Close Menu
Ain Live News
    Facebook X (Twitter) Instagram YouTube
    Monday, May 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಸಿಹಿ ಗೆಣಸು ಬೆಳೆಯನ್ನು ನೆಡುವುದು ಮತ್ತು ಕೊಯ್ಲು ಮಾಡುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ

    By Author AINApril 24, 2025
    Share
    Facebook Twitter LinkedIn Pinterest Email
    Demo

    ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಸಿಹಿಗೆಣಸು ಬೆಳೆಯಲಾಗುತ್ತಿದ್ದು, ಬಹುಪಾಲು ಸಿಹಿಗೆಣಸು ಉತ್ತರ ಭಾರತದ ರಾಜ್ಯಗಳಿಗೆ ಸರಬರಾಜಾಗುತ್ತವೆ. ಹೆಚ್ಚಿನ ಭಾಗದ ರೈತರು ಇದನ್ನು ಬೆಳೆಯುವುದಿಲ್ಲ ಎನ್ನುವುದಕ್ಕಿಂತಲೂ ಮುಖ್ಯವಾಗಿ ಬಹಳಷ್ಟು ರೈತರಿಗೆ ಸಿಹಿ ಗೆಣಸು ಕೂಡ ಒಂದು ಲಾಭದಾಯಕ ಬೆಳೆ ಎಂಬ ವಿಷಯ ಗೊತ್ತಿಲ್ಲ.

    ಫ್ರಿಡ್ಜ್ ನಲ್ಲಿ ಈ ಹಣ್ಣುಗಳನ್ನು ಇಡ್ತಿದ್ದೀರಾ!? ಇದರಿಂದ ದೇಹಕ್ಕಾಗುವ ಹಾನಿ ಎಷ್ಟು ಗೊತ್ತಾ!?

    ಇನ್ನೊಂದೆಡೆ ಈ ಬೆಳೆಗೆ ಹೊಂದಿಕೆಯಾಗುವ ಮಣ್ಣು ಎಲ್ಲೆಡೆ ಇಲ್ಲದಿರುವುದು ಕೂಡ ಬೇರೆ ಭಾಗದ ರೈತರು ಸಿಹಿ ಗೆಣಸು ಬೆಳೆಯಲು ಆಸಕ್ತಿ ತೋರಿಸದೇ ಇರುವುದಕ್ಕೆ ಕಾರಣವಿರಬಹುದು.

    ಹಾಗಂತ ಬೇರೆ ಜಿಲ್ಲೆಗಳ ರೈತರು ಗೆಣಸು ಬೆಳೆಯಲು ಪ್ರಯತ್ನಿಸಿಲ್ಲ ಎಂದಲ್ಲ. ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣದಲ್ಲಿ ತುಮಕೂರು, ಕೋಲಾರ ಹಾಗೂ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳ ರೈತರು ಸಿಹಿ ಗೆಣಸು ಬೆಳೆದಿದ್ದಾರೆ. ಕೆಲವರು ಅಧಿಕ ಲಾಭವನ್ನೂ ಗಳಿಸಿದ್ದಾರೆ.

    ಮಣ್ಣು, ಹವಾಗುಣ

    ಹಗುರವಾದ ರಚನೆಯನ್ನು ಹೊಂದಿರುವ ಹಾಗೂ ಅತ್ಯಂತ ಫಲವತ್ತಾಗಿರುವ ಮರಳು ಮಿಶ್ರಿತ ಗೋಡು ಮಣ್ಣು ಸಿಹಿ ಗೆಣಸು ಬೆಳೆಯಲು ಸೂಕ್ತವಾಗಿದೆ. ಈ ವಿಧದ ಮಣ್ಣು ಸಡಿಲವಾಗಿರುವುದರಿಂದ ಗೆಣಸುಗಳು ನೆಲದಲ್ಲಿ ಸುಲಭವಾಗಿ ಇಳಿದು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ. ತೀರಾ ಒತ್ತು ಒತ್ತಾದ ರಚನೆಯನ್ನು ಹೊಂದಿರುವ ಕೆಂಪು ಮತ್ತು ಕಪ್ಪು ಮಣ್ಣಿನ ಜಮೀನುಗಳಲ್ಲಿ ಗೆಣಸಿನ ಬೆಳೆ ಉತ್ತಮವಾಗಿ ಬರುವುದಿಲ್ಲ. ಜೊತೆಗೆ ಒಣ ಹವೆಯು ಈ ಬೆಳೆಗೆ ಪೂರಕವಾಗಿದ್ದು, ನೀರಾವರಿ ಪ್ರದೇಶ ಹಾಗೂ ಮಳೆ ಆಶ್ರಿತ ಕೃಷಿ ಭೂಮಿ ಎರಡರಲ್ಲೂ ಬೆಳೆಯಬಹುದಾಗಿದೆ. ನೀರಾವರಿ ಸೌಲಭ್ಯವಿರುವ ಭೂಮಿ ಇದ್ದರೆ ವರ್ಷಕ್ಕೆ ಎರಡು ಬೆಳೆಗಳನ್ನು ತೆಗೆಯಯಬಹುದು.

    ಬಿತ್ತನೆ ಸಮಯ

    ಹವಾಗುಣಕ್ಕೆ ಅನುಗುಣವಾಗಿ ಒಂದೊAದು ಭಾಗದಲ್ಲಿ ಒಂದೊAದು ಅವಧಿಯಲ್ಲಿ ಸಿಹಿ ಗೆಣಸನ್ನು ಬಿತ್ತನೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಕರಾವಳಿ ಭಾಗದ ಬೆಳೆಗಾರರು ಮೊದಲ ಬೆಳೆಗೆ ಗೆಣಸು ಬಿತ್ತನೆಗೆ ಮೇ-ಜೂನ್ ತಿಂಗಳ ಅವಧಿಯನ್ನು, ಎರಡನೇ ಬೆಳೆಗೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ದಕ್ಷಿಣ ಒಳನಾಡಿನ ಪ್ರದೇಶಗಳ ರೈತರು ಜೂನ್-ಜುಲೈ ಮಾಹೆಯಲ್ಲಿ ಮೊದಲ ಬಿತ್ತನೆ ಮಾಡಿ, ನೀರಾವರಿ ಸೌಲಭ್ಯವಿದ್ದರೆ ಅಕ್ಟೋಬರ್-ಡಿಸೆಂಬರ್ ತಿಂಗಳುಗಳ ನಡುವಿನ ಅವಧಿಯಲ್ಲಿ ಬಿತ್ತನೆ ಮಾಡುತ್ತಾರೆ.

    ಗೆಣಸಿನ ತಳಿಗಳು

    ರಾಜ್ಯದಲ್ಲಿ ಬೆಳೆಯಲಾಗುವ ಸಿಹಿ ಗೆಳಸಿನ ಹೆಚ್ಚಿನ ತಳಿಗಳು, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಂದ ಬಂದಿವೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಹೊಸೂರು ರೆಡ್ ಮತ್ತು ಹೊಸೂರು ರೆಡ್ ತಳಿಗಳನ್ನು ದಕ್ಷಿಣ ಒಳನಾಡಿನ ಕೆಲ ರೈತರು ಬೆಳೆಯುತ್ತಿದ್ದು, ಉಳಿದಂತೆ ಪಂಜಾಬ್ ಮೂಲದ ವಿ-12 (ಕಂದು ಬಣ್ಣ), ವಿ-6 (ಕೆಂಪು ಬಣ್ಣ), ಎಚ್-41, ಎಚ್-42 ತಳಿಗಳ ಸಿಹಿ ಗೆಣಸನ್ನು ಹೆಚ್ಚು ಬೆಳೆಯುತ್ತಾರೆ. ಇವೆಲ್ಲವೂ 4ರಿಂದ 5 ತಿಂಗಳಲ್ಲಿ ಕೊಯ್ಲಿಗೆ ಬರುವ ತಳಿಗಳಾಗಿವೆ. ಇನ್ನು ಕರಾವಳಿ ಭಾಗದಲ್ಲಿ ವಿ-35, ಸಿ-43 (ಬಿಳಿ ಗೆಣಸು), ವಿ-30 (ಹಳದಿ ಗೆಣಸು) ತಳಿಗಳನ್ನು ಹೆಚ್ಚಾಗಿ ನಾಟಿ ಮಾಡುತ್ತಾರೆ. ಇವೆಲ್ಲವೂ 100ರಿಂದ 120 ದಿನಗಳ ಒಳಗಾಗಿ ಕೊಯ್ಲಿಗೆ ಬರುವ ತಳಿಗಳಾಗಿವೆ. ಇದರೊಂದಿಗೆ ಕರಾವಳಿಯ ಕೆಲ ರೈತರು ಹೊಸೂರು ರೆಡ್ ತಳಿ ಗೆಣಸು ಬೆಳೆಯುವುದುಂಟು. ಸಾಮಾನ್ಯವಾಗಿ 3ರಿಂದ 4 ಕಣ್ಣುಗಳಿರುವ ಗೆಣಸಿನ ಬಳ್ಳಿಯ ತುಂಡುಗಳನ್ನು ಎಕರೆಗೆ 50,000 ರಿಂದ 55,000 ತುಂಡುಗಳAತೆ ಬಿತ್ತನೆ ಮಾಡಲಾಗುತ್ತದೆ.

    ಬಿತ್ತನೆ ವಿಧಾನ

    ಬಿತ್ತನೆಗೆ ಭೂಮಿಯನ್ನು ಹದ ಮಾಡಿದ ತರುವಾಯ 60 ಸೆಂ.ಮೀ ಅಂತರದಲ್ಲಿ ಸಾಲುಗಳನ್ನು ಸಿದ್ಧಪಡಿಸಿ, ಕೊಟ್ಟಿಗೆ ಗೊಬ್ಬರ (10-15 ಟನ್), ಸಾರಜನಕ (75 ಕೆ.ಜಿ) ರಂಜಕ (50 ಕೆ.ಜಿ), ಪೊಟ್ಯಾಷ್ (75 ಕೆ.ಜಿ) ಅನ್ನು ಮಣ್ಣಿಗೆ ಸೇರಿಸಬೇಕು  ಬಳಿಕ 30 ಸೆಂ.ಮೀ ಅಂತರದಲ್ಲಿ ತುಂಡುಗಳನ್ನು ಊರಬೇಕು. ಬಳಿಕ ಆಯಾ ಪ್ರದೇಶದ ಹವಾಗುಣಕ್ಕೆ ಅನುಗುಣವಾಗಿ 7 ರಿಂದ 8 ದಿನಗಳಿಗೆ ಒಮ್ಮೆ ನೀರುಣಿಸಬೇಕು. (ಗೊಬ್ಬರ, ರಾಸಾಯನಿಕ ಪೋಷಕಾಂಶಗಳ ಪ್ರಮಾಣ ಪ್ರತಿ ಎಕರೆಗಾಗಿದ್ದು, ಬಿತ್ತನೆಗೆ ಮುನ್ನ ಅರ್ಧದಷ್ಟು ಹಾಗೂ ಬಿತ್ತನೆ ಬಳಿಕ ಉಳಿದ ಅರ್ಧದಷ್ಟು ಹಾಕುವುದು ಸೂಕ್ತ). ಬಿತ್ತನೆಗೆ ಮೊದಲು ಹಸಿರೆಲೆ ಗೊಬ್ಬರ ನೀಡಿದರೆ ಗುಣಮಟ್ಟದ ಬೆಳೆ ತೆಗೆಯಬಹುದು.

    ಇಳುವರಿ ಹಾಗೂ ಬೆಲೆ

    ಎಲ್ಲ ಬೆಳೆಗಳಂತೆಯೇ ಸಿಹಿ ಗೆಣಸಿನ ಇಳ್ರÄವರಿ ಕೂಡ ಒಂದೊAದು ಪ್ರದೇಶದಲ್ಲಿ ಒಂದೊAದು ಪ್ರಮಾಣದಲ್ಲಿ ಬರುತ್ತದೆ. ರಾಜ್ಯದಲ್ಲಿ ಗೆಣಸು ಬೆಳೆಯುತ್ತಿರುವ ಬಹುತೇಕ ಜಿಲ್ಲೆಗಳಲ್ಲಿ ಎಕರೆಗೆ ಸರಾಸರಿ 12ರಿಂದ 15 ಟನ್ ಇಳುವರಿ ಬರುತ್ತಿದೆ. ಕೆಲವರು 18 ಟನ್ ಕೂಡ ಬೆಳೆಯುತ್ತಾರೆ. ಮೆಕ್ಸಿಕೋ ಮತ್ತಿತರ ದೇಶಗಳಲ್ಲಿ ಎಕರೆಗೆ 25ರಿಂದ 30 ಟನ್  ಗೆಣಸು ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಸಿಹಿ ಗೆಣಸಿಗೆ ಹೆಚ್ಚು ಬೇಡಿಕೆ ಇಲ್ಲ. ಆದರೆ ಇಲ್ಲಿ ಬೆಳೆದ ಗೆಣಸುಗಳು ಮಹಾರಾಷ್ಟç, ಪಂಜಾಬ್, ಹರಿಯಾಣ ರಾಜ್ಯಗಳಿಗೆ ರಫ್ತಾಗುತ್ತವೆ. ಸಾಮಾನ್ಯವಾಗಿ ಕ್ವಿಂಟಾಲ್ ಗೆಣಸಿಗೆ 1500 ರೂ.ಗಳಿಂದ 1850 ರೂ. ಬೆಲೆ ಇರುತ್ತದೆ. ರಾಜ್ಯದಲ್ಲೇ ಹೆಚ್ಚು ಗೆಣಸು ಬರುವುದು ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಗೆ.

    ಅಧಿಕ ಲಾಭ ನೀಡುವ ಬೆಳೆ

    ಸಿಹಿ ಗೆಣಸು ಬೆಳೆಯ ನಿರ್ವಹಣೆಗೆ ಹೆಚ್ಚು ವೆಚ್ಚ ತಗುಲುವುದಿಲ್ಲ. ಬಿತ್ತನೆ, ಗೊಬ್ಬರ ನೀಡುವುದು ಪ್ರಮುಮು ಹೂಡಿಕೆಗಳಾದರೆ, ಇಳುವರಿ ಬಂದ ಬಳಿಕ ಗೆಣಸುಗಳನ್ನು ನೆಲದಿಂದ ತೆಗೆಯಯಲು ಕಾರ್ಮಿಕರು ಬೇಕಾಗುತ್ತಾರೆ. ಯುರೋಪ್ ರಾಷ್ಟçಗಳಲ್ಲಿ ಮತ್ತು ಇತ್ತೀಚೆಗೆ ಭಾರತದ ಕೆಲ ರಾಜ್ಯಗಳಲ್ಲೂ ಟ್ರಾಕ್ಟರ್‌ಗೆ ಫ್ಲೋ ರೀತಿಯ ದೊಡ್ಡ ಉಳಿಮೆ ಸಾಧನಗಳನ್ನು ಅಳವಡಿಸಿಕೊಂಡು ಸಾರಾಸಗಟಾಗಿ ಗೆಣಸನ್ನು ಬಗೆಯಯುವುದುಂಟು. ಜೊತೆಗೆ ರೋಗಗಳ ಹಾವಳಿಯೂ ಕಡಿಮೆ ಇರುವ ಕಾರಣ ರೈತರು ಅಧಿಕ ಲಾಭ ಗಳಿಸಬಹುದು.

     

     

    Post Views: 2

    Demo
    Share. Facebook Twitter LinkedIn Email WhatsApp

    Related Posts

    Operation Sindoor effect: ಕಾಂಗ್ರೆಸ್ ಸರ್ಕಾರದ 2 ವರ್ಷದ ಸಂಭ್ರಮಾಚರಣೆಗೆ ಬ್ರೇಕ್‌

    May 12, 2025

    Aadhaar Update: ಆಧಾರ್‌ʼನಲ್ಲಿ ಮೊಬೈಲ್ ಸಂಖ್ಯೆಯನ್ನು ಹೇಗೆ ನವೀಕರಿಸುವುದು..? ತುಂಬಾ ಸಿಂಪಲ್‌

    May 12, 2025

    ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನ: ವಾಟ್ಸಾಪ್ʼನಲ್ಲಿ ಬರುವ ಈ ಲಿಂಕ್ ಕ್ಲಿಕ್ ಮಾಡ್ಬೇಡಿ – ದಯಾನಂದ್ ಎಚ್ಚರಿಕೆ

    May 12, 2025

    ಎಲೆಕೋಸಿಗೆ ತೀವ್ರ ಬೆಲೆ ಕುಸಿತ: ದನಕರು ಮೇಯಲು ಬಿಟ್ಟು ಬೆಳೆ ನಾಶಪಡಿಸಿದ ಅನ್ನದಾತ-video

    May 12, 2025

    ಇಂಡೋ-ಪಾಕ್‌ ಯುದ್ಧ: ಇಂದಿರಾ ಗಾಂಧಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಾರಂತೆ..!

    May 12, 2025

    Karnataka Rains: ಎಚ್ಚರ..! ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ವಿಪರೀತ ಮಳೆ

    May 12, 2025

    ಗನ್ ಹಿಡಿದು ಜಾಮಿಟ್ರಿ ಪಬ್ʼಗೆ ನುಗ್ಗಿದ ವ್ಯಕ್ತಿ: ಅಡಗಿ ಕುಳಿತವನಿಗಾಗಿ ಪೊಲೀಸರ ಶೋಧ

    May 12, 2025

    ಯುದ್ಧ ನಡೆಯುತ್ತಿರುವಂತೆ ನಿಮಗೆ ಕನಸು ಬಿತ್ತಾ..? ಹಾಗಿದ್ರೆ ಇದರ ಹಿಂದೆ ನಿಮ್ಮ ಜೀವನದ ರಹಸ್ಯ ಅಡಗಿದೆ..!

    May 12, 2025

    ಪಾಕಿಸ್ತಾನ ಒಂದು ಟೆರರ್ ಕಂಪೆನಿ, ಇದಕ್ಕೆ ಬುದ್ಧಿ ಕಲಿಸಬೇಕು: ಛಲವಾದಿ ನಾರಾಯಣಸ್ವಾಮಿ

    May 11, 2025

    ನಮ್ಮ ದಾಳಿಗೆ ಹೆದರಿ ಪಾಕಿಸ್ತಾನ ಅಮೆರಿಕ ಕಾಲು ‌ಹಿಡಿದುಕೊಳ್ತು: ಶೋಭಾ ಕರಂದ್ಲಾಜೆ

    May 11, 2025

    ಹೊಸ ಬಾಳಿಗೆ ಹೆಜ್ಜೆ ಇಟ್ಟ ಬಿಗ್ ಬಾಸ್ ರಂಜಿತ್..! ತಾಳಿ ಕಟ್ಟುವ ವೇಳೆ ಮಾನಸಾ ಭಾವುಕ

    May 11, 2025

    ಭೂಮಿ ಕಳೆದುಕೊಂಡ ರೈತರ ಪರಿಹಾರ ಮೊತ್ತಕ್ಕೆ GST ವಿಧಿಸುವಂತಿಲ್ಲ: ಮಹತ್ವದ ಆದೇಶ ನೀಡಿದ ಹೈಕೋರ್ಟ್‌

    May 11, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.