Close Menu
Ain Live News
    Facebook X (Twitter) Instagram YouTube
    Thursday, June 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕಾಲ್ತುಳಿತ ಕೇಸ್: RCB ಅಭಿಮಾನಿಗಳಿಂದ ಪರಸರಕ್ಕೂ ಹಾನಿ.. ದೂರು ದಾಖಲು!

    By AIN AuthorJune 8, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ, ಆರ್‌ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ದುರಂತ ಸಂಭವಿಸಿದೆ. 10ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿ ಸೂತಕವಾಗಿ ಆಗಿಬಿಟ್ಟಿತ್ತು. ಪಂಜಾಬ್ ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ದೀಪಾವಳಿಯಂಥಹ ಸಂಭ್ರಮ ಇತ್ತು.

    ನಾಲ್ವರು ಕಾಮುಕರಿಂದ ಇಬ್ಬರು ಅಪ್ರಾಪ್ತೆಯರ ಮೇಲೆ ಗ್ಯಾಂಗ್ ರೇಪ್!

    ಇದೇ ಖುಷಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಿಢೀರನೆ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ಸುನಾಮಿಯೇ ಸೃಷ್ಟಿ ಆಯ್ತು… ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಫ್ಯಾನ್ಸ್ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿ ಸಾಗರ ತಡೆಯಲು ಪೊಲೀಸರು ಹೈರಾಣಾಗಿ ಹೋದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸುನಾಮಿ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೀತು. ಆ ಬಳಿಕ 11 ಮಂದಿ ಸಾವನ್ನಪ್ಪಿದ್ದರು. ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರ, RCB ಪ್ರಾಂಚೈಸಿ ವಿರುದ್ಧ ಅಕ್ರೋಶ ಭುಗಿಲೆದ್ದಿದೆ.

    ಇನ್ನೂ ಈ ಅವಘಡದಲ್ಲಿ ಪರಿಸರಕ್ಕೂ ಹಾನಿ ಆಗಿದ್ದು, ಇದೀಗ ದೂರು ದಾಖಲಾಗಿದೆ. ಘಟನೆಯಿಂದ ಕಬ್ಬನ್​ ಪಾರ್ಕ್​​ನ ಗಿಡ, ಮರಗಳಿಗೂ ಹಾನಿ ಉಂಟಾಗಿದೆ. ಹೀಗಾಗಿ ಕಬ್ಬನ್​ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್​ರಿಂದ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

    ಆರ್​ಸಿಬಿ ಐಪಿಎಲ್​​ನಲ್ಲಿ ಕಪ್​​ ಗೆಲ್ಲುವ ಮೂಲಕ ಕನ್ನಡಿಗರ 18 ವರ್ಷದ ಕನಸು ನನಸಾಗಿತ್ತು. ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತದಿಂದ 11 ಜನ ಅಮಾಯಕರು‌ ಪ್ರಾಣ ತೆತ್ತರು. ಆದರೆ ವಿಧಾನಸೌಧ ಹಾಗೂ ಹೈಕೋರ್ಟ್ ಮುಂಭಾಗದಲ್ಲಿ ‌ಸೇರಿದ ಭಾರಿ ಜನರ ದಟ್ಟಣೆಯಿಂದಾಗಿ ಬ್ಯಾರಿಕೇಡ್​ಗಳು, ನೆಲಮಟ್ಟದ ಗಿಡಗಳನ್ನು ಅಥವಾ ಆರ್ನಮೆಂಟಲ್ ಪ್ಲಾಂಟ್ಸ್​ಗಳನ್ನು ಜನ ತುಳಿದು ಹಾಕಿದ್ದಾರೆ. ಇದರಿಂದಾಗಿ ಗಿಡಗಳೆಲ್ಲಾ ಮುರಿದು ಒಣಗಿ ಹೋಗಿ ಸರ್ವನಾಶವಾಗಿವೆ.

    ಕೇವಲ ವಿಧಾನಸೌಧ ಮುಂಭಾಗದ ಗಿಡಗಳಿಗೆ ಮಾತ್ರ ಹಾನಿಯಾಗಿಲ್ಲ. ಎದುರುಗಡೆ ಇರುವ ಕಬ್ಬನ್ ಪಾರ್ಕ್​​ನ ಗೇಟ್​ನ್ನು ಹಾರಿ ಜನ ಬಂದಿದ್ದರು. ಜೊತೆಗೆ ಪ್ರಾಣವನ್ನು ಲೆಕ್ಕಿಸದೇ ಮರವೇರಿ ಕುಳಿತ್ತಿದ್ದರು. ಇದರಿಂದ ಸಾಕಷ್ಟು ಮರಗಳಿಗೂ ಡ್ಯಾಮೇಜ್​ ಉಂಟಾಗಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರ್​ಸಿಬಿ, ಕೆಎಸ್ ಸಿಎ, ಡಿಎನ್​ಎ ವಿರುದ್ದ ಸಿಡಿ ಸಾಕ್ಷಿ ಸಮೇತ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    Rain News: ಕರ್ನಾಟಕದಲ್ಲಿ ನಾಳೆಯಿಂದ ಭಾರೀ ಮಳೆ: ಈ 9 ಜಿಲ್ಲೆಗಳಿಗೆ ರೆಡ್ ಅಲರ್ಟ್​!

    June 12, 2025

    ಅಹಮದಾಬಾದ್ ವಿಮಾನ ದುರಂತ: ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಟಾಟಾ ಗ್ರೂಪ್‌!

    June 12, 2025

    ವಿಮಾನ ದುರಂತ: ಕೊಹ್ಲಿ, ರೋಹಿತ್ ಸೇರಿ ಹಲವು ಕ್ರಿಕೆಟಿಗರಿಂದ ಸಂತಾಪ!

    June 12, 2025

    ನೀವು ಯಾವಾಗಲೂ ಮೊಬೈಲ್, ಟಿವಿ ಜಾಸ್ತಿ ನೋಡುತ್ತೀರಾ? ಹಾಗಿದ್ರೆ ನಿಮ್ಮ ಲೈಂಗಿಕ ಜೀವನ ಕಷ್ಟ..ಕಷ್ಟ!

    June 12, 2025

    ಕಾಲ್ತುಳಿತ ಕೇಸ್ : ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ ನಿಖಿಲ್ ಸೋಸಲೆ​​ ಸೇರಿ ನಾಲ್ವರಿಗೆ ಜಾಮೀನು!

    June 12, 2025

    ನಿರುದ್ಯೋಗ ನಿವಾರಣೆಗೆ ಕೃಷಿ ಕ್ಷೇತ್ರ ಆಸರೆ: ಸಚಿವ ಎನ್.ಚಲುವರಾಯಸ್ವಾಮಿ.

    June 12, 2025

    ಗ್ರಾಮೀಣ-ನಗರದ ಮಕ್ಕಳಿಗೆ ವಿಜ್ಞಾನದ ಪರಿಚಯ: ರಾಜ್ಯದಲ್ಲಿ ಎರಡು ನಕ್ಷತ್ರಮಂದಿರ ನಿರ್ಮಾಣ: ಹುಲಿಕಲ್‌ ನಟರಾಜ್‌

    June 12, 2025

    ಪೈಲಟ್ ‘ಮೇಡೇ ಮೇಡ್’ ಎನ್ನುತ್ತಿದ್ದಂತೆ ಪತನಗೊಂಡ ವಿಮಾನ..! ಮುಂದೆ ಆಗಿದ್ದೇ ಘೋರ ದುರಂತ

    June 12, 2025

    BREAKING.. ಅಹ್ಮದಾಬಾದ್ ವಿಮಾನ ದುರಂತ: ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಾವು!

    June 12, 2025

    ಯಮ ವಿಮಾನ: ಅಹಮದಾಬಾದ್‌ನಲ್ಲಿ ವಿಮಾನ ಪತನಕ್ಕೆ ಹಾರಿಹೋಯ್ತು 242 ಪ್ರಯಾಣಿಕರ ಪ್ರಾಣಪಕ್ಷಿ!

    June 12, 2025

    ಇದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಳಿಗೆ: ವಿಮಾನ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

    June 12, 2025

    Ahmedabad Plane Crash: ಏರ್ ಇಂಡಿಯಾ ವಿಮಾನ ದುರಂತ: ಮೃತರ ಸಂಖ್ಯೆ 133ಕ್ಕೆ ಏರಿಕೆ..!

    June 12, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.