ಬೆಂಗಳೂರು:- ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಗ್ಯಾರಂಟಿ ಟೀಕಿಸುವ ಭರದಲ್ಲಿ ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಮಾತನಾಡಿದ ನಿಖಿಲ್, ಗ್ಯಾರಂಟಿ ಯಿಂದ ಹಿಮಾಚಲ ಪ್ರದೇಶ ದಿವಾಳಿಯಾಗಿದೆ. ತೆಲಂಗಾಣದಲ್ಲಿ ಸಿಎಂ ಎಷ್ಟು ಸಾಲ ಆಗಿದೆ ಅಂತ ಗೊತ್ತಾಗಿಲ. ಗ್ಯಾರಂಟಿಗಳಿಂದ ಸಾಲ ಆಗಿದೆ. ಮುಂದೆ ಎಲ್ಲಿ ದಿವಾಳಿ ಆಗುತ್ತೆ ಅಂತ ಅಲ್ಲಿನ ಸಿಎಂ ಹೇಳಿದ್ದಾರೆ.ಗ್ಯಾರಂಟಿ ಘೋಷಣೆ ಮಾಡುವ ಮುನ್ನ ನಮ್ಮ ಆರ್ಥಿಕ ಪರಿಸ್ಥಿತಿ ಅವಲೋಕಿದೆ ತೀರ್ಮಾನ ಮಾಡಿದ್ದಾರೆ.ನಾವು ಗ್ಯಾರಂಟಿ ಯೋಜನೆ ನಮ್ಮ ವಿರೋಧ ಇಲ್ಲ. ಅದರೆ ನೀವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಾ? ಆಡಳಿತ ಪಕ್ಷ ಶಾಸಕರು,ಅನುಭವಿ ಶಾಸಕರು ಇದ್ದಾರೆ. ಆಡಳಿತ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿದ ಸಂದರ್ಭದಲ್ಲಿ ಅವ್ರ ಪರಿಸ್ಥಿತಿ ನಿಮಗೆ ತಿಳಿಯುತ್ತೆ. ರಾಜ್ಯದಲ್ಲಿ ಅಭಿವೃದ್ಧಿ ಕಾಣದಂತೆ ನೋಡಬಹುದು.ಇತ್ತೀಚೆಗೆ ೧೦ ಕೋಟಿ ನೀಡಿದ್ದಾರೆ. ಆ ೧೦ ಕೋಟಿಯಲ್ಲಿ ಎಷ್ಟು ರಸ್ತೆ ಅಭಿವೃದ್ಧಿ ಮಾಡೋಕೆ ಆಗುತ್ತೆ. ಇದು ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿಗೆ ತಲುಪಿದೆ. ಎಸ್ಸಿ ಎಸ್ಟಿ ಅಭಿವೃದ್ಧಿ ಗೆ ನಾವು ಶ್ರಮಿಸಿದ್ದೇವೆ ಕಾಂಗ್ರೆಸ್ ಸಂಸದರು ಹೇಳಿದ್ದಾರೆ ರಾಹುಲ್ ಗಾಂಧಿ ಸಂವಿಧಾನ ಪುಸ್ತಕವನ್ನು ಗಂಟೆ ಅಲ್ಲಾಡಿಸಿದಾಗೆ ಅಲ್ಲಾಡಿಸುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಈ ಮೂಲಕ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಇನ್ನೂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದಕ್ಕೆ ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿಕೆಯೇ ಸಾಕ್ಷಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸಿಎಂ ಆರ್ಥಿಕ ಸಲಹೆಗಾರರೇ ಹೇಳಿದ್ದಾರೆ. ಇಷ್ಟು ಮುಕ್ತವಾಗಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವುದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಕರ್ನಾಟಕ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಹಿಂದೆಯೂ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಮೇಲೆ ಪರಿಣಾಮ ಬೀರಿದೆ. ಅಭಿವೃದ್ಧಿಗೆ ಹಣ ಕೊಡಲು ಆಗುತ್ತಿಲ್ಲ. ಅಭಿವೃದ್ಧಿ ಕುಂಠಿತವಾಗಿದೆ ಅಂತ ಅವರೇ ಹೇಳಿದ್ದಾರೆ. ಇದೆಲ್ಲ ರಾಜ್ಯ ಸರ್ಕಾರ ಹೇಗೆ ಆಡಳಿತ ಮಾಡುತ್ತಿದೆ, ಸರ್ಕಾರದ ವೈಫಲ್ಯ ಏನು ಎಂದು ಗೊತ್ತಾಗುತ್ತಿದೆ ಎಂದು ಹರಿಹಾಯ್ದರು.