Close Menu
Ain Live News
    Facebook X (Twitter) Instagram YouTube
    Thursday, June 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಇಂದ್ರಜಿತ್ ಲಂಕೇಶ್ ಪುತ್ರನ ಮೊದಲ ಚಿತ್ರಕ್ಕೆ ಒಟಿಟಿಯಲ್ಲಿಯೂ ಮೆಚ್ಚುಗೆ..ಪರಭಾಷೆಯಲ್ಲಿಯೂ ಸಮರ್ಜಿತ್‌ಗೆ ಡಿಮ್ಯಾಂಡ್!

    By Author AINApril 9, 2025
    Share
    Facebook Twitter LinkedIn Pinterest Email
    Demo

    ಇಂದ್ರಜಿತ್ ಲಂಕೇಶ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ “ಗೌರಿ” ಸಿನಿಮಾ ಕಳೆದವರ್ಷ ತೆರೆ ಕಂಡು ಜನಪ್ರಿಯವಾಗಿತ್ತು ಹಾಗೂ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಯುವಜನತೆಯಂತೂ ಸಮರ್ಜಿತ್ ಅಭಿನಯಕ್ಕೆ ಫಿದಾ ಆಗಿದ್ದರು.‌ ಆನಂತರ ಈ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಅಲ್ಲೂ ಸಹ ಈ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ..

    ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯದಾಗಿನಿಂದ ಹಿಡಿದು ಈವರೆಗೂ ಎರಡುವರೆ ಲಕ್ಷ ಗಂಟೆಗಳ ಕಾಲ‌ ಈ ಚಿತ್ರ ವೀಕ್ಷಣೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ಜನರು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಸಮರ್ಜಿತ್ ಲಂಕೇಶ್ ಅವರಿಗೆ ಕನ್ನಡ ಸೇರಿದಂತೆ ಅನೇಕ ಭಾಷೆಗಳಿಂದ ನಟಿಸಲು ಅವಕಾಶಗಳು ಬರುತ್ತಿದೆ. ನಾಯಕನಾಗಲೂ ಸಮರ್ಜಿತ್ ಪಟ್ಟ ಶ್ರಮಕ್ಕೆ ಪ್ರತಿಫಲ ದೊರಕುತ್ತಿದೆ.

    ಬಾಲಿವುಡ್‌ಗೆ ಸಮರ್ಜಿತ್?

    ಸಮರ್ಜಿತ್‌ ಸ್ಯಾಂಡಲ್‌ ವುಡ್‌ ಹೃತಿಕ್‌ ರೋಷನ್‌ ಎಂಬ ಬೋರ್ಡ್‌ ಬೆದ್ದಿದೆ. ಮೊದಲ ಚಿತ್ರದಲ್ಲಿಯೂ ಒಳ್ಳೆ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಸಮರ್ಜಿತ್ ಲಂಕೇಶ್ ಡ್ಯಾನ್ಸ್, ಲುಕ್, ಮ್ಯಾನರಿಸಂ ಎಲ್ಲರಿಗೂ ಇಷ್ಟವಾಗಿದೆ. ಅದ್ಭುತ ಪರ್ಫಾಮೆನ್ಸ್‌ನಿಂದ ಸಮರ್ಜಿತ್‌ ಬಾಲಿವುಡ್‌ ಕಡೆ ಮುಖ ಮಾಡಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿಯೂ ಚರ್ಚೆಯಲ್ಲಿದೆ.

    ಕರಣ್ ಜೋಹರ್ ಒಡೆತನದ ಧರ್ಮಾ ಪ್ರೊಡಕ್ಷನ್ಸ್ ಸಮರ್ಜಿತ್‌ಗೆ ಸಿನಿಮಾ ಮಾಡಲು ಮುಂದಾಗಿದ್ದಾರಂತೆ, ಧರ್ಮ ಪ್ರೊಡಕ್ಷನ್ ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಹೀಗಾಗಿ ಬಾಲಿವುಡ್‌ಗೆ ಸಮರ್ಜಿತ್ ಲಂಕೇಶ್ ಕಾಲಿಡುವುದು ಬಹುತೇಕ ಖಚಿತವಂತೆ. ಸ್ಟಾರ್ ಕಿಡ್‌ಗಳನ್ನು ಯಶಸ್ವಿಯಾಗಿ ಪರಿಚಯಿಸಿರುವ ಕರಣ್ ಜೊಹರ್ ಸಂಸ್ಥೆ ಜೊತೆ ಸಮರ್ಜಿತ್ ಈಗಾಗಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಒಂದ್ಕಡೆ ಕರಣ್‌ ಜೋಹರ್ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್‌, ಇನ್ನೊಂದು ಕಡೆ ದಕ್ಷಿಣ ಭಾರತದ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಸಮರ್ಜಿತ್‌ಗೆ ಸಿನಿಮಾ ಮಾಡುವುದಕ್ಕೆ ಮುಂದೆ ಬಂದಿದೆ ಎಂಬ ಮಾಹಿತಿ ಹರಿದಾಡ್ತಿದೆ.

    Demo
    Share. Facebook Twitter LinkedIn Email WhatsApp

    Related Posts

    ಊಟಕ್ಕೆ ಕುಳಿತದ ವಿದ್ಯಾರ್ಥಿಗಳು: ಹಾಸ್ಟೆಲ್‌ ಮೇಲೆಯೇ ಅಪ್ಪಳಿಸಿದ ವಿಮಾನ: ಮುಂದೆ ನಡೆದಿದ್ದು ಘೋರ ದುರಂತ! Photo ವೈರಲ್!

    June 12, 2025

    ಮಂಗ್ಲಿ ಬರ್ತಡೇ ಪಾರ್ಟಿಯಲ್ಲಿ ನಡೆದಿದ್ದೇನು? ವಿಡಿಯೋ ಬಿಡುಗಡೆ ಮಾಡಿದ ಗಾಯಕಿ!

    June 12, 2025

    ಮೌನ ಮುರಿದ ಮಂಗ್ಲಿ… ಡ್ರಗ್ಸ್ ಪ್ರಕರಣದ ಬಗ್ಗೆ ಗಾಯಕಿ ಕೊಟ್ಟ ಸ್ಪಷ್ಟನೆ ಏನು? Video ವೈರಲ್!

    June 12, 2025

    Kantara: “ಕಾಂತಾರ: ಚಾಪ್ಟರ್ 1′ ಚಿತ್ರತಂಡದ ಮತ್ತೊಬ್ಬ ಕಲಾವಿದ ನಿಧನ..!

    June 12, 2025

    Shooting Accident: ರಾಮ್ ಚರಣ್ ನಿರ್ಮಾಣದ ಸಿನಿಮಾ ಸೆಟ್’ನಲ್ಲಿ ಪ್ರವಾಹ..! ಸಿಬ್ಬಂದಿ ಗಾಯ

    June 12, 2025

    Mangli.. ಪಾರ್ಟಿಯಲ್ಲಿ ನಶೆಯ ಅಮಲು: ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಬೇಡಿ – ಮಂಗ್ಲಿ

    June 12, 2025

    ಬರ್ತ್’ಡೇ ದಿನವೇ ನಶೆಯಲ್ಲಿ ತೇಲಿದ್ರಾ ಮಂಗ್ಲಿ ..!? ರೆಸಾರ್ಟ್ ಮೇಲೆ ಪೊಲೀಸರ ದಾಳಿ: ಡ್ರಗ್ಸ್ ಪತ್ತೆ, ದೂರು ದಾಖಲು!

    June 11, 2025

    AS Ravi Kumar: ಚಿತ್ರರಂಗದಲ್ಲಿ ಮತ್ತೊಂದು ದುರಂತ: ಹೃದಯಾಘಾತದಿಂದ ಖ್ಯಾತ ನಿರ್ದೇಶಕ ನಿಧನ

    June 11, 2025

    ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್: ನಟ ದರ್ಶನ್, ಪವಿತ್ರಾ ಬಂಧನಕ್ಕೆ ಒಂದು ವರ್ಷ!

    June 11, 2025

    Katrina Kaif: ಮಾಲ್ಡೀವ್ಸ್’ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿ ಕತ್ರಿನಾ ಕೈಫ್ ನೇಮಕ..!

    June 10, 2025

    Deepika Padukone: ತಂದೆಯ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬ್ಯಾಡ್ಮಿಂಟನ್ ಶಾಲೆ ಆರಂಭಿಸಿದ ದೀಪಿಕಾ ಪಡುಕೋಣೆ..!

    June 10, 2025

    Dhanush: ವಾಯುಪಡೆ ಅಧಿಕಾರಿಯಾಗಿ ನಟ ಧನುಷ್: ವೈರಲ್ ಆಯ್ತು ಹೊಸ ಸಿನಿಮಾ ಲುಕ್

    June 9, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.