು ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ತಡೆಯುವ ಸಾಧ್ಯತೆ ಇರುತ್ತದೆ. ಏಕೆಂದರೆ ಸರ್ಜರಿಗೆ ಮುಂಚೆ ಬೆಳ್ಳುಳ್ಳಿ ಸೇವನೆ ಮಾಡಬಾರದು ಎಂದು ಹೇಳುತ್ತಾರೆ.

    ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ರಕ್ತದ ಒತ್ತಡ ಸಹಜವಾಗಿ ಕಡಿಮೆಯಾಗುತ್ತದೆ. ಇದರಲ್ಲಿ ಸಲ್ಫರ್ ಪ್ರಮಾಣ ಅತಿಯಾಗಿ ಕಂಡುಬರುವುದು ಇದಕ್ಕೆ ಕಾರಣ. ನಿರಂತರವಾಗಿ ರಕ್ತದ ಒತ್ತಡ ಕಡಿಮೆಯಾಗುತ್ತಾ ಹೋದರೆ ಅದರಿಂದ ತಲೆ ಸುತ್ತು, ಕಣ್ಣುಗಳು ಮಂಜಾಗುವುದು, ತಲೆನೋವು ಕಂಡು ಬರುತ್ತದೆ

    ತುಂಬಾ ಸೂಕ್ಷ್ಮವಾದ ಚರ್ಮ ಹೊಂದಿರುವವರಿಗೆ ಬೆಳ್ಳುಳ್ಳಿ ಆಗಿ ಬರುವುದಿಲ್ಲ. ಚರ್ಮದ ಮೇಲೆ ಬೆಳ್ಳುಳ್ಳಿಯ ಪೇಸ್ಟ್ ಅನ್ವಯಿಸುವುದರಿಂದ ಚರ್ಮದ ಕಿರಿಕಿರಿ ಉಂಟಾಗುವ ಸಹಿತ, ಉರಿ, ನೋವು ಕೂಡ ಕಂಡುಬರುತ್ತದೆ. ಹೀಗಾಗಿ ಹಸಿ ಬೆಳ್ಳುಳ್ಳಿಯನ್ನು ತಿನ್ನುವ ಬದಲು ಬೇಯಿಸಿ ತಿನ್ನುವುದು ಒಳ್ಳೆಯದು. ಇದು ಬೆಳ್ಳುಳ್ಳಿಯ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುವಲ್ಲಿ ಕೆಲಸ ಮಾಡುತ್ತದೆ ಮತ್ತು ಗ್ಯಾಸ್ಟ್ರಿಕ್ ತೊಂದರೆಗಳನ್ನು ದೂರ ಮಾಡುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    ವಸತಿ ಯೋಜನೆಗಳಲ್ಲಿ ಮುಸ್ಲಿಂರಿಗೆ ಮೀಸಲಾತಿ: ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರಹ್ಲಾದ್ ಜೋಶಿ!

    June 20, 2025

    ನಿಮಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ!? ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ಸೇವಿಸಿ!

    June 20, 2025

    ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದೆಯೇ..? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ.!

    June 20, 2025

    ನಿತ್ಯ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರು ಕುಡಿದ್ರೆ ಲಿವರ್ ಕ್ಲೀನ್ ಆಗುತ್ತಾ? ಇಲ್ಲಿದೆ ಉತ್ತರ!

    June 19, 2025

    ನೀವು ಮಾಡಿದ ಚಪಾತಿ ಹೂವಿನಂತಾಗಬೇಕಾ!? ಹಾಗಿದ್ರೆ ಹಿಟ್ಟು ಕಲಿಸುವಾಗ ಈ ಟಿಪ್ಸ್ ಫಾಲೋ ಮಾಡಿ!

    June 19, 2025

    Lipstick ಹಚ್ಚದೇ ನಿಮ್ಮ ತುಟಿ ನ್ಯಾಚುಲರ್ ಆಗಿ ಕೆಂಪಾಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು

    June 19, 2025

    Gruhalakshmi Scheme: ಗೃಹಲಕ್ಷ್ಮಿ ಹಣ ನಿಮಗೆ ಬಂದಿಲ್ಲವೇ..? ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು..?

    June 19, 2025

    Chicken Health Care: ಚಿಕನ್ ತಿಂದ್ರೆ ಬರುತ್ತಾ ಕ್ಯಾನ್ಸರ್? ಈ ಬಗ್ಗೆ ವೈದ್ಯರು ಹೇಳೋದೇನು..?

    June 19, 2025

    ಡಯೆಟ್ ಗೆ ಹೇಳಿ ಗುಡ್ ಬಾಯ್: ಬೆಳಗ್ಗೆ ದೋಸೆ-ಇಡ್ಲಿ ತಿಂದೇ ಸ್ಲಿಮ್ ಆಗಬಹುದು! ಹೇಗೆ ಅಂತೀರಾ?

    June 19, 2025

    ಇದು ಹೆಣ್ಮಕ್ಕಳು ತಿಳಿಯಲೇಬೇಕಾದ ವಿಚಾರ: ಈ ವಸ್ತುಗಳನ್ನು ಎಂದಿಗೂ ನಿಮ್ಮ ತವರು ಮನೆಯಿಂದ ತರಲೇಬೇಡಿ!

    June 19, 2025

    ನಿಮ್ಮ ಮನೆಯ ಸೀಲಿಂಗ್ ಫ್ಯಾನ್ ಧೂಳುತುಂಬಿದ್ಯಾ? ಹಾಗಿದ್ರೆ, ಜಸ್ಟ್ ಹೀಗೆ ಕ್ಲೀನ್ ಮಾಡಿ​!

    June 19, 2025

    ಬೆಳಗ್ಗೆ ಎದ್ದಾಕ್ಷಣ ಕಾಫಿ-ಟೀ ಕುಡಿಯೋ ಅಭ್ಯಾಸ ಇದ್ಯಾ!? ಹಾಗಿದ್ರೆ ಇಂದೇ ಬಿಟ್ಟು, ಈ ರಸ ಕುಡಿಯಿರಿ!

    June 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.