ಚಾಮರಾಜನಗರ : ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ ಮಲೆಯಾಳಿ ಸಿನಿಮಾ ಶೂಟಿಂಗ್ ನಡೆಸಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘಟನೆ ಇಂದು ಮಾಡ್ರಳ್ಳಿ ಮಹದೇವಪ್ಪ ನೇತೃತ್ವದಲ್ಲಿಂದು ಪ್ರತಿಭಟನೆಯನ್ನು ನಡಸಲಾಯಿತು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸಮೀಪವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಚೆಕ್ ಪೋಸ್ಟ್ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು.
ಬಂಡೀಪುರ ಹುಲಿಯೋಜನೆಯ ಒಳಗಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟಕ್ಕೆ ತೆರಳಲು ಅರಣ್ಯ ಇಲಾಖೆ ಅನೇಕ ನೀತಿ ನಿಯಮಗಳನ್ನು ರೂಪಿಸಿದೆ. ವನ್ಯಜೀವಿಗಳ ಸಂರಕ್ಚಣೆಗಾಗಿ ಕಟ್ಟುನಿಟ್ಟಿನ ಕಾಯಿದೆಯನ್ನು ಜಾರಿಗೆ ತಂದಿದೆ ಹಾಗಾಗಿ ಸ್ಥಳೀಯರೂ ಸೇರಿದಂತೆ ಖಾಸಗೀ ವಾಹನಗಳಿಗೆ ಅವಕಾಶವಿಲ್ಲ. ಅಂತಹದರಲ್ಲಿ ಆದರೆ ಮಲೆಯಾಳಿ ಸಿನಿಮಾದ ಶೂಟಿಂಗ್ ಗಾಗಿ ಅರಣ್ಯ ಇಲಾಖೆ ಅರಣ್ಯ ಕಾಯಿದೆಯನ್ನು ಉಲ್ಲಂಘನೆ ಮಾಡಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತು ಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಬಂಡೀಪುರದ ಹುಲಿ ಸಂರಕ್ಷಿತಾರಣ್ಯದಲ್ಲಿ ನಿಯಮ ಉಲ್ಲಂಘನೆ; ಅರಣ್ಯ ಸಚಿವರೇ ಕೊಟ್ಟರಾ ಅನುಮತಿ..?
ಖಾಸಗಿ ವ್ಯಕ್ತಿಗಳಿಗೆ ಶೂಟಿಂಗ್ ನಡೆಸಲು ಅನುಮತಿಯನ್ನು ಸರ್ಕಾರವೇ ನೀಡಿದೆ ಎಂದು ಆದೇಶದ ಪ್ರತಿ ಸೃಷ್ಟಿಸಿದ್ದಾರೆ. ಅರಣ್ಯ ಇಲಾಖೆಗೆ ಶೂಟಿಂಗ್ ನಡೆಸಿರುವವರು 1 ಲಕ್ಚ ರೂಪಾಯಿ ಹಣ ಕಟ್ಟಿದ್ದಾರೆ ಎಂದು ಆರ್.ಎಫ.ಓ.ಮಲ್ಲೇಶ್ ತಿಳಿಸಿದ್ದಾರೆ.
ಅರಣ್ಯ ಭವನದಿಂದ ಅಥವಾ ಸರ್ಕಾರದಿಂದ ಬಂಡೀಪುರಕ್ಕೆ ಮೇಲ್ ಮೂಲಕ ಬಂದಿರುವ ಆದೇಶದ ಪ್ರತಿ ನೀಡಿ ಎಂದರೆ ನೀಡಲು ನಿರಾಕರಿಸುತ್ತಿದ್ದಾರೆ ಹಾಗಾಗಿ ಅರಣ್ಯ ಇಲಾಖೆಯ ನೀತಿ ನಿಯಮವನ್ನು ಅರಣ್ಯ ಇಲಾಖೆ ಅಧಿಕಾರಿಗಳೆ ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಮುಂದಿನ ದಿನಗಳಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಾಯಿದೆ ಉಲ್ಲಂಘಟನೆಯಾಗದಂತೆ ಕಟ್ಟಿನಿಟ್ಟಿನ ಕ್ರಮ ಜರುಗಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.