Heart Attack: ಹೃದಯಾಘಾತದಿಂದ 19 ವರ್ಷದ ಯುವಕ ಸಾವು!

ಹಾಸನ:- ಹೃದಯಾಘಾತದಿಂದ 19 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ಜರುಗಿದೆ. 19 ವರ್ಷದ ನಿಶಾಂತ್ ಮೃತಪಟ್ಟ ಯುವಕ. ಮಣ್ಣಿನ ಮಡಕೆ ನೀರು ಕುಡಿಯೋದು ಒಳ್ಳೆಯದಂತೆ: ಯಾಕೆ ಗೊತ್ತಾ? ನಿಶಾಂತ್ ಡಿಪ್ಲೋಮಾ ಮುಗಿಸಿ ಕೈಗಾರಿಕಾ ತರಬೇತಿ ಸಲುವಾಗಿ 15 ದಿನದ ಹಿಂದೆ ಬೆಂಗಳೂರಿಗೆ ತೆರಳಿದ್ದರು. ಇಂದು ರೂಂನಲ್ಲಿದ್ದಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತದೇಹವನ್ನು ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಹಾಸನಕ್ಕೆ ತರಲಾಗುತ್ತದೆ.