Close Menu
Ain Live News
    Facebook X (Twitter) Instagram YouTube
    Sunday, June 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ವಿರಾಟ್‌ಗೆ ಸ್ಮೈಲ್‌ ಕೊಟ್ಟ ಖ್ಯಾತ ನಟ..ನೀವು ಯಾರು ಗೊತ್ತೇ ಇಲ್ಲ ಅನ್ನೋದ ಕಿಂಗ್‌ ಕೊಹ್ಲಿ!

    By Author AINMay 24, 2025
    Share
    Facebook Twitter LinkedIn Pinterest Email
    Demo

    ಭಾರತದ ಕ್ರಿಕೆಟ್‌ ಜಗತ್ತಿನ ದಂತಕಥೆ ವಿರಾಟ್‌ ಕೊಹ್ಲಿ ಅಂದ್ರೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೆ ಅಚ್ಚುಮೆಚ್ಚು. ಬ್ಯಾಟ್‌ ಹಿಡಿದು ಫೀಲ್ಡ್‌ ಗಿಳಿದ್ರೆ ಕಿಂಗ್‌ ಕೊಹ್ಲಿ ರನ್‌ ಮಳೆಯನ್ನೇ ಹರಿಸ್ತಾರೆ. ಇಂತಹ ವಿರಾಟ್‌ ಕೊಹ್ಲಿ ಬಗ್ಗೆ ತಮಿಳುನಟ ಸಿಂಬು ಇಂಟ್ರೆಸ್ಟಿಂಗ್‌ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.

    ವಿರಾಟ್‌ ಕೊಹ್ಲಿಗೂ ಬಾಲಿವುಡ್‌ ಗೂ ನಂಟಿದೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಾಲಿವುಡ್‌ ಚಿತ್ರರಂಗದಲ್ಲಿ ಮಿಂಚಿದವರು. ಹೀಗಾಗಿ ಹಿಂದಿ ಇಂಡಸ್ಟ್ರೀಯವರು ಕೊಹ್ಲಿ ಚಿರಪರಿಚತ . ಆದ್ರೆ ಕಾಲಿವುಡ್‌ ಬಗ್ಗೆ ವಿರಾಟ್‌ ಗೆ ಅಷ್ಟಾಗಿ ಗೊತ್ತಿಲ್ಲ ಅನ್ನೋದಕ್ಕೆ ಸಿಂಬು ಹೇಳಿದ ಮ್ಯಾಟರ್‌ ಸಾಕ್ಷಿ. ಒಮ್ಮೆ ಕೊಹ್ಲಿ ಭೇಟಿ ಮಾಡುವ ಅವಕಾಶ ಸಿಂಬುಗೆ ಸಿಕ್ಕಿತ್ತಂತೆ. ಅವರು ಸ್ಟೈಲ್ ಆಗಿ ಹೋಗಿ, ‘ನಾನು ಸಿಂಬು’ ಎಂದು ಪರಿಚಯ ಮಾಡಿಕೊಂಡರು. ವಿರಾಟ್ ರಿಯಾಕ್ಷನ್ ಸಿಂಬುಗೆ ಶಾಕ್ ತರಿಸಿತು. ‘ನನಗೆ ಗೊತ್ತಿಲ್ಲ ಎಂದು ಅವರು ಹೋಗೇ ಬಿಟ್ಟರು. ಇದು ನನಗೆ ಬೇಕಿತ್ತಾ ಎಂದುಕೊಂಡೆ. ಒಂದು ದಿನ ನಾನು ಯಾರು ಎಂಬುದು ನಿಮಗೆ ಗೊತ್ತಾಗುತ್ತದೆ ಎಂದು ಮನಸ್ಸಿನಲ್ಲೇ ಅಂದುಕೊಂಡೆ’ ಎಂದು ಸಿಂಬು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇತ್ತೀಚೆಗೆ ಆರ್​ಸಿಬಿ ಪೇಜ್​ನಲ್ಲಿ ಹಾಕಿದ ಕೊಹ್ಲಿ ಸಂದರ್ಶನ ನೋಡಿದೆ. ಅದರಲ್ಲಿ ಅವರು ನನ್ನ ಸಿನಿಮಾ ಸಾಂಗ್ ಇಷ್ಟಪಟ್ಟಿದ್ದಾರೆ ಎಂದು ತಿಳಿಯಿತು. ಅದೇ ಸಕ್ಸಸ್ ಎಂದುಕೊಂಡೆ. ಈಗಲೂ ಅವರಿಗೆ ನನ್ನ ಪರಿಚಯ ಇದೆಯೋ ತಿಳಿದಿಲ್ಲ’ ಎಂದಿದ್ದಾರೆ ಸಿಂಬು.

    Thalaivan #STR 🔥🔥🔥🔥#RCB #ViratKohli𓃵 pic.twitter.com/RE8JiSZL1B

    — கதைப்போமா (@Kathaipomaa) May 23, 2025

    ಸಿಂಬು ಚಿತ್ರದ ಹಾಡು ಕೊಹ್ಲಿಗೆ ಫೇವರೇಟ್!‌

    ವಿರಾಟ್‌ ಮೈದಾನದಲ್ಲಿ ಅಭ್ಯಾಸ ಮಾಡುವಾಗ, ಏರ್ಪೋರ್ಟ್, ವಿಮಾನದಲ್ಲಿ ಪ್ರಯಾಣ ಮಾಡುವಾಗ ನೀ ಸಿಂಗಮ್ ಧಾನ ಸಾಂಗ್ ಅನ್ನು ಪದೇ ಪದೇ ಕೇಳುತ್ತಿರುತ್ತಾರೆ. ಆ ಹಾಡು ಎಂದರೆ ವಿರಾಟ್ಗೆ ತುಂಬಾ ಇಷ್ಟವಂತೆ. ಹೀಗಾಗಿಯೇ ಏರ್ಫೋನ್ ಹಾಕೊಂಡು ಒಂದೇ ಹಾಡನ್ನು ಪದೇ ಪದೇ ಕೇಳುತ್ತಿರುತ್ತಾರೆ. ನೀ ಸಿಂಗಮ್ ಧಾನ, ನಟ ಸಿಲಂಬರಸನ್ ಊರೂಫ್ ಸಿಂಬು ಅಭಿನಯದ ಪಾಥು ಥಾಲಾ ಚಿತ್ರದ ಹಾಡು. 2023ರಲ್ಲಿ ರಿಲೀಸ್ ಆಗಿ ಸಕ್ಸಸ್‌ ಕಂಡಿರುವ ಈ ಚಿತ್ರದ ನೀ ಸಿಂಗಮ್ ಧಾನ ವಿರಾಟ್ ಫೇವರೇಟ್‌ ಗೀತೆ. ಸಿದ್‌ ಶ್ರೀರಾಮ್‌ ಕಂಠದಲ್ಲಿ, ರೆಹಮಾನ್‌ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿತ್ತು. ನೀ ಸಿಂಗಮ್ ಧಾನ ಅಂದ್ರೆ ‘ನೀವು ನಿಜವಾಗಿಯೂ ಸಿಂಹ’ ಅಂದರ್ಥ.

    ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು?

    ತಮಿಳಿನ ನಟ ಸಿಲಂಬರಸನ್ ಅಲಿಯಾಸ್ ಸಿಂಬು ಬಹಳ ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಒಂದೊಳ್ಳೆ ಅಭಿಮಾನಿ ವರ್ಗವನ್ನೂ ಸಂಪಾದಿಸಿದ್ದಾರೆ. ಇದೀಗ ಸಿಂಬು ವಿರಾಟ್‌ ಕೊಹ್ಲಿ ಬಯೋಪಿಕ್‌ಗೆ ಸೂಕ್ತ ಎಂಬ ಚರ್ಚೆ ಶುರುವಾಗಿದೆ. ವಿರಾಟ್‌ ಕೊಹ್ಲಿ ಫಿಟ್ನೆಸ್‌, ಅವರ ಸ್ಟೈಲ್‌, ನೋಟವನ್ನು ಸಿಂಬು ಹೋಲುತ್ತಾರೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹೀಗಾಗಿ ವಿರಾಟ್‌ ಬಯೋಪಿಕ್‌ ಪ್ಲಾನ್‌ ನಡೆದರೇ ಅವರ ಪಾತ್ರವನ್ನು ನಿಭಾಯಿಸೋದಿಕ್ಕೆ ಸಿಂಬು ಬೆಸ್ಟ್‌ ಎಂಬ ಮಾತು ಮುಂಬೈ ಗಲ್ಲಿಯಲ್ಲಿ ಕೇಳಿ ಬರ್ತಿದೆ. ಮುಂದೆ ವಿರಾಟ್‌ ಅನುಷ್ಕಾ ನಿರ್ಮಾಣ ಸಂಸ್ಥೆ ಆರಂಭಿಸಿ ಸಿನಿಮಾ ಶುರು ಮಾಡಿದಲ್ಲಿ ಸಿಂಬು ಅವರನ್ನು ಅಪ್ರೋಚ್‌ ಆದರು ಅಚ್ಚರಿಪಡುವ ಆಗಿಲ್ಲ.

    Demo
    Share. Facebook Twitter LinkedIn Email WhatsApp

    Related Posts

    ಟೀಮ್ ಇಂಡಿಯಾ ಕೋಚ್ ಆಗಲು ರೆಡಿ ಇದ್ದಾರಂತೆ ಸೌರವ್ ಗಂಗೂಲಿ!

    June 22, 2025

    ಡಿಮ್ಯಾಂಡ್ ಕಳೆದುಕೊಂಡ್ರಾ ನ್ಯಾಷನಲ್ ಕ್ರಷ್!? ದಿಢೀರ್ ಸಂಭಾವನೆ ಕುಸಿತ?

    June 22, 2025

    33 ಎಸೆತಕ್ಕೆ ಶತಕ..ಶರವೇಗದ ಸೆಂಚುರಿ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ ಅಭಿಷೇಕ್!

    June 22, 2025

    ಟೆಸ್ಟ್‌ ಕ್ರಿಕೆಟ್‌ನಲ್ಲಿ ರಿಷಭ್ ಪಂತ್‌ ದಾಖಲೆ..ಧೋನಿ ರೆಕಾರ್ಡ್‌ ಬ್ರೇಕ್!

    June 21, 2025

    Paris Diamond League: ನೀರಜ್ ಚೋಪ್ರಾ ಅಬ್ಬರ: ನಡುಗುವ ಚಳಿಯಲ್ಲೂ ಚಿನ್ನಕ್ಕೆ ಮುತ್ತಿಟ್ಟ ಕ್ರೀಡಾ ತಾರೆ!

    June 21, 2025

    ಪವರ್ ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್..’ಹರಿ ಹರ ವೀರ ಮಲ್ಲು ರಿಲೀಸ್ ಡೇಟ್‌ ಫಿಕ್ಸ್!

    June 21, 2025

    India vs England: ಟೆಸ್ಟ್’ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ರಿಷಭ್ ಪಂತ್! ಧೋನಿ ದಾಖಲೆ ಉಡೀಸ್

    June 21, 2025

    ಚಿನ್ನಸ್ವಾಮಿ ದುರಂತ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಚುರುಕು.. ಕೆ.ಎಸ್.ಸಿ.ಎ ಖಜಾಂಚಿ- ಸೆಕ್ರೆಟ್ರಿಗೆ ನೋಟಿಸ್ ಜಾರಿ!

    June 21, 2025

    ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ 22 ಲಕ್ಷ ವಂಚನೆ!

    June 20, 2025

    ಸಂಜು ವೆಡ್ಸ್ ಗೀತಾ 2’ ತಂಡದ ಆರೋಪಕ್ಕೆ ರಚಿತಾ ತಿರುಗೇಟು: ವಿಡಿಯೋ ಮೂಲಕ ಡಿಂಪಲ್ ಕ್ವೀನ್ ಕೊಟ್ಟ ಕ್ಲಾರಿಟಿ ಇಲ್ಲಿದೆ!

    June 20, 2025

    IND vs ENG Test: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ: ಹೀಗಿದೆ ನೋಡಿ ಉಭಯ ತಂಡಗಳ ಪ್ಲೇಯಿಂಗ್ XI

    June 20, 2025

    Sachin Tendulkar: ನಾನು ಕ್ಯಾಪ್ಟನ್ ಆಗಿದ್ರೆ ಪಂತ್’ಗೆ ಇದೇ ರೀತಿಯ ಎಚ್ಚರಿಕೆ ನೀಡುತ್ತಿದ್ದೆ: ಸಚಿನ್ ತೆಂಡೂಲ್ಕರ್

    June 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.