ಬೆಂಗಳೂರು: ಸಚಿವ ತಿಮ್ಮಾಪುರ ಪಹಲ್ಗಾಮ್ ಉಗ್ರರ ಸಂದರ್ಶನ ಮಾಡಿಕೊಂಡು ಬಂದಂತಿದೆ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ತಿಮ್ಮಾಪುರ ಉಗ್ರರ ಸಂದರ್ಶನ ಮಾಡಿದ್ದಾರೆಯೇ ಅಥವಾ ಉಗ್ರರು ಮಾತಾಡಿರುವುದನ್ನು ಕೇಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಇವರಿಗೆ ವೋಟು ಮುಖ್ಯವೇ ಹೊರತು ದೇಶವಲ್ಲ ಎಂದು ಹೇಳಿದರು. ಇನ್ನೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪಿಓಕೆ ವಶಪಡಿಸಿಕೊಳ್ಳಿ, ನಾವು ನಿಮ್ಮ ಬೆಂಬಲದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಮಾವಿನಹಣ್ಣನ್ನು ರಾತ್ರಿ ವೇಳೆ ತಿಂತೀರಾ!? ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!
ಡಿಕೆ ಶಿವಕುಮಾರ್ ದೇಶ ಮೊದಲು ಎಂದು ಹೇಳಿದ್ರು. ಇವರಿಬ್ಬರೂ ಕಾಂಗ್ರೆಸ್ ನವರು, ಸಿಎಂ ಸಿದ್ದರಾಮಯ್ಯ ಅವರು ತೆಲಂಗಾಣ ಸಿಎಂ ಮತ್ತು ಡಿಕೆ ಶಿವಕುಮಾರ್ ಅವರಿಂದ ಪಾಠ ಕಲಿಯಬೇಕು ಎಂದು ಆರ್ ಅಶೋಕ್ ಮೊಟಕಿದ್ದಾರೆ.