ಐಹೊಳೆ ಮಗನ ಮದುವೆಯಲ್ಲಿ ರಮೇಶ ಜಾರಕಿಹೊಳಿ ; ರಾಜು ಕಾಗೆ ಜೊತೆಗೆ ಭರ್ಜರಿ ಮಾತುಕತೆ

ಚಿಕ್ಕೋಡಿ : ಅಥಣಿ ಪಟ್ಟಣದಲ್ಲಿ ರಾವಸಾಹೇಬ ಐಹೊಳೆ ಮಗನ ಮದುವೆಯಲ್ಲಿ ರಮೇಶ ಜಾರಕಿಹೋಳಿ ಭಾಗಿಯಾಗಿ, ನವವಧುವರರಿಗೆ ಶುಭ ಹಾರೈಸಿದ್ದಾರೆ. ಇನ್ನೂ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಗೋಕಾಕ ರೆಬಲ್ ಶಾಸಕ ರಮೇಶ ಜಾರಕಿಹೋಳಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿದ್ದು, ಚರ್ಚೆ ಗ್ರಾಸವಾಗಿದೆ.   ಇನ್ನೊಂದೆಡೆ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ರಮೇಶ ಜಾರಕಿಹೋಳಿ ನಡುವೆ ಭಿನ್ನಾಭಿಪ್ರಾಯ ಜೋರಾಗೇ ನಡೆಯುತ್ತಲಿದ್ದು, ಇದೀಗ ಅಥಣಿಯ ಶಾಸಕ ರಮೇಶ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಸ್ಥಳೀಯರಲ್ಲಿ ಗುಸು ಗುಸು ಶುರುವಾಗಿದೆ.