Close Menu
Ain Live News
    Facebook X (Twitter) Instagram YouTube
    Friday, June 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಎರಡು ಬಾರಿ ಕಿಡ್ನಿ ಶಸ್ತ್ರಚಿಕಿತ್ಸೆ ಗೆದ್ದ ಮಹಿಳೆ: ತಾಯಿಯ ಕಿಡ್ನಿಯಿಂದ ಉಳಿಯಿತು ಮಗಳ ಜೀವ!

    By Author AINMay 15, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:  ಬೆಂಗಳೂರು ಮೂಲದ 38 ವರ್ಷದ ಮಹಿಳೆಗೆ ಎರಡನೇ ಬಾರಿಗೆ ಕಿಡ್ನಿಕಸಿ ಶಸ್ತ್ರಚಿಕಿತ್ಸೆ ಮಾಡಿ ಯಶ್ವಸಿಯಾಗಿ ಆಕೆಯನ್ನು ಗುಣಮುಖರನ್ನಾಗಿ ಮಾಡಲಾಗಿದೆ.. ಮಹಿಳೆಯೂ ಧೀರ್ಘಕಾಲದ ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಾ ಇದ್ದ ಕಾರಣ 2016 ರಲ್ಲಿ ಆಕೆಯ ತಂದೆಯೇ ಕಿಡ್ನಿ ದಾನ ಮಾಡುವುದರ ಮೂಲಕ ಮೊದಲ ಬಾರಿಗೆ ಯಶಸ್ವಿ ಕಿಡ್ನಿ ಕಸಿ ಮಾಡಲಾಗಿತ್ತು. ಆದಾದ ಬಳಿಕ ಆಕೆಯಲ್ಲಿ ಕಿಡ್ನಿ ಸಂಭಂಧಿತ ಯಾವುದೇ ಸಮಸ್ಯೆಗಳು ಕಂಡು ಬಂದಿರಲಿಲ್ಲ.

    ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ನಿಮಗೆ ಅನಾರೋಗ್ಯ ಕಾಡುತ್ತೆ..! ಇದನ್ನು ನೀವೂ ನಂಬಲೆಬೇಕು

    ಆದರೆ ಕಳೆದ ನವಂಬರ್‌ ತಿಂಗಳಿನಿಂದ ಆರೋಗ್ಯದಲ್ಲಿ ಸಾಕಷ್ಟು ಏರು ಪೇರು ಕಂಡು ಬಂತು . ತೂಕ ಇಳಿಕೆ , ಊಟ ಸೇರುತ್ತಾ ಇರಲಿಲ್ಲ ಹಾಗೂ ಮಲಬದ್ದತೆ ಸೇರಿದಂತೆ ಹಲವು ರೋಗ ಲಕ್ಷಣಗಳು ಕಾಣಿಸಲಾರಂಭಿಸಿತು. ಅಲ್ಲದೇ ರಕ್ತ ಪರೀಕ್ಷೆಯಲ್ಲಿ ಕ್ರಿಯಾಟಿನಿನ್‌ ಮಟ್ಟ ಏರಿಕೆಯಾಗಿದ್ದರಿಂದ ವಾರಕ್ಕೆ ಎರಡು ಬಾರಿ ಹೆಮೊಡಯಾಲಿಸಿಸ್( 2 ಕಿಡ್ನಿ ಫೇಲ್‌ ಆದಾಗ ಮಾಡುವ ಚಿಕಿತ್ಸೆ) ಮಾಡಲಾಗುತ್ತಾ ಇತ್ತು.

    2025ರ ಫೆಬ್ರವರಿಯ ಬಳಿಕ ರೋಗಿಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ವೈಟ್‌ ಫೀಲ್ಡ್‌ ನಲ್ಲಿರುವ ಮೆಡಿಕವರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮಹಿಳೆಯನ್ನು ದಾಖಲಸಲಾಯಿತು. ಮೂತ್ರಶಾಸ್ತಜ್ಞ ಡಾ. ಪ್ರಮೋದ್‌ ರವರ ನೇತ್ರತ್ವದಲ್ಲಿ ಎರಡನೇ ಬಾರಿಗೆ ಆಕೆಗೆ ಕಿಡ್ನಿ ಕಸಿ ಮಾಡಲಾಯಿತು.

    ಈ ಬಾರಿ ಆಕೆಯ ತಾಯಿ ಅವರಿಗೆ ಕಿಡ್ನಿ ದಾನ ಮಾಡಿದ್ದರು. ಸುಮಾರು 3 ಗಂಟೆಗಳ ಕಾಲ ಆಸ್ಪತ್ರೆಯ ನೆಫ್ರೋಲಾಜಿ, ಯೂರೋಲಾಜಿ ಮತ್ತು ಟ್ರಾನ್ಸ್ಪ್ಲಾಂಟ್ ತಜ್ಞರ ತಂಡವು ಉನ್ನತ ತಂತ್ರಜ್ಞಾನ ಬಳಸಿಕೊಂಡು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದರು. ಶಸ್ತ್ರಚಿಕಿತ್ಸೆಯ 7ನೇ ದಿನಕ್ಕೆ ಕ್ರಿಯಾಟಿನಿನ್ , ಹಿಮೋಗ್ಲೋಬಿನ್‌ , ಬಿಳಿ ರಕ್ತಕಣಗಳು ಸರಿಯಾಗಿ ಕೆಲಸ ಮಾಡಲು ಶುರು ಮಾಡಿದ್ದ ಕಾರಣ ಮಹಿಳೆಯೂ ಸಂಪೂರ್ಣವಾಗಿ ಗುಣಮುಖರಾಗಿದ್ದರು.

    ಮರು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಎಂದರೆ ಸಾಮಾನ್ಯ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಿಂತ ಹೆಚ್ಚು ಸವಾಲುಭರಿತ. ಈ ರೋಗಿಯು ಹಿಂದೆ ಟ್ರಾನ್ಸ್‌ಪ್ಲಾಂಟ್‌ಗೆ ಒಳಗಾಗಿರುವುದರಿಂದ ಶರೀರದ ರಕ್ಷಣಾತ್ಮಕ ವ್ಯವಸ್ಥೆ ಹೆಚ್ಚು ಬಲವಂತವಾಗಿರುತ್ತದೆ. ಆದ್ದರಿಂದ ಔಷಧಿ ನೀಡುವ ಕ್ರಮದಿಂದ ಹಿಡಿದು ಶಸ್ತ್ರಚಿಕಿತ್ಸೆ ತನಕ ಹೆಚ್ಚು ನಿಖರತೆ ಅಗತ್ಯವಿರುತ್ತದೆ ಎಂದು ಶಸ್ತ್ರಚಿಕಿತ್ಸೆಯ ಬಳಿಕ ಡಾ. ಪ್ರಮೋದ್, ಯೂರೋಲೋಜಿಸ್ಟ್ ಮತ್ತು ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸ ತಜ್ಞ ಸಂತಸ ವ್ಯಕ್ತಪಡಿಸಿದ್ದಾರೆ .

    Demo
    Share. Facebook Twitter LinkedIn Email WhatsApp

    Related Posts

    BR ಪಾಟೀಲ್ ಆಡಿಯೋ ವೈರಲ್ ವಿಚಾರ: ಸಿಎಂ ಸಿದ್ದರಾಮಯ್ಯ ಬಣ್ಣ ಬಯಲು – ಪರಿಷತ್ ಶಾಸಕ ಟಿ.ಎ.ಶರವಣ ಆಕ್ರೋಶ

    June 20, 2025

    ಡಿಕೆಶಿಗೆ ಮನುಷ್ಯತ್ವದ ದಾರಿದ್ರ್ಯ ಇದೆ; ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗಿಲ್ಲ: ಹೆಚ್.ಡಿ. ಕುಮಾರಸ್ವಾಮಿ ಕಿಡಿ

    June 20, 2025

    ಕೃಷಿಯಿಂದ ಹೆಚ್ಚು ಉದ್ಯೋಗ ಸೃಷ್ಟಿ- ಕೃಷಿ ಪ್ರಗತಿ ಆದರೆ ಮಾತ್ರ ದೇಶದ ಆರ್ಥಿಕತೆ ಪ್ರಗತಿ: ಸಿಎಂ ಸಿದ್ದರಾಮಯ್ಯ

    June 20, 2025

    ರಾಷ್ಟ್ರಪತಿ ದ್ರೌಪದಿ ಮುರ್ಮು ಹುಟ್ಟುಹಬ್ಬ: ಶುಭಾಶಯ ಕೋರಿದ ಪರಿಷತ್ ಶಾಸಕ ಟಿ ಎ ಶರವಣ

    June 20, 2025

    ಕಿಚ್ಚ ಸುದೀಪ್‌ ಹೆಸರಲ್ಲಿ ಪಂಗನಾಮ..ಯುವನಟನಿಗೆ ನಂದಕಿಶೋರ್‌ ದೋಖಾ…?

    June 20, 2025

    ಕೊನೆಗೂ ಬಯಲಾಯ್ತು ವರ್ಷಗಳಿಂದ ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ಸ್ಥಳ..!

    June 20, 2025

    ದಿನದ ಕೆಲಸದ ಅವಧಿಯನ್ನು 10 ತಾಸಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ: ಸಚಿವ ಸಂತೋಷ್ ಲಾಡ್

    June 20, 2025

    ನಿಯಮ ಉಲ್ಲಂಘನೆ: ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಖಾಕಿ ದಾಳಿ!

    June 20, 2025

    ಗ್ಯಾಸ್ ಸಿಲಿಂಡರ್ ಕದ್ದೊಯ್ದ ಖದೀಮ: ಹೆಲ್ಮೆಟ್ ಧರಿಸಿ ಕೃತ್ಯ!

    June 20, 2025

    ಓಮ್ನಿ ಕಾರುಗಳೇ ಇವರ ಟಾರ್ಗೆಟ್: ಖಾಕಿ ಬಲೆಗೆ ಬಿದ್ದ ಖದೀಮರ ಗ್ಯಾಂಗ್!

    June 20, 2025

    ವಸತಿ ಯೋಜನೆಗಳಲ್ಲಿ ಮುಸ್ಲಿಂರಿಗೆ ಮೀಸಲಾತಿ: ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರಹ್ಲಾದ್ ಜೋಶಿ!

    June 20, 2025

    ನಿಮಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ!? ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ಸೇವಿಸಿ!

    June 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.