ಇಸ್ಲಾಮಾಬಾದ್: ಟಿಕ್ಟಾಕ್ ಸ್ಟಾರ್, 17 ವರ್ಷದ ಸನಾ ಯೂಸುಫ್ ಅವರನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ಇಸ್ಲಾಮಾಬಾದ್ನಲ್ಲಿರುವ ಅವರ ಮನೆಯಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಸೋಮವಾರ ಈ ಕೊಲೆ ನಡೆದಿದೆ.
ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!
ಇದನ್ನು ಮರ್ಯಾದಾ ಹತ್ಯೆ ಎಂದು ಪರಿಗಣಿಸಲಾಗುತ್ತಿದೆ. ಅಪರಿಚಿತ ವ್ಯಕ್ತಿಯೊಬ್ಬರು ಆಕೆಯ ಮನೆಗೆ ನುಗ್ಗಿ ಗುಂಡು ಹಾರಿಸಿದ್ದಾರೆ. ಆಕೆಗೆ ಬಂದೂಕಿನಿಂದ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆಕೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಚಿತ್ರಾಲ್ ಮೂಲದವಳು.
ತನ್ನ ಟಿಕ್ಟಾಕ್ ವೀಡಿಯೊಗಳ ಮೂಲಕ ಆಕೆ ಬಹಳ ಜನಪ್ರಿಯಳಾದಳು. ಆಕೆಯ ಮನೆಗೆ ಅತಿಥಿಯಾಗಿ ಬಂದ ವ್ಯಕ್ತಿಯೋರ್ವ ಆಕೆಯನ್ನು ಕೊಂದಿದ್ದಾನೆ ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ. ಆಕೆ ಇಸ್ಲಾಮಾಬಾದ್ನ ಸೆಕ್ಟರ್ ಜಿ 13 ರಲ್ಲಿ ವಾಸಿಸುತ್ತಿದ್ದಾರೆ. ಪೊಲೀಸರು ಶಂಕಿತನನ್ನು ಹುಡುಕುತ್ತಿದ್ದಾರೆ.