ಕನ್ನಡದ ಸೂಪರ್‌ಸ್ಟಾರ್ ಉಪೇಂದ್ರ ಅಧಿಕೃತವಾಗಿ ರಾಮ್ ಪೋತಿನೇನಿ ಅವರ ಮುಂಬರುವ ತೆಲುಗು ಚಿತ್ರ ‘ರಾಪೋ 22’ ಗೆ ಸೇರ್ಪಡೆಗೊಂಡಿದ್ದಾರೆ. ಹೌದು ರಾಮ್ ಪೋತಿನೇನಿ ನಟನೆಯ 22ನೇ ಸಿನಿಮಾದಲ್ಲಿ ಉಪೇಂದ್ರ ಅವರು ಸೂರ್ಯ ಕುಮಾರ್ ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಅವರ ಪಾತ್ರದ ಲುಕ್ ಸಖತ್ ಸ್ಟೈಲೀಶ್ ಆಗಿದೆ.
Presenting you all 'SURYA KUMAR' from #RAPO22. My next Telugu Film ❤️🔥
Can’t wait to be on sets with my brother @ramsayz and our director @filmymahesh
The exciting #RAPO22TitleGlimpse drops on May 15th 💥#BhagyashriBorse @MythriOfficial @iamviveksiva @mervinjsolomon… pic.twitter.com/hswCTk2iQk
— Upendra (@nimmaupendra) May 13, 2025
ಶರ್ಟ್ ಮೇಲೆ ಜಾಕೆಟ್ ಹಾಕಿದ್ದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿದ್ದಾರೆ. ಅವರ ಬೆನ್ನ ಹಿಂದೆ ಕೂಡ ಲೈಟ್ ಮತ್ತು ಕ್ಯಾಮೆರಾ ಆನ್ ಆಗಿದೆ. ಹೀಗಾಗಿ ಚಿತ್ರದಲ್ಲಿಯೂ ಕೂಡ ಅವರು ಸೂಪರ್ ಸ್ಟಾರ್ ಪಾತ್ರ ಮಾಡ್ತಿರಬಹುದಾ ಎಂದು ಫ್ಯಾನ್ಸ್ ಊಹಿಸಿದ್ದಾರೆ.
ಉಪೇಂದ್ರ ಪಾತ್ರದ ಗ್ಲಿಂಪ್ಸ್ ಅನ್ನು ಮೇ 15ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಈ ಹಿಂದೆ ಅನುಷ್ಕಾ ಶೆಟ್ಟಿ ನಟಿಸಿದ್ದ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ನಿರ್ದೇಶನ ಮಾಡಿದ್ದ ಮಹೇಶ್ ಬಾಬು ಪಿ ಅವರು ಈಗ ರಾಮ್ ಪೋತಿನೇನಿ ಚಿತ್ರಕ್ಕೂ ನಿರ್ದೇಶನ ಮಾಡ್ತಿದ್ದಾರೆ. ಉಪೇಂದ್ರ ಈಗಾಗಲೇ ಸೌತ್ ಸಿನಿಮಾಗಳಲ್ಲಿ ಕೆಲಸ ಮಾಡಿ ಪಳಗಿದ್ದಾರೆ. ಈ ಹಿಂದೆ ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು.