ಮೀನುಗಾರಿಕಾ ಬೋಟ್ ನಲ್ಲಿ ಅನುಮಾನಾಸ್ಪದವಾಗಿ ಕಾರ್ಮಿಕ ಸಾವು!

ಕಾರವಾರ;- ಮೀನುಗಾರಿಕಾ ಬೋಟ್ ನಲ್ಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗಂಗೆ ಕೊಳ್ಳದಲ್ಲಿ ಜರುಗಿದೆ. ಕೆಲಸಕ್ಕೆ ಬಂದಿದ್ದ ಒರಿಸ್ಸಾದ ಕಾರ್ಮಿಕ ಅನುಮಾನಾಸ್ಪದ ಸಾವನ್ನಪ್ಪಿದ್ದಾರೆ. ತಿಳಿದಿರಲಿ: ಅಡಿಕೆಯಲ್ಲಿ ಅಡಗಿರುವ ಆರೋಗ್ಯಕರ ಅಂಶಗಳನ್ನು ತಿಳಿದುಕೊಳ್ಳಿ! ಸಂಬಲಪುರದ ನಿವಾಸಿ ನಿರಂಜನ್ ಮೃತಪಟ್ಟ ಕಾರ್ಮಿಕ ಮೀನುಗಾರಿಕೆಗಾಗಿ ಕಾರ್ಮಿಕ ಒರಿಸ್ಸಾದಿಂದ ಗೋಕರ್ಣಕ್ಕೆ ಬಂದಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರು ಆಗಮಿಸಿದ್ದು, ಗೋಕರ್ಣ ಸರ್ಕಾರಿ ಆಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.