ಆರ್ಸಿಬಿ ತಂಡಕ್ಕೆ ಪ್ರಮುಖ ಆಟಗಾರ ಗುಡ್ ಬಾಯ್ ಹೇಳಿದ್ದು, ಕ್ವಾಲಿಫೈಯರ್ ಪಂದ್ಯಗಳಿಗೂ ಮುನ್ನ RCBಗೆ ಶಾಕ್ ಮೇಲೆ ಶಾಕ್ ಎದುರಾಗಿದೆ.
ಕರುನಾಡಿಗೆ ಕೊರೊನಾ ಆತಂಕ: ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಸೋಂಕು ಧೃಡ!
ಆರ್ಸಿಬಿ ತಂಡದ ಪ್ರಮುಖ ವೇಗಿ ಲುಂಗಿ ಎನ್ಗಿಡಿ ತವರಿಗೆ ಮರಳಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಅಭ್ಯಾಸಕ್ಕಾಗಿ ಎನ್ಗಿಡಿ ಸೌತ್ ಆಫ್ರಿಕಾ ತಂಡವನ್ನು ಕೂಡಿಕೊಳ್ಳಬೇಕಿದೆ. ಹೀಗಾಗಿ ಅವರು ಕೊನೆಯ ಪಂದ್ಯಗಳಿಗೂ ಮುನ್ನ ಆರ್ಸಿಬಿ ತಂಡಕ್ಕೆ ಗುಡ್ ಬೈ ಹೇಳಿದ್ದಾರೆ.
ತವರಿಗೆ ಹಿಂತಿರುಗುತ್ತಿರುವುದನ್ನು ಖಚಿತಪಡಿಸಿರುವ ಲುಂಗಿ ಎನ್ಗಿಡಿ, ಆರ್ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಐಪಿಎಲ್ ಅಭಿಯಾನದಿಂದ ಹೊರ ನಡೆಯುತ್ತಿರುವುದು ನಿರಾಶಾದಾಯಕ. ಇದಾಗ್ಯೂ ಆರ್ಸಿಬಿ ಅಭಿಮಾನಿಗಳಿಂದ ಸಿಕ್ಕ ಬೆಂಬಲ ಮತ್ತು ಪ್ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸಲಾಗುವುದಿಲ್ಲ. ಆರ್ಸಿಬಿ ಫ್ಯಾಮಿಲಿಗೆ ನನ್ನ ಧನ್ಯವಾದಗಳು ಎಂದು ಲುಂಗಿ ಎನ್ಗಿಡಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಲುಂಗಿ ಎನ್ಗಿಡಿ ಬದಲಿಗೆ ಆರ್ಸಿಬಿ ತಂಡಕ್ಕೆ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಎಂಟ್ರಿ ಕೊಟ್ಟಿದ್ದಾರೆ. ಝಿಂಬಾಬ್ವೆ ಪರ ಈವರೆಗೆ 70 ಟಿ20 ಪಂದ್ಯಗಳನ್ನಾಡಿರುವ ಮುಝರಬಾನಿ ಒಟ್ಟು 78 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅದು ಕೂಡ ಕೇವಲ 7.03 ರನ್ ಎಕಾನಮಿ ರೇಟ್ನಲ್ಲಿ ಎಂಬುದು ವಿಶೇಷ. ಹೀಗಾಗಿಯೇ ಆರ್ಸಿಬಿ ಬ್ಲೆಸಿಂಗ್ ಮುಝರಬಾನಿ ಅವರನ್ನು ಲುಂಗಿ ಎನ್ಗಿಡಿ ಬದಲಿಯಾಗಿ ಆಯ್ಕೆ ಮಾಡಿಕೊಂಡಿದೆ.