Close Menu
Ain Live News
    Facebook X (Twitter) Instagram YouTube
    Thursday, June 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕನ್ನಡ ಚಿತ್ರರಂಗದ ಬೆನ್ನುಮೂಳೆ ಇಷ್ಟು ವೀಕ್ ಆಗಿದೆಯಾ?

    By Author AINMay 2, 2025
    Share
    Facebook Twitter LinkedIn Pinterest Email
    Demo

    ಕನ್ನಡ ಚಿತ್ರರಂಗ ಭಾಷೆ, ಗಡಿ ದಾಟಿ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಸಾಧನೆ ಮಾಡಿದೆ. ಕೆಜಿಎಫ್‌, ಕಾಂತಾರ, ಚಾರ್ಲಿ 777 ಸಿನಿಮಾಗಳು ಇಂಡಿಯನ್ ಸಿನಿ ಇಂಡಸ್ಟ್ರೀ ಇತಿಹಾಸದಲ್ಲಿ ತಿಕ್ಕಿ ಅಳಿಸಿ ಹಾಕದಂತಹ ದಾಖಲೆ ಬರೆದಿವೆ. ಆದ್ರೆ ಇಂತಹ ಚಿತ್ರರಂಗವನ್ನು ಕಡೆಗಣಿಸಲಾಗುತ್ತಿದೆಯೇ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ..ನಿನ್ನೆಯಿಂದ ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್‌ ಶೃಂಗಸಭೆ.

    ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಮನರಂಜನಾ ಕೇಂದ್ರವನ್ನಾಗಿ ಮಾಡುವ ಗುರಿಯೊಂದಿಗೆ ವೇವ್ಸ್‌-ವಿಶ್ವ ಆಡಿಯೋ ವಿಷುಯಲ್ ಎಂಟರ್ಟೈನ್ಮೆಂಟ್) ಶೃಂಗಸಭೆಯನ್ನು ಆಯೋಜಿಸಲಾಗಿದೆ. ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ಮುಂಬೈನಲ್ಲಿ ಬಹಳ ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಈ ಸಭೆ ಕನ್ನಡ ಚಿತ್ರರಂಗ ಹೊರತುಪಡಿಸಿ ಬೇರೆ ಇಂಡಸ್ಟ್ರೀಯ ತಾರೆಯರು ಭಾಗಿಯಾಗಿದ್ದಾರೆ. ಈ ಶೃಂಗಸಭೆಗೆ ಕನ್ನಡಿಗರಿಗೆ ಆಹ್ವಾನ ನೀಡಿಲ್ವಾ ಎಂಬ ಚರ್ಚೆ ಶುರುವಾಗಿದ್ದು, ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವೀರಕಪುತ್ರ ಶ್ರೀನಿವಾಸ್‌ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?

    ಕನ್ನಡ ಚಿತ್ರರಂಗದ ಬೆನ್ನುಮೂಳೆ ಇಷ್ಟು ವೀಕ್ ಆಗಬಾರದಿತ್ತು. “ಕನೆಕ್ಟಿಂಗ್ ಕ್ರಿಯೇಟರ್ಸ್, ಕನೆಕ್ಟಿಂಗ್ ಕಂಟ್ರಿಸ್” ಎಂಬ ಟ್ಯಾಗ್‌ಲೈನ್‌ನೊಂದಿಗೆ ಭಾರತವನ್ನು ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ಆವಿಷ್ಕಾರಗಳಿಗಾಗಿ ಜಾಗತಿಕ ಕೇಂದ್ರವನ್ನಾಗಿಸಲು ವೇವ್ಸ್ 2025 ಎಂಬ ನಾಲ್ಕು ದಿನಗಳ ಶೃಂಗಸಭೆ ಭಾರತ ಸರ್ಕಾರದಿಂದ ನಡೆದಿದೆ. ಇದ್ಯಾವುದೋ ಪ್ರಶಸ್ತಿ ಪ್ರದಾನ ಸಮಾರಂಭವೋ, ಔತಣಕೂಟವೋ ಆಗಿರಲಿಲ್ಲ. ಭಾರತವನ್ನು ಮನರಂಜನೆಯ ಜಾಗತಿಕ ಕೇಂದ್ರವನ್ನಾಗಿಸುವ ಹಿನ್ನಲೆಯಲ್ಲಿ ರೂಪಗೊಂಡ ಅತ್ಯಂತ ಮಹತ್ವದ ಸಭೆಯಾಗಿತ್ತು. ಆ ಸಭೆಯಲ್ಲಿ ಹಿಂದಿ, ತೆಲುಗು, ತಮಿಳು, ಮಲೆಯಾಳಂನವರೆಲ್ಲರೂ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಲಾಲ್ ಅವರಂತೂ ಅವರ ಸಿನಿಮಾ ಇಂಡಸ್ಟ್ರಿ ಬಗ್ಗೆ ಅತ್ಯಂತ ಮೌಲ್ಯಯುತವಾದ ಮಾತುಗಳನ್ನು ಆಡಿದರು. ಆದರೆ ಕನ್ನಡದಿಂದ ಒಬ್ಬೇ ಒಬ್ಬರೂ ಅಲ್ಲಿ ಕಾಣಿಸಿಕೊಂಡಿಲ್ಲ. ರಾಕ್ ಲೈನ್ ವೆಂಕಟೇಶ್, ನಾಗಾಭರಣ ಅವರು ಇದ್ರಂತೆ ಅನ್ನೋದು ನಮಗಿಲ್ಲಿ ಮುಖ್ಯವಾಗಬಾರದು. ಚಿರಂಜೀವಿ, ರಜನಿಕಾಂತ್, ಮೋಹನ್ ಲಾಲ್, ಅಕ್ಷಯಕುಮಾರ್, ಮಿಥುನ್ ಚಕ್ರವರ್ತಿ, ಹೇಮಮಾಲಿನ ತರಹದವರು ಆ ಸಭೆಯಲ್ಲಿ ಭಾಗವಹಿಸುತ್ತಿರುವಾಗ ಕನ್ನಡದಿಂದ ಯಾರು ಹೋಗಬೇಕಿತ್ತು? ಅನ್ನೋದನ್ನು ನಿಮ್ಮ ಅಂದಾಜಿಗೇ ಬಿಡುವೆ. ಕನ್ನಡ ಚಿತ್ರರಂಗದಲ್ಲಿ ಈ ಮಟ್ಟದ ಶೂನ್ಯ ಸೃಷ್ಠಿಸಿಬಿಟ್ಟರಲ್ಲ ಈ ಹೊಸ ಪೀಳಿಗೆಯವರು! ನನಗಿಲ್ಲಿ ಇನ್ನೂ ಒಂದು ಅನುಮಾನ ಕಾಡುತ್ತಿದೆ. ಶಿವರಾಜ್ ಕುಮಾರ್, ರವಿಚಂದ್ರನ್, ಅನಂತ್ ನಾಗ್ ಸುದೀಪ್, ಯಶ್ ಹೀಗೆ ಯಾರಾದರೊಬ್ಬರು ಹೋಗಬಹುದಿತ್ತು. ಆದ್ರೆ ಇವರು ಯಾರೂ ಹೋಗಲಿಲ್ಲ! ಅದರರ್ಥ ಅವರೇ ಕರೆಯಲಿಲ್ಲವಾ ಅಥವಾ ಕರೆದರೂ ಇವರು ಹೋಗಲಿಲ್ಲವಾ? ಎರಡೂ ತಪ್ಪೇ! ಎರಡೂ ಸಹ ಖಂಡನೆಗೆ ಅರ್ಹವಾದ ವಿಷಯಗಳು. ರಾಜ್, ವಿಷ್ಣು, ಅಂಬಿಯವರು ಇದ್ದಿದ್ರೆ ಇಂತಹ ಸ್ಥಿತಿ ಇರ್ತಿತ್ತಾ? ಅತ್ಯಂತ ಘನತೆಯನ್ನು ಹೊಂದಿದ್ದ ಕನ್ನಡ ಚಿತ್ರರಂಗವೀಗ ಪರಭಾಷೆಯವರಿಗೆ ಪೋಷಕ ನಟರನ್ನು ಒದಗಿಸುವ ಚಿತ್ರರಂಗವಾಗಿಬಿಟ್ಟಿದೆ. ನಮ್ಮಲ್ಲಿನ ಸ್ಟಾರುಗಳು ಅಲ್ಲೀಗ ಪೋಷಕ ನಟರು. ಹ್ಮಾ… ಅದೇ ಮಹಾಸಾಧನೆ ಎಂಬಂತೆ ನಾವೂ ಪ್ರಚಾರ ಕೊಡ್ತಿದ್ದೀವಿ. ಪರಭಾಷಿಕರು ನಮ್ಮ ಮಾರುಕಟ್ಟೆಯನ್ನು ಕಬ್ಜಾ ಮಾಡಲು ಅನುಸರಿಸುತ್ತಿರುವ ತಂತ್ರ ಅನ್ನೋದನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಯಾಕಿಷ್ಟು ತಡಮಾಡಿಬಿಟ್ಟೆವು ಅನ್ನೋದು ಅರ್ಥವಾಗುತ್ತಿಲ್ಲ! ನಿನ್ನೆ ತೆಲುಗಿನ ನಾನಿಯ ಹಿಟ್ 3 ಸಿನಿಮಾ, ಆಂಧ್ರ, ತೆಲಂಗಾಣ ಬಿಟ್ಟರೆ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕಲೆಕ್ಸನ್ ಮಾಡಿರೋದು ಮತ್ತು ಸೂರ್ಯನ ರೆಟ್ರೋ ಸಿನಿಮಾ ತಮಿಳುನಾಡು ಬಿಟ್ಟರೆ ಕರ್ನಾಟಕದಲ್ಲಿಯೇ ಹೆಚ್ಚು ಸಂಪಾದಿಸಿರೋದು! ಅಂದ್ರೆ ನಮ್ಮ ಕರುನಾಡು ಅವರುಗಳಿಗೆ ಎಷ್ಟೊಳ್ಳೆ ಮಾರುಕಟ್ಟೆಯಾಗಿದೆ ಅನ್ನೋದನ್ನು ನೀವೇ ಅರ್ಥಮಾಡಿಕೊಳ್ಳಿ. ಕನ್ನಡ ಚಿತ್ರರಂಗದ ಬೆನ್ನುಮೂಳೆ ಇಷ್ಟು ವೀಕ್ ಆಗಬಾರದಿತ್ತು.

    -ವೀರಕಪುತ್ರ ಶ್ರೀನಿವಾಸ್

    Demo
    Share. Facebook Twitter LinkedIn Email WhatsApp

    Related Posts

    ಮಂಗ್ಲಿ ಬರ್ತಡೇ ಪಾರ್ಟಿಯಲ್ಲಿ ನಡೆದಿದ್ದೇನು? ವಿಡಿಯೋ ಬಿಡುಗಡೆ ಮಾಡಿದ ಗಾಯಕಿ!

    June 12, 2025

    ಮೌನ ಮುರಿದ ಮಂಗ್ಲಿ… ಡ್ರಗ್ಸ್ ಪ್ರಕರಣದ ಬಗ್ಗೆ ಗಾಯಕಿ ಕೊಟ್ಟ ಸ್ಪಷ್ಟನೆ ಏನು? Video ವೈರಲ್!

    June 12, 2025

    Kantara: “ಕಾಂತಾರ: ಚಾಪ್ಟರ್ 1′ ಚಿತ್ರತಂಡದ ಮತ್ತೊಬ್ಬ ಕಲಾವಿದ ನಿಧನ..!

    June 12, 2025

    Shooting Accident: ರಾಮ್ ಚರಣ್ ನಿರ್ಮಾಣದ ಸಿನಿಮಾ ಸೆಟ್’ನಲ್ಲಿ ಪ್ರವಾಹ..! ಸಿಬ್ಬಂದಿ ಗಾಯ

    June 12, 2025

    Mangli.. ಪಾರ್ಟಿಯಲ್ಲಿ ನಶೆಯ ಅಮಲು: ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಬೇಡಿ – ಮಂಗ್ಲಿ

    June 12, 2025

    ಬರ್ತ್’ಡೇ ದಿನವೇ ನಶೆಯಲ್ಲಿ ತೇಲಿದ್ರಾ ಮಂಗ್ಲಿ ..!? ರೆಸಾರ್ಟ್ ಮೇಲೆ ಪೊಲೀಸರ ದಾಳಿ: ಡ್ರಗ್ಸ್ ಪತ್ತೆ, ದೂರು ದಾಖಲು!

    June 11, 2025

    AS Ravi Kumar: ಚಿತ್ರರಂಗದಲ್ಲಿ ಮತ್ತೊಂದು ದುರಂತ: ಹೃದಯಾಘಾತದಿಂದ ಖ್ಯಾತ ನಿರ್ದೇಶಕ ನಿಧನ

    June 11, 2025

    ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್: ನಟ ದರ್ಶನ್, ಪವಿತ್ರಾ ಬಂಧನಕ್ಕೆ ಒಂದು ವರ್ಷ!

    June 11, 2025

    Katrina Kaif: ಮಾಲ್ಡೀವ್ಸ್’ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿ ಕತ್ರಿನಾ ಕೈಫ್ ನೇಮಕ..!

    June 10, 2025

    Deepika Padukone: ತಂದೆಯ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬ್ಯಾಡ್ಮಿಂಟನ್ ಶಾಲೆ ಆರಂಭಿಸಿದ ದೀಪಿಕಾ ಪಡುಕೋಣೆ..!

    June 10, 2025

    Dhanush: ವಾಯುಪಡೆ ಅಧಿಕಾರಿಯಾಗಿ ನಟ ಧನುಷ್: ವೈರಲ್ ಆಯ್ತು ಹೊಸ ಸಿನಿಮಾ ಲುಕ್

    June 9, 2025

    ಸಿನಿಮಾ ರೂಪದಲ್ಲಿ ಬರಲಿದೆ ʼವೃಕ್ಷಮಾತೆʼ ಜೀವನಗಾಥೆ..ಸಾಲುಮರದ ತಿಮ್ಮಕ್ಕನ ಪಾತ್ರದಲ್ಲಿ ಯಾರು?

    June 9, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.