Close Menu
Ain Live News
    Facebook X (Twitter) Instagram YouTube
    Saturday, June 21
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    IPL 2025: ಪ್ಲೇ ಆಫ್ ಪ್ರವೇಶಿಸಿದ ನಾಲ್ಕು ತಂಡಗಳಿವು: ಅಗ್ರ ಎರಡು ಸ್ಥಾನಕ್ಕಾಗಿ ಬಿಗ್ ಫೈಟ್!

    By AIN AuthorMay 22, 2025
    Share
    Facebook Twitter LinkedIn Pinterest Email
    Demo

    ಕ್ರಿಕೆಟ್ ಪ್ರಿಯರ ನೆಚ್ಚಿನ ಇಂಡಿಯನ್ ಪ್ರೀಮಿಯರ್‌ ಲೀಗ್‌ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈ ಲೀಗ್‌ನ ಮುಂದಿನ ಹಂತವನ್ನು ನಾಲ್ಕು ತಂಡಗಳು ಪ್ರವೇಶಿಸಿವೆ. ಆದರೆ ಈ ನಾಲ್ಕು ತಂಡಗಳಲ್ಲಿ ಮೊದಲ ಎರಡು ಸ್ಥಾನಕ್ಕಾಗಿ ಫೈಟ್‌ ನಡೆಯುತ್ತಿದೆ. ಸದ್ಯ ಅಗ್ರ ಸ್ಥಾನದಲ್ಲಿರುವ ಗುಜರಾತ್‌ ಟೈಟಾನ್ಸ್‌ ಈ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಗುರುವಾರ ಮೈದಾನ ಪ್ರವೇಶಿಸಲಿದೆ. ಇನ್ನು ಆರ್‌ಸಿಬಿ ಸಹ ಈ ಸ್ಥಾನವನ್ನು ಪಡೆಯಲು ಬಿಗ್ ಫೈಟ್ ನಡೆಸಲಿದೆ.

    ಇಂದು ರಾಜಸ್ಥಾನದ ಬಿಕನೇರ್ ವಾಯುನೆಲೆಗೆ ಭೇಟಿ ಕೊಡಲಿದ್ದಾರೆ PM ಮೋದಿ!

    ಈ ಬಾರಿ ಪ್ಲೇ ಆಫ್‌ಗೆ ಗುಜರಾತ್‌ ಟೈಟಾನ್ಸ್‌, ಆರ್‌ಸಿಬಿ, ಪಂಜಾಬ್‌ ಕಿಂಗ್ಸ್‌ ತಂಡಗಳು ಈ ಮೊದಲೇ ಅರ್ಹತೆ ಪಡೆದಿದ್ದವು. ಇನ್ನು ಒಂದು ತಂಡಕ್ಕಾಗಿ ಬುಧವಾರ ರೋಚಕ ಫೈಟ್ ನಡೆದಿತ್ತು. ಈ ವೇಳೆ ಮುಂಬೈ ಇಂಡಿಯನ್ಸ್‌ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ ಆಫ್‌ ಪ್ರವೇಶಿಸುವ ಲೆಕ್ಕಾಚಾರ ನುಚ್ಚುನೂರಾಗಿದೆ

    ಪ್ಲೇ ಆಫ್ ಗೆ ಎಂಟ್ರಿ ಕೊಟ್ಟ ತಂಡಗಳು:-

    ಗುಜರಾತ್ ಟೈಟಾನ್ಸ್ ತಂಡವು 18 ಅಂಕಗಳೊಂದಿಗೆ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿದೆ. ಶುಭ್​​ಮನ್ ಗಿಲ್ ನೇತೃತ್ವದ ಜಿಟಿ ಪಡೆಯು ಈವರೆಗೆ 12 ಪಂದ್ಯಗಳನ್ನಾಡಿದ್ದು, ಈ ವೇಳೆ 9 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ಇದೀಗ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿದೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ ಆಡಿದ 12 ಪಂದ್ಯಗಳಲ್ಲಿ 8 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, ಒಂದು ಪಂದ್ಯವು ರದ್ದಾಗಿದೆ. ಈ ಮೂಲಕ ಒಟ್ಟಿ 17 ಅಂಕಗಳನ್ನು ಪಡೆದಿರುವ ಆರ್​ಸಿಬಿ ತಂಡವು ಪಾಯಿಂಟ್ಸ್ ಟೇಬಲ್​ನಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಮುಂದಿನ ಹಂತಕ್ಕೇರಿದೆ.

    ಪಂಜಾಬ್ ಕಿಂಗ್ಸ್ ತಂಡ ಕೂಡ ಪ್ಲೇಆಫ್​ಗೆ ಅರ್ಹತೆ ಪಡೆದುಕೊಂಡಿದೆ. ಈ ಬಾರಿ ಆಡಿದ 12 ಪಂದ್ಯಗಳಲ್ಲಿ ಪಂಜಾಬ್ ಪಡೆ ಒಟ್ಟು 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯವು ರದ್ದಾಗಿದೆ. ಈ ಮೂಲಕ 17 ಅಂಕಗಳನ್ನು ಪಡೆದಿರುವ ಪಂಜಾಬ್ ಕಿಂಗ್ಸ್ ಇದೀಗ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿದೆ.

    ಮುಂಬೈ ಇಂಡಿಯನ್ಸ್ ತಂಡವು ಬುಧವಾರ ಡೆಲ್ಲಿ ತಂಡ ಮಣಿಸಿ ಪ್ಲೇ ಆಫ್ ಗೆ ಎಂಟ್ರಿ ಪಡೆದಿದೆ.

    ಇನ್ನು ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್, ಸನ್​ರೈಸರ್ಸ್ ಹೈದರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈಗಾಗಲೇ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಹೀಗಾಗಿ ಈ ತಂಡಗಳು ದ್ವಿತೀಯ ಸುತ್ತಿನ ಪಂದ್ಯಗಳಲ್ಲಿ, ಅಂದರೆ ಪ್ಲೇಆಫ್ ಸುತ್ತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ.

    Demo
    Share. Facebook Twitter LinkedIn Email WhatsApp

    Related Posts

    IND vs ENG Test: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ: ಹೀಗಿದೆ ನೋಡಿ ಉಭಯ ತಂಡಗಳ ಪ್ಲೇಯಿಂಗ್ XI

    June 20, 2025

    Sachin Tendulkar: ನಾನು ಕ್ಯಾಪ್ಟನ್ ಆಗಿದ್ರೆ ಪಂತ್’ಗೆ ಇದೇ ರೀತಿಯ ಎಚ್ಚರಿಕೆ ನೀಡುತ್ತಿದ್ದೆ: ಸಚಿನ್ ತೆಂಡೂಲ್ಕರ್

    June 20, 2025

    ಟೆಸ್ಟ್ ಗೆಲ್ಲಲು ಬ್ಯಾಟಿಂಗ್ ಕ್ರಮಾಂಕ ಬದಲಿಸಲು ನಾನು ಸಿದ್ಧ: ಶುಭ್​ಮನ್ ಗಿಲ್!

    June 20, 2025

    Team India: BCCI ನಾಯಕತ್ವಕ್ಕೆ ಪರಿಗಣಿಸಿದೆ.. ನನಗೆ ಅದು ಬೇಡ.. ಟೆಸ್ಟ್ ಕ್ಯಾಪ್ಟನ್ ಆಫರ್ ಬಗ್ಗೆ ಬುಮ್ರಾ ಹೇಳಿದ್ದೇನು..?

    June 19, 2025

    ಲಂಡನ್’ನಲ್ಲಿರುವ ಕೊಹ್ಲಿ ನಿವಾಸಕ್ಕೆ ಶುಭಮನ್ ಗಿಲ್, ಪಂತ್ ಭೇಟಿ.! ಯಾಕೆ ಗೊತ್ತಾ..?

    June 19, 2025

    Sophie Devine: ವಿಶ್ವಕಪ್ ನಂತರ ವಿದಾಯ.. ಏಕದಿನ ಪಂದ್ಯಗಳಿಂದ ನಿವೃತ್ತಿಯಾಗಲು ಕಿವೀಸ್ ನಾಯಕಿ ನಿರ್ಧಾರ..!

    June 18, 2025

    Smriti Mandhana: ಮಹಿಳೆಯರ ODI ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ ಸ್ಮೃತಿ ಮಂಧಾನ..!

    June 17, 2025

    Test Matches: 4 ದಿನಗಳ ಟೆಸ್ಟ್’ಗೆ ಐಸಿಸಿ ಸಿದ್ಧ: ಓವರ್’ಗಳನ್ನು 98 ಕ್ಕೆ ಹೆಚ್ಚಿಸುವ ನಿರೀಕ್ಷೆ!

    June 17, 2025

    WTC Celebration: ಟ್ರೋಫಿ ಜೊತೆ ‘ಗನ್ ಸೆಲೆಬ್ರೇಷನ್’: ಬವುಮಾ ವಿಡಿಯೋ ವೈರಲ್..!

    June 16, 2025

    ಕೊಹ್ಲಿ ನನ್ನ ಜೊತೆ ಕೆಲವು ತಿಂಗಳು ಮಾತನಾಡಲಿಲ್ಲ.. ಏಕೆಂದರೆ..! ಹೀಗೆ ಹೇಳಿದ್ದು ಯಾರು ಗೊತ್ತಾ..?

    June 16, 2025

    ಗುಂಡಿಯಲ್ಲಿ ಮೊಸಳೆ ಪತ್ತೆ: ಜನರಲ್ಲಿ ಹೆಚ್ಚಿದ ಆತಂಕ!

    June 16, 2025

    ICC 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಬಿಡುಗಡೆ: ಯಾರ ವಿರುದ್ಧ ಎಷ್ಟು ಪಂದ್ಯ ಆಡಲಿದೆ ಟೀಂ ಇಂಡಿಯಾ?

    June 15, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.