ಬಾಗಲಕೋಟೆ : ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿಯ ಶ್ರೀ ಅಲ್ಲಮಪ್ರಭು ದೇವಸ್ಥಾನ ಸೇವಾ ಸಮಿತಿಯ ಸಮುದಾಯ ಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ,) ಜಮಖಂಡಿ ವತಿಯಿಂದ 1 ಲಕ್ಷ ರೂಪಾಯಿ ಮಂಜೂರಾತಿಯಾಗಿದ್ದು, ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಮಖಂಡಿ ತಾಲೂಕಿನ ಯೋಜನಾಧಿಕಾರಿಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಲ ಕೊಟ್ಟು, ಸಾಲ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ ಅಲ್ಲಾ,, ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಪ್ರವರ್ತಿತ ಪ್ರತಿ ನಿಧಿ (ಬಿ. ಸಿ)ಯಾಗಿ ಬ್ಯಾಂಕಿನ ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸುವ ಸಂಸ್ಥೆಯಾಗಿ ಕೆಲಸ ಮಾಡುತ್ತಿದ್ದೂ, ಇದರೊಟ್ಟಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮುದಾಯ ಅಭಿವೃದ್ಧಿ ವಿಭಾಗದಲ್ಲಿ ನಿರ್ಗತಿಕರಿಗೆ ಪ್ರತಿ ತಿಂಗಳು ಮಾಶಾಸನ ನೀಡುವುದು, ವಿಶೇಷ ಚೇತನರಿಗೆ ಅವರಿಗೆ ಅವಶ್ಯಕತೆ ಇರುವ ಸಾಮಗ್ರಿಗಳನ್ನು ಒದಗಿಸುವುದು, ವೃತ್ತಿ ಪರ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ ಶಿಪ್ ಕೊಡುವುದು,ದೇವಸ್ಥಾನ ಗಳ ಜೀರ್ನೋದ್ಧಾರ, ಹಿಂದೂ ರುದ್ರ ಭೂಮಿ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣಗಳಿಗೆ ಅನುದಾನಗಳನ್ನು ಒದಗಿಸುವ ಹೀಗೆ ಸುಮರು 32 ಸಮಾಜಮುಖಿ ಕಾರ್ಯಕ್ರಮಗಳನ್ನು ಪೂಜ್ಯರು ಸ್ವ ಸಹಾಯ ಸಂಘಗಳ ಮೂಲಕ ಅನುಸ್ಟಾನಿಸುತ್ತ ಬರುತ್ತಿದ್ದಾರೆ ಎಂದು ತಿಳಿಸಿದರು.
ಶ್ರೀ ಬಲಮುರಿ, ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ
ಬಳಿಕ ಶ್ರೀ ಅಲ್ಲಮಪ್ರಭು ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಕಮಿಟಿಯ ಗಣ್ಯರಿಗೆ ಸಮುದಾಯ ಭವನ ನಿರ್ಮಾಣಕ್ಕೆ ಈ ಹಿಂದೆ 2 ಲಕ್ಷ ರೂಪಾಯಿಯನ್ನು ನೀಡಲಾಗಿದ್ದು, ಪ್ರಸ್ತುತ ಮತ್ತೆ ರೂ 1ಲಕ್ಷ ಮಂಜೂರಾತಿ ಪತ್ರವನ್ನು ವಿತರಣೆ ಮಾಡಿದರು, ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಶ್ರೀ ಶೈಲ. ಪಾನಶೆಟ್ಟಿ, ಒಕ್ಕೂಟ ಅಧ್ಯಕ್ಷರಾದ ಗೀತಾ, ಬನಹಟ್ಟಿಯ ಮೇಲ್ವಿಚಾರಕ ಶಿವಾನಂದ ಎಮ್. ವೈ ಹಾಗೂ ದೇವಸ್ಥಾನ ಕಮಿಟಿ ಗಣ್ಯರು, ಸ್ವ ಸಹಾಯ ಸಂಘದ ಸದಸ್ಯರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.