Close Menu
Ain Live News
    Facebook X (Twitter) Instagram YouTube
    Monday, June 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ರಾಜಮೌಳಿಯ ಕನಸಿನ ಮಹಾಭಾರತದಲ್ಲಿ ಆ ಸ್ಟಾರ್‌ ನಟನಿಗೆ ಪಾತ್ರ ಖಾಯಂ! ಯಾರದು?

    By Author AINApril 28, 2025
    Share
    Facebook Twitter LinkedIn Pinterest Email
    Demo

    ಭಾರತೀಯ ಚಿತ್ರರಂಗ ಕಂಡ ಸ್ಟಾರ್‌ ಸಿನಿಮಾ ಮೇಕರ್‌ ಎಸ್‌ ಎಸ್‌ ರಾಜಮೌಳಿ ಪೌರಾಣಿಕ ಸಿನಿಮಾಗಳನ್ನು ತೆರೆಮೇಲೆ ಅನಾವರಣ ಮಾಡುವಲ್ಲಿ ನಿಸ್ಸೀಮರು. ಇಂತಹ ಜಕ್ಕಣ್ಣನಿಗೆ ಮಹಾಭಾರತವನ್ನು ಬೆಳ್ಳಿತೆರೆಯಲ್ಲಿ ತರುವ ದೊಡ್ಡ ಕನಸಿದೆ. ಹತ್ತು ಭಾಗದಲ್ಲಿ ಮಹಾಭಾರತ ಸಿನಿಮಾ ಮಾಡುವ ಗುರಿ ಅವರಿಗಿದೆ. ಈ ಬಿಗ್‌ ಪ್ರಾಜೆಕ್ಟ್‌ನಲ್ಲಿ ಯಾವ ಸೂಪರ್‌ ಸ್ಟಾರ್‌ ಇರಲಿದ್ದಾರೆ ಎಂಬ ಕುತೂಹಲವಂತೂ ಇದ್ದೇ ಇದೆ.

    ಮಹಾಭಾರತ ಸಿನಿಮಾ ರಾಜಮೌಳಿಯ ಡ್ರೀಮ್‌ ಪ್ರಾಜೆಕ್ಟ್.‌ ತಮ್ಮ ಚಿತ್ರ ಕೇವಲ ತೆಲುಗು ಜನರಿಗೆ ಮಾತ್ರವಲ್ಲ, ಪ್ರಪಂಚದ ಮೂಲೆ ಮೂಲೆಯಲ್ಲಿರುವ ಜನರಿಗೆ ತಲುಪಿಸೋದೆ ರಾಜಮೌಳಿಯವರ ಯೋಜನೆ. ಮಹಾಭಾರತ ಸಿನಿಮಾ ವಿಶ್ವ ಸಿನಿಮಾರಂಗದಲ್ಲೇ ಮೆರೆಯಬೇಕು ಅನ್ನೋದು ಇವರ ಕನಸು. ‘ಅವೆಂಜರ್ಸ್’ ಮತ್ತು ‘ಅವತಾರ್’ ಮಾದರಿಯಲ್ಲಿ ಈ ಚಿತ್ರ ನಿರ್ಮಾಣ ಮಾಡುವ ಕನಸು ಹೊಂದಿದ್ದಾರೆ ರಾಜಮೌಳಿ. ಅದಕ್ಕಾಗಿ ಯಾವ ತಾರೆಯರು ಬಣ್ಣ ಹಚ್ಚಲಿದ್ದಾರೆ ಅನ್ನೋದು ಸಸ್ಪೆನ್ಸ್.‌ ಆದ್ರೀಗ ಇದೀಗ ರಾಜಮೌಳಿ ತಮ್ಮ ಮಹಾಭಾರತದಲ್ಲಿ ಆ ಸ್ಟಾರ್‌ ಹೀರೋಗೆ ಪಾತ್ರವೊಂದನ್ನು ಖಾಯಂಗೊಳಿಸಿದ್ದಾರೆ.

    ಜಕ್ಕಣ್ಣನ ಮಹಾಭಾರತದಲ್ಲಿ ನ್ಯಾಚುರಲ್‌ ಸ್ಟಾರ್‌ ನಾನಿಗೆ ಪಾತ್ರವೊಂದು ಖಾಯಂ ಆಗಿದೆ. ನಾನಿ ನಟನೆಯ ‘ಹಿಟ್- 3’ ಸಿನಿಮಾ ಪ್ರೀ ರಿಲೀಸ್ ಈವೆಂಟ್ ವೇಳೆ ವಿಶೇಷ ಅತಿಥಿಯಾಗಿ ಬಂದಿದ್ದ ನಿರ್ದೇಶಕ ರಾಜಮೌಳಿ ಈ ಸಂದರ್ಭದಲ್ಲಿ ಮಹಾಭಾರತ ಚಿತ್ರದ ವಿಷಯವನ್ನು ರಿವೀಲ್‌ ಮಾಡಿದ್ದಾರೆ.

    Definitely #Nani will be part of my film based on Mahabharata says #SSRajamouli. pic.twitter.com/hvdcDKjnKp

    — Films Spicy (@Films_Spicy) April 28, 2025

    ನಿರೂಪಕಿ ಸುಮಾ, ರಾಜಮೌಳಿ ಸರ್ ನೀವು ನಿರ್ದೇಶನದ ‘ಮಹಾಭಾರತ’ ಚಿತ್ರ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಈ ಚಿತ್ರದಲ್ಲಿ ನಾನಿ ಕೂಡ ನಟಿಸುತ್ತಾರೆ. ಅವರಿಗೆ ಒಂದು ಪಾತ್ರ ಫಿಕ್ಸ್ ಆಗಿದೆ ಎನ್ನುವ ಊಹಾಪೋಹ ಇದೆಯಂತೆ ನಿಜವೇ? ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮೌಳಿ, “ಹೌದು ನಾನಿ ಆ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದು ನಿಜ” ಎಂದಿದ್ದಾರೆ. ಆದರೆ ಯಾವ ಪಾತ್ರದ ಗುಟ್ಟನ್ನು ಜಕ್ಕಣ್ಣ ಬಿಟ್ಟುಕೊಟ್ಟಿಲ್ಲ.

    ‘ಮಹಾಭಾರತ’ ಕಥೆಯಲ್ಲಿ ಸಾಕಷ್ಟು ಅದ್ಭುತ ಪಾತ್ರಗಳಿವೆ. ನಟ ನಾನಿಗೆ ಯಾವ ಪಾತ್ರ ಸಿಗಬಹುದು? ಅನ್ನೋದು ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ. ಸದ್ಯ ರಾಜಮೌಳಿ ಮಹೇಶ್‌ ಬಾಬು ಜೊತೆ ಹೊಸ ಸಿನಿಮಾ ಬ್ಯುಸಿಯಲ್ಲಿದ್ದಾರೆ. ಈ ಚಿತ್ರದ ಬಳಿಕ ಮಹಾಭಾರತ ಸಿನಿಮಾ ಟೇಕಾಫ್‌ ಆಗಬಹುದು ಎಂಬ ನಿರೀಕ್ಷೆ ಇದೆ.

    Demo
    Share. Facebook Twitter LinkedIn Email WhatsApp

    Related Posts

    ಡಿಮ್ಯಾಂಡ್ ಕಳೆದುಕೊಂಡ್ರಾ ನ್ಯಾಷನಲ್ ಕ್ರಷ್!? ದಿಢೀರ್ ಸಂಭಾವನೆ ಕುಸಿತ?

    June 22, 2025

    ಪವರ್ ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್..’ಹರಿ ಹರ ವೀರ ಮಲ್ಲು ರಿಲೀಸ್ ಡೇಟ್‌ ಫಿಕ್ಸ್!

    June 21, 2025

    ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ 22 ಲಕ್ಷ ವಂಚನೆ!

    June 20, 2025

    ಸಂಜು ವೆಡ್ಸ್ ಗೀತಾ 2’ ತಂಡದ ಆರೋಪಕ್ಕೆ ರಚಿತಾ ತಿರುಗೇಟು: ವಿಡಿಯೋ ಮೂಲಕ ಡಿಂಪಲ್ ಕ್ವೀನ್ ಕೊಟ್ಟ ಕ್ಲಾರಿಟಿ ಇಲ್ಲಿದೆ!

    June 20, 2025

    ಯಶ್‌ ತಾಯಿ ನಿರ್ಮಾಣದ ಮೊದಲ ಚಿತ್ರ ಬಿಡುಗಡೆಗೆ ರೆಡಿ..ʼಕೊತ್ತಲವಾಡಿʼ ದರ್ಶನ ಯಾವಾಗ?

    June 20, 2025

    ಕಿಚ್ಚ ಸುದೀಪ್‌ ಹೆಸರಲ್ಲಿ ಪಂಗನಾಮ..ಯುವನಟನಿಗೆ ನಂದಕಿಶೋರ್‌ ದೋಖಾ…?

    June 20, 2025

    ಪ್ರಚಾರ ಅಖಾಡದಲ್ಲಿ ಎಕ್ಕ…ಜುಲೈ 18ಕ್ಕೆ ಯುವರಾಜ್ ಕುಮಾರ್ ಸಿನಿಮಾ ರಿಲೀಸ್

    June 20, 2025

    ʼಕನ್ನಡ ಕೋಗಿಲೆʼ ಗಾಯಕಿ ಬಾಳಲ್ಲಿ ಡಿವೋರ್ಸ್‌ ಬಿರುಗಾಳಿ..ಡಿವೋರ್ಸ್ ಅರ್ಜಿ ಬೆನ್ನಲ್ಲೇ ಪತಿ ಫೋಟೋಸ್ ಡಿಲೀಟ್

    June 20, 2025

    ಹೊಯ್ಸಳ ನಿರ್ದೇಶಕರ ಹೊಸ ಸಾಹಸ..ಹೇಗಿದೆ ʼಆಲ್ಫಾ ಮೆನ್ ಲವ್ ವೈಲೆನ್ಸ್ʼ ಸಿನಿಮಾ ಮೇಕಿಂಗ್‌?

    June 19, 2025

    ಮತ್ತೆ ಒಂದಾಯ್ತು ಟಗರು ಜೋಡಿ..ಶಿವಣ್ಣ-ಡಾಲಿ ಹೊಸ ಸಿನಿಮಾದ ಟೈಟಲ್‌ ರಿವೀಲ್..

    June 19, 2025

    ಲಕ್ಷ-ಲಕ್ಷ ವಂಚನೆ ಕೇಸ್: ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಗೋಲ್ಡ್ ಸುರೇಶ್!

    June 18, 2025

    ಹಿಟ್ ಫಿಲ್ಮ್ ಕೊಡಲಾರದಕ್ಕೆ ಮಲ್ಟಿಪ್ಲೆಕ್ಸ್’ನಿಂದ ಕನ್ನಡ ಸಿನಿಮಾ ತಗಿಯುತ್ತಿದ್ದಾರೆ: ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ

    June 18, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.