ವಕೀಲರ ಪರಿಷತ್ತಿನ ಸದಸ್ಯ ಸದಾಶಿವ ರೆಡ್ಡಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ: ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸದಾಶಿವರೆಡ್ಡಿ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣವನ್ನ ಖಂಡಿಸಿ ಹುಬ್ಬಳ್ಳಿಯಲ್ಲಿ ವಕೀಲರು ಹೊಸ ಕೋರ್ಟ್ ಆವರಣದಲ್ಲಿ  ಕೆಂಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸದಾಶಿವರೆಡ್ಡಿ ಮೇಲಿನ ಹಲ್ಲೆ ಅಕ್ಷಮ್ಯ ಅಪರಾಧ ಆಗಿದ್ದು  ವಕೀಲರು ಬಲಗೈಗೆ ಕೆಂಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿ, ತಹಶೀಲ್ದಾರ್‌ಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದರು. ಕೇಸು ಕೊಡುವ ನೆಪದಲ್ಲಿ ಏ.16ರಂದು ಅವರ ಕಚೇರಿಗೆ ಬಂದು ಪೈಪಿನಿಂದ ಹಲ್ಲೆ  ಮಾಡಲಾಗಿದೆ. … Continue reading ವಕೀಲರ ಪರಿಷತ್ತಿನ ಸದಸ್ಯ ಸದಾಶಿವ ರೆಡ್ಡಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ