Close Menu
Ain Live News
    Facebook X (Twitter) Instagram YouTube
    Thursday, June 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    IPL 2025: ಕ್ಯಾಪ್ ನಮ್ದೆ, ಟೇಬಲ್ ಟಾಪ್ ನಮ್ದೆ..ಹೇಗಿತ್ತು ಕೊಹ್ಲಿ ಫೋಸ್!?

    By AIN AuthorApril 28, 2025
    Share
    Facebook Twitter LinkedIn Pinterest Email
    Demo

    ಪ್ರಸಕ್ತ ಐಪಿಎಲ್‌ ರೋಚಕತೆ ಹೆಚ್ಚಿಸಿದ್ದು, ಈಗಾಗಲೇ ಎಲ್ಲ ತಂಡಗಳು ಕನಿಷ್ಠ 8 ಪಂದ್ಯಗಳನ್ನು ಆಡಿವೆ. ಈ ವೇಳೆ ಸ್ಟಾರ್ ಆಟಗಾರರು ತಮ್ಮ ಸ್ಥಿರ ಪ್ರದರ್ಶನದ ಬಲದಿಂದ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಈ ಆಟಗಾರರ ವೈಯಕ್ತಿಕ ಸಾಧನೆಯ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿರಲಿದೆ.

    ಭೀಕರ ರಸ್ತೆ ಅಪಘಾತ: ಕಂಟೇನರ್ʼಗೆ ಕಾರು ಡಿಕ್ಕಿ – ಐವರು ಸಾವು! ಇಬ್ಬರಿಗೆ ಗಂಭೀರ ಗಾಯ

    ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅದರಲ್ಲಿ ಎಲ್ಲರ ಕಣ್ಣುಗಳು ಆ ಎರಡು ಪ್ರಶಸ್ತಿಯ ಮೇಲೆ ನೆಟ್ಟಿರಲಿವೆ. ಅವುಗಳೆಂದರೆ ಆರೆಂಜ್ ಕ್ಯಾಪ್‌ ಹಾಗೂ ಪರ್ಪಲ್‌ ಕ್ಯಾಪ್‌. ಈ ಎರಡೂ ಕ್ಯಾಪ್‌ಗಳನ್ನು ಪಡೆದು ರಾಜನಂತೆ ಮೆರೆಯಲು ಆಟಗಾರರು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಆರೆಂಜ್ ಕ್ಯಾಪ್‌ ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರರಿಗೆ ನೀಡಲಾಗುತ್ತದೆ. ಇನ್ನು ಗರಿಷ್ಠ ವಿಕೆಟ್‌ ಪಡೆದ ಪ್ಲೇಯರ್‌ಗೆ ಪರ್ಪಲ್‌ ಕ್ಯಾಪ್‌ ನೀಡಲಾಗುತ್ತದೆ. ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿರುವ ಮೂವರು ಆಟಗಾರರು ಕಣ್ಣು ನೆಟ್ಟಿದ್ದಾರೆ.

    2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆಡಿರುವ 10 ಪಂದ್ಯದಲ್ಲಿ 7 ಪಂದ್ಯವನ್ನು ಗೆದ್ದಿರುವ ಆರ್ ಸಿಬಿ ಮೂರರಲ್ಲಿ ಸೋಲು ಕಂಡಿದೆ.

    ಇನ್ನೂ ಆಟಗಾರರ ಪ್ರದರ್ಶನ ನೋಡಿದ್ರೆ ಈ ಸಲ ಕಪ್ ನಮ್ಮದೇ ಎನ್ನುತ್ತಿದ್ದಾರೆ ಫ್ಯಾನ್ಸ್. ಈವರೆಗೆ ಆಡಿದ 10 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿರುವ ಆರ್​ಸಿಬಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗೆಯೇ ಆ್ಯರೆಂಜ್ ಕ್ಯಾಪ್ ಹಾಗೂ ಪರ್ಪಲ್​ ಕ್ಯಾಪ್ ಪಟ್ಟಿಯಲ್ಲೂ ಆರ್​ಸಿಬಿ ಆಟಗಾರರು ಅಗ್ರಸ್ಥಾನದಲ್ಲಿದ್ದಾರೆ.

    ಆರೆಂಜ್​​ ಕ್ಯಾಪ್ ಪಟ್ಟಿಯಲ್ಲಿ ಆರ್​ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 51 ರನ್​ ಬಾರಿಸುವುದೊಂದಿಗೆ ಕೊಹ್ಲಿ ಎಲ್ಲರನ್ನು ಹಿಂದಿಕ್ಕಿದ್ದಾರೆ. ಈವರೆಗೆ 10 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 6 ಅರ್ಧಶತಕಗಳೊಂದಿಗೆ ಒಟ್ಟು 443 ರನ್ ಕಲೆಹಾಕಿದ್ದಾರೆ.

    ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್. ಈವರೆಗೆ 10 ಇನಿಂಗ್ಸ್ ಆಡಿರುವ ಸೂರ್ಯ 3 ಅರ್ಧಶತಕಗಳೊಂದಿಗೆ 427 ರನ್​ ಕಲೆಹಾಕಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್​ ರೇಸ್​ನಲ್ಲಿ ವಿರಾಟ್ ಕೊಹ್ಲಿಗೆ ಉತ್ತಮ ಪೈಪೋಟಿ ನೀಡುತ್ತಿದ್ದಾರೆ.

    ಪರ್ಪಲ್​ ಕ್ಯಾಪ್ ಪಟ್ಟಿಯಲ್ಲಿ ಆರ್​ಸಿಬಿ ತಂಡದ ವೇಗಿ ಜೋಶ್ ಹ್ಯಾಝಲ್​ವುಡ್ ಮೊದಲ ಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 10 ಇನಿಂಗ್ಸ್​ಗಳಲ್ಲಿ 36.5 ಓವರ್​ಗಳನ್ನು ಎಸೆದಿರುವ ಹ್ಯಾಝಲ್​ವುಡ್ 18 ವಿಕೆಟ್​ಗಳನ್ನು ಕಬಳಿಸಿ ಪರ್ಪಲ್​ ಕ್ಯಾಪ್ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಕಾಲ್ತುಳಿತ ಕೇಸ್ : ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ ನಿಖಿಲ್ ಸೋಸಲೆ​​ ಸೇರಿ ನಾಲ್ವರಿಗೆ ಜಾಮೀನು!

    June 12, 2025

    ಕಾಲ್ತುಳಿತ ಪ್ರಕರಣ: ವಿರಾಟ್‌ ಕೊಹ್ಲಿ ಆಪ್ತನಿಗೆ ನಿಖಿಲ್ ಸೋಸಲ್​​ಗೆ​ ಮಧ್ಯಂತರ ಜಾಮೀನು ಮಂಜೂರು!

    June 12, 2025

    Bengaluru Stampede Case: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಎಂಟ್ರಿ – ಸುಮೊಟೊ ಕೇಸ್ ದಾಖಲು

    June 12, 2025

    South Africa vs Australia, Final: ಫೈನಲ್’ನಲ್ಲಿ ಅರ್ಧಶತಕ! 100 ವರ್ಷಗಳ ಹಿಂದಿನ ವಿಶ್ವ ದಾಖಲೆ ಮುರಿದ ಸ್ಟೀವ್ ಸ್ಮಿತ್!

    June 12, 2025

    ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಮಿನಿ IPLಗೆ ವೇದಿಕೆ ಸಜ್ಜು – ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

    June 12, 2025

    RCB ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? DCM ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ!

    June 11, 2025

    ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ದೊಡ್ಡ ಬದಲಾವಣೆಗಳು! ಅಜಂ ಸೇರಿದಂತೆ ಇಬ್ಬರು ಔಟ್

    June 11, 2025

    ವದಂತಿ ನಂಬದಿರಿ.. ಆರ್​​ಸಿಬಿ ಮಾರಾಟ ಮಾಡುವುದಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ

    June 10, 2025

    ಸರ್ಕಾರಕ್ಕೆ ‘ಕಾಲ್ತುಳಿತ’ ಟೆನ್ಷನ್: ಜೂ.13ರಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರೊಟೆಸ್ಟ್!

    June 10, 2025

    ಬೆಂಗಳೂರು ಕಾಲ್ತುಳಿತ: RCB ಮಾರ್ಕೆಟಿಂಗ್ ಹೆಡ್’ಗೆ ನಿರಾಸೆ – ವಿಚಾರಣೆ ಮುಂದೂಡಿಕೆ

    June 10, 2025

    Stadium Stampede: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳು ಶಿಫ್ಟ್!

    June 10, 2025

    Stampede Case: ಹೊರಗೆ ಕಾಲ್ತುಳಿತಕ್ಕೆ ಸಿಲುಕಿ ನರಳಿ ನರಳಿ ಸಾವು: ಒಳಗೆ KSCA ಅಧಿಕಾರಿಗಳ ಭರ್ಜರಿ ʻಡೆತ್ʼ ಪಾರ್ಟಿ..!?

    June 10, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.