Close Menu
Ain Live News
    Facebook X (Twitter) Instagram YouTube
    Thursday, June 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಎಲ್ಲೆಲ್ಲೂ RCBಯದ್ದೇ ಹವಾ: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲೂ ಬೆಂಗಳೂರು ಫ್ಯಾನ್ಸ್!

    By AIN AuthorApril 17, 2025
    Share
    Facebook Twitter LinkedIn Pinterest Email
    Demo

    ಕ್ರಿಕೆಟ್‌ ಜಗತ್ತಿನಲ್ಲಿ ಈಗ ಎರಡು ಪ್ರಮುಖ ಲೀಗ್‌ಗಳು ಏಕಕಾಲಕ್ಕೆ ಗಮನ ಸೆಳೆಯುತ್ತಿವೆ. ಒಂದೆಡೆ ಭಾರತದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ತನ್ನ ಹಿರಿಮೆಯೊಂದಿಗೆ ನಡೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) 2025 ಆವೃತ್ತಿಯು ಸದ್ದು ಮಾಡುತ್ತಿದೆ. ಐಪಿಎಲ್‌ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಲೀಗ್‌ ಎಂಬ ಖ್ಯಾತಿಯನ್ನು ಹೊಂದಿದ್ದು, ಆಟಗಾರರಿಗೆ ದೊಡ್ಡ ಮೊತ್ತದ ಹಣವನ್ನು ನೀಡುತ್ತದೆ. ಆದರೆ, ಪ್ಲೇಯರ್‌ ಆಫ್‌ ದಿ ಮ್ಯಾಚ್‌’ ಪ್ರಶಸ್ತಿಯಂತಹ ವಿಷಯಕ್ಕೆ ಬಂದಾಗ ಪಿಎಸ್‌ಎಲ್‌ ಐಪಿಎಲ್‌ಗಿಂತ ಶ್ರೇಷ್ಟ ಎಂದು ಪಾಕಿಸ್ತಾನದ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಸಿದ್ದಾರೆ.

    ವಕ್ಫ್ ವಿರುದ್ಧ ಸಿಡಿದೆದ್ದ ಮುಸ್ಲಿಂ ಸಂಘಟನೆಗಳು: ಇದು ಸರಿಯಲ್ಲ ಎಂದ ಹೈಕೋರ್ಟ್!

    ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅತೀ ಹೆಚ್ಚು ಜನಮನ್ನಣೆ ಪಡೆದಿರುವ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಚೂಣಿಯಲ್ಲಿದೆ. ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಜರುಗುತ್ತಿದ್ದರೆ, ಮತ್ತೊಂದೆಡೆ ಪಾಕ್​ನಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ ನಡೆಯುತ್ತಿದೆ. ಒಂದೇ ಸಮಯದಲ್ಲಿ ಎರಡು ಲೀಗ್​ಗಳು ಜರುಗುತ್ತಿರುವುದರಿಂದ ಯಾವ ಟೂರ್ನಿ ಬೆಸ್ಟ್ ಎಂಬ ಚರ್ಚೆಗಳು ಕೂಡ ಜೋರಾಗಿದೆ. ಈ ಚರ್ಚೆಗಳ ನಡುವೆಯೇ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಅಭಿಮಾನಿಗಳು ಕಾಣಿಸಿಕೊಂಡಿದ್ದಾರೆ.

    ಕರಾಚಿಯ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಿಎಸ್​ಎಲ್​ನ 6ನೇ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ಹಾಗೂ ಕರಾಚಿ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ ಅಭಿಮಾನಿಗಳಲ್ಲಿ ಇಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ಯಾನ್​​ಗಳಿದ್ದರು ಎಂಬುದು ವಿಶೇಷ.

    ಪಂದ್ಯದ ನಡುವೆ ಆರ್​ಸಿಬಿ ಜೆರ್ಸಿ ಧರಿಸಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದ ಇಬ್ಬರ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ, ಇಂಡಿಯನ್ ಪ್ರೀಮಿಯರ್ ಲೀಗ್ ಅಥವಾ ಪಾಕಿಸ್ತಾನ್ ಸೂಪರ್ ಲೀಗ್ ಗಳಲ್ಲಿ ಯಾವುದು ಬೆಸ್ಟ್​ ಎಂಬ ಪ್ರಶ್ನೆಗೆ ಈ ಫೋಟೋ ಉತ್ತರ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ವಿಮಾನ ದುರಂತ: ಕೊಹ್ಲಿ, ರೋಹಿತ್ ಸೇರಿ ಹಲವು ಕ್ರಿಕೆಟಿಗರಿಂದ ಸಂತಾಪ!

    June 12, 2025

    ಕಾಲ್ತುಳಿತ ಕೇಸ್ : ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ ನಿಖಿಲ್ ಸೋಸಲೆ​​ ಸೇರಿ ನಾಲ್ವರಿಗೆ ಜಾಮೀನು!

    June 12, 2025

    ಕಾಲ್ತುಳಿತ ಪ್ರಕರಣ: ವಿರಾಟ್‌ ಕೊಹ್ಲಿ ಆಪ್ತನಿಗೆ ನಿಖಿಲ್ ಸೋಸಲ್​​ಗೆ​ ಮಧ್ಯಂತರ ಜಾಮೀನು ಮಂಜೂರು!

    June 12, 2025

    Bengaluru Stampede Case: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಎಂಟ್ರಿ – ಸುಮೊಟೊ ಕೇಸ್ ದಾಖಲು

    June 12, 2025

    South Africa vs Australia, Final: ಫೈನಲ್’ನಲ್ಲಿ ಅರ್ಧಶತಕ! 100 ವರ್ಷಗಳ ಹಿಂದಿನ ವಿಶ್ವ ದಾಖಲೆ ಮುರಿದ ಸ್ಟೀವ್ ಸ್ಮಿತ್!

    June 12, 2025

    ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಮಿನಿ IPLಗೆ ವೇದಿಕೆ ಸಜ್ಜು – ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

    June 12, 2025

    RCB ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? DCM ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ!

    June 11, 2025

    ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ದೊಡ್ಡ ಬದಲಾವಣೆಗಳು! ಅಜಂ ಸೇರಿದಂತೆ ಇಬ್ಬರು ಔಟ್

    June 11, 2025

    ವದಂತಿ ನಂಬದಿರಿ.. ಆರ್​​ಸಿಬಿ ಮಾರಾಟ ಮಾಡುವುದಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ

    June 10, 2025

    ಸರ್ಕಾರಕ್ಕೆ ‘ಕಾಲ್ತುಳಿತ’ ಟೆನ್ಷನ್: ಜೂ.13ರಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರೊಟೆಸ್ಟ್!

    June 10, 2025

    ಬೆಂಗಳೂರು ಕಾಲ್ತುಳಿತ: RCB ಮಾರ್ಕೆಟಿಂಗ್ ಹೆಡ್’ಗೆ ನಿರಾಸೆ – ವಿಚಾರಣೆ ಮುಂದೂಡಿಕೆ

    June 10, 2025

    Stadium Stampede: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳು ಶಿಫ್ಟ್!

    June 10, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.