Close Menu
Ain Live News
    Facebook X (Twitter) Instagram YouTube
    Sunday, June 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    KSCA ಟೂರ್ನಿಗಳಲ್ಲಿ 1,400 ರನ್‌: ಟೀಂ ಇಂಡಿಯಾ ಸೇರಲು ಬೆಂಗಳೂರಿನ ಬಾಲಕ ಕಾತುರ!

    By AIN AuthorDecember 12, 2023
    Share
    Facebook Twitter LinkedIn Pinterest Email
    Demo
    ಬೆಂಗಳೂರು: ಕರ್ನಾಟಕ ಕ್ರಿಕೆಟ್‌ನಲ್ಲಿ (Karnataka Cricket) 13 ವರ್ಷದ ಬೆಂಗಳೂರಿನ ಬಾಲಕ 2023-24ರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸುವ ಪಂದ್ಯಗಳಲ್ಲಿ 1,400ಕ್ಕೂ ಹೆಚ್ಚು ರನ್‌ ಸಿಡಿಸಿ ಸುದ್ದಿಯಾಗಿದ್ದಾನೆ.

    ರಾಜಾಜಿನಗರ ನಿತೀಶ್‌ ಆರ್ಯ (Nitish Arya) 16 ವರ್ಷದೊಳಗಿನವರ ಟೂರ್ನಿಯಲ್ಲಿ 3 ಶತಕ ಮತ್ತು 3 ಅರ್ಧಶತಕಗಳೊಂದಿಗೆ 565 ರನ್ ಗಳಿಸಿ ಟಾಪ್‌ ಸ್ಕೋರರ್‌ ಆಗಿ ಹೊರಹೊಮ್ಮಿದ್ದಾರೆ. ಹಿರಿಯರ ಕ್ರಿಕೆಟ್‌ನಲ್ಲಿ 13ನೇ ವಯಸ್ಸಿನಲ್ಲೇ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದು ನಿಜಕ್ಕೂ ದೊಡ್ಡ ಸಾಧನೆ

    ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ನಿತೀಶ್ ರಾಜಾಜಿನಗರ ಕ್ರಿಕೆಟರ್ಸ್ ಮತ್ತು ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್ (ಬಸವೇಶ್ವರನಗರ) ಪರವಾಗಿ ಆಡುತ್ತಾರೆ. 7ನೇ ತರಗತಿ ಓದುತ್ತಿರುವ ನಿತೀಶ್‌ ಮೂರು ವರ್ಷ ಇರುವಾಗಲೇ ಕ್ರಿಕೆಟ್‌ ಆಡಲು ಆರಂಭಿಸಿದರು. ಈಗ ಅವರು ವಿಕ್ಟರಿ ಕ್ರಿಕೆಟ್ ಕ್ಲಬ್‌ಗಾಗಿ ಕೆಎಸ್‌ಸಿಎಯ 4ನೇ ಡಿವಿಷನ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇಲ್ಲಿಯವರೆಗೆ ಅವರು 4 ಪಂದ್ಯಗಳಲ್ಲಿ ಒಂದು ಅರ್ಧಶತಕದೊಂದಿಗೆ ಅಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ.

    ವಿರಾಟ್ ಕೊಹ್ಲಿಯ (Virat Kohli) ದೊಡ್ಡ ಅಭಿಮಾನಿಯಾದ 13 ವರ್ಷದ ನಿತೀಶ್ ಆರ್ಯ ಎಲ್ಲಾ ಮೂರು ಮಾದರಿಯಲ್ಲಿ ಟೀಂ ಇಂಡಿಯಾದ  ಕ್ಯಾಪ್ ಧರಿಸುವ ಕನಸು ಕಾಣುತ್ತಿದ್ದಾರೆ. ವಯಸ್ಸು ಕಡಿಮೆ ಇದ್ದರೂ ಹಿರಿಯ ಕ್ರಿಕೆಟ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದನ್ನು ನೋಡಿ ರಾಜಾಜಿನಗರ ಕ್ರಿಕೆಟರ್ಸ್ ಕಾರ್ಯದರ್ಶಿ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ತಂಡದ ಶಿವಮೊಗ್ಗ ಲಯನ್ಸ್ ಮಾಲೀಕ ಆರ್ ಕುಮಾರ್ ನಿತೀಶ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

    ರಾಜಾಜಿನಗರ ಕ್ರಿಕೆಟಿಗರ ತರಬೇತುದಾರ ವಿನಯ್ ಕುಮಾರ್ ಎನ್‌ಪಿ ಮಾತನಾಡಿ, ನಿತೀಶ್ ತುಂಬಾ ಡೆಡಿಕೇಟೆಡ್ ಹುಡುಗ. ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ನೆಟ್ಸ್‌ನಲ್ಲಿ ತುಂಬಾ ಶ್ರಮಿಸುತ್ತಾರೆ ಎಂದು ಹೇಳಿದ್ದಾರೆ.

    ನಿತೀಶ್ ಕ್ರಿಕೆಟ್‌ ಮಾತ್ರವಲ್ಲ ಅಧ್ಯಯನದಲ್ಲೂ ಮುಂದಿದ್ದಾರೆ. ಪರೀಕ್ಷೆಗಳಲ್ಲಿ 80% ರಿಂದ 90% ರಷ್ಟು ಅಂಕ ಗಳಿಸುತ್ತಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಆರ್ ಸಿಬಿ ವೇಗಿ ವಿರುದ್ಧ ಕೇಳಿಬಂತು ಗಂಭೀರ ಆರೋಪ: ದೈಹಿಕ ಕಿರುಕುಳದ ದೂರುಕೊಟ್ಟ ಮಹಿಳೆ!

    June 28, 2025

    Praggnanandhaa: ವಿಶ್ವದ ನಂ. 4 ಸ್ಥಾನ ಅಲಂಕರಿಸಿದ ಭಾರತದ ಚದುರಂಗ ಚತುರ ಆರ್ ಪ್ರಜ್ಞಾನಂದ!

    June 28, 2025

    IND vs ENG: ಇಂದಿನಿಂದ ಭಾರತ- ಇಂಗ್ಲೆಂಡ್ ನಡುವೆ ಟಿ20 ಸರಣಿ ಆರಂಭ..!

    June 28, 2025

    Australia vs West Indies: ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ..!

    June 28, 2025

    ಸೂರ್ಯಕುಮಾರ್’ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಭಾರತ-ಬಾಂಗ್ಲಾದೇಶ ಟಿ20 ಸರಣಿ ಆಡುವುದು ಅನುಮಾನ!

    June 27, 2025

    Shikhar Dhawan: ಹೋಟೆಲ್ ರೂಂಗೆ ಗರ್ಲ್’ಫ್ರೆಂಡ್ ಕರೆದೊಯ್ದಿದ್ದ ಶಿಖರ್ ಧವನ್! ಮುಂದೇನಾಯ್ತು..?

    June 27, 2025

    Sourav Ganguly Biopic: ಸೌರವ್ ಗಂಗೂಲಿ ಬಯೋಪಿಕ್’ಗೆ ಹೀರೋ ಫಿಕ್ಸ್..! ದಾದಾ ಆಗಿ ಮಿಂಚಲಿದ್ದಾರೆ ಬಾಲಿವುಡ್ ನಟ

    June 26, 2025

    IND vs ENG: ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ: ಬುಮ್ರಾ ಬಗ್ಗೆ ಗೌತಮ್ ಗಂಭೀರ್ ಹೇಳಿದ್ದೇನು..?

    June 26, 2025

    Esha Gupta: ಹಾರ್ದಿಕ್ ಪಾಂಡ್ಯ ಜೊತೆಗಿನ ಡೇಟಿಂಗ್ ಸುದ್ದಿಗೆ ಬಾಲಿವುಡ್ ನಟಿ ಹೇಳಿದ್ದೇನು..?

    June 25, 2025

    IND vs ENG: 5 ಶತಕ ಬಾರಿಸಿಯೂ ಮೊದಲ ಟೆಸ್ಟ್’ನಲ್ಲಿ ಸೋಲು ಕಂಡ ಟೀಂ ಇಂಡಿಯಾ..!

    June 25, 2025

    ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಮದುವೆ ಮುಂದೂಡಿಕೆ!

    June 25, 2025

    India Vs England: ಅಂಪೈರ್ ಮೇಲಿನ ಕೋಪಕ್ಕೆ ಚೆಂಡೆಸೆದ ರಿಷಬ್ ಪಂತ್’ಗೆ ದಂಡ..!

    June 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.