ಬೆಂಗಳೂರು ಗ್ರಾ: 600 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವುಳ್ಳ ಹೊಸಕೋಟೆ ನಗರದ ಪ್ರಸಿದ್ಧ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದ್ದು, ಮಾಜಿ ಸಂಸದ ಬಿಎನ್ ಬಚ್ಚೇಗೌಡ ಸಾಥ್ ನೀಡಿದರು.
ಚೋಳರ ಕಾಲದಿಂದಲೂ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ನಡೆದುಕೊಂಡು ಬಂದಿದೆ. ಐತಿಹಾಸಿಕ ರಥೋತ್ಸವದಲ್ಲಿ ಭಾಗಿಯಾದ ಸಾವಿರಾರು ಭಕ್ತರು, ಅವಿಮುಕ್ತೇಶ್ವರ ರಥಕ್ಕೆ ಬಾಳೆಹಣ್ಣು ಅರ್ಪಿಸಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಮಾಡಿದರು. ರಥೋತ್ಸವದಲ್ಲಿ 5 ಸಾವಿರ ಜನಕ್ಕೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಇನ್ನು 2-3 ವರ್ಷ ಇರಬಹುದು, ನೋಡೋಣ ಏನು ಕಡಿದು ದಬ್ಬಾಕುತ್ತೀರಿ: ಡಿಕೆಶಿ ವಿರುದ್ಧ ನಿಖಿಲ್ ವಾಗ್ದಾಳಿ