Close Menu
Ain Live News
    Facebook X (Twitter) Instagram YouTube
    Tuesday, July 1
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    PBKS vs CSK: 19 ವರ್ಷದ ಪ್ರಿಯಾಂಶ್​ ಆರ್ಯ ಆರ್ಭಟಕ್ಕೆ ಸಿಎಸ್​ಕೆ ಉಡೀಸ್! ಹ್ಯಾಟ್ರಿಕ್ ಸೋಲಿನಲ್ಲಿ ಚೆನ್ನೈ!

    By AIN AuthorApril 9, 2025
    Share
    Facebook Twitter LinkedIn Pinterest Email
    Demo

    19 ವರ್ಷದ ಪ್ರಿಯಾಂಶ್​ ಆರ್ಯ ಆರ್ಭಟಕ್ಕೆ ಸಿಎಸ್​ಕೆ ಉಡೀಸ್ ಆಗಿದ್ದು, ಪಂಜಾಬ್ ವಿರುದ್ಧ 18 ರನ್ ಗಳಿಂದ ಸೋತಿದೆ. ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅದ್ಭುತ ಪ್ರದರ್ಶನ ತೋರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರನ್​ಗಳ ರೋಚಕ ಜಯ ಸಾಧಿಸಿದೆ.

    ಯಾವ ರಾಶಿಗಳ ಜೊತೆ ಮದುವೆ ಹೊಂದಾಣಿಕೆ ಮಾಡಿಕೊಂಡರೆ ಶುಭ ಫಲಪ್ರದ…

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತ್ತು. ಪಂಜಾಬ್ ಕಿಂಗ್ಸ್ ಪರ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ 103 ರನ್ ಗಳಿಸಿದರೆ, ಶಶಾಂಕ್ ಸಿಂಗ್ ಅಜೇಯ 52 ರನ್ ಗಳಿಸಿದರು. ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್​ಕೆ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್​ಗಳಿಸಲಷ್ಟೇ ಶಕ್ತವಾಗಿ 18 ರನ್​ಗಳಿಂದ ಸೋಲು ಕಂಡಿತು.

    220ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪವರ್​ ಪ್ಲೇನಲ್ಲಿ 60 ರನ್​ಗಳಿಸಿ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್​ಗೆ ಕಿವೀಸ್ ಜೋಡಿಗಳಾದ ರಚಿನ್ ರವೀಂದ್ರ ಹಾಗೂ ಡಿವೋನ್ ಕಾನ್ವೆ 61 ರನ್​ ಸೇರಿಸಿದರು. 7ನೇ ಓವರ್​ ಬೌಲಿಂಗ್ ಮಾಡಲು ಬಂದ ಗ್ಲೆನ್ ಮ್ಯಾಕ್ಸ್​ವೆಲ್ ರಚಿನ್ ರವೀಂದ್ರ ವಿಕೆಟ್ ಪಡೆಯುವ ಮೂಲಕ ಪಂಜಾಬ್​ ಕಿಂಗ್ಸ್​ಗೆ ಬ್ರೇಕ್ ನೀಡಿದರು. ಆ ನಂತರ ಬಂದ ನಾಯಕ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸುವ ಮೂಲಕ ಸತತ 2ನೇ ಪಂದ್ಯದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

    3ನೇ ವಿಕೆಟ್​ಗೆ ಒಂದಾದ ಶಿವಂ ದುಬೆ ಹಾಗೂ ಡಿವೋನ್ ಕಾನ್ವೆ 89 ರನ್​ಗಳ ಜೊತೆಯಾಟ ನೀಡುವ ಮೂಲಕ ಪಂದ್ಯವನ್ನ ಸಿಎಸ್​ಕೆ ಕಡೆಗೆ ತಿರುಗಿಸಿದ್ದರು. ಆದರೆ ಫರ್ಗ್ಯಸನ್​ ಶಿವಂ ದುಬೆಯನ್ನ ಬೌಲ್ಡ್ ಮಾಡುತ್ತಿದ್ದಂತೆ ಸಿಎಸ್​ಕೆ ಗೆಲುವಿನ ಆಸೆ ಕಮರಿತು. ದುಬೆ ವಿಕೆಟ್ ಬಿದ್ದ ಸಂದರ್ಭದಲ್ಲಿ ಸಿಎಸ್​ಕೆ ಗೆಲುವುಗೆ 25 ಎಸೆತಗಳಲ್ಲಿ 68 ರನ್​ಗಳ ಅಗತ್ಯವಿತ್ತು

    ಆದರೆ ನಿರ್ಣಾಯಕ 17ನೇ ಓವರ್​ ಎಸೆದ ಯುಜ್ವೇಂದ್ರ ಚಹಲ್ ಕೇವಲ 7 ರನ್​ ನೀಡಿದರು. ಕೊನೆ 18 ಎಸೆತಗಳಲ್ಲಿ ಸಿಎಸ್​ಕೆಗೆ 59 ರನ್ ಅತಗ್ಯವಿತ್ತು. ಫರ್ಗ್ಯುಸನ್ 18ನೇ ಓವರ್​ನಲ್ಲಿ 16, ಅರ್ಶದೀಪ್ ಎಸೆದ 19ನೇ ಓವರ್​ನಲ್ಲಿ 15 ರನ್​ ಹಾಗೂ 20ನೇ ಓವರ್​ನಲ್ಲಿ ಕೇವಲ 9 ರನ್​ ಗಳಿಸಲಷ್ಟೇ ಶಕ್ತವಾಯಿತು. ಧೋನಿ 12 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್​ಗಳ ಸಹಿತ 27 ರನ್​ಗಳಿಸಿ ಮಿಂಚಿದರಾದರೂ ಅವರ ಆಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಆರಂಭಿಕರಾಗಿ ಬಂದ ಡಿವೋನ್ ಕಾನ್ವೆ 49 ಎಸೆತಗಳನ್ನಾಡಿ 6 ಬೌಂಡರಿ, 2 ಸಿಕ್ಸರ್​ ಸಹಿತ 69 ರನ್​ಗಳಿಸಿದರು. ಇವರ ನಿಧಾನಗತಿ ಆಟವೇ ಸಿಎಸ್​ಕೆ ಸೋಲಿಗೆ ಕಾರಣವಾಯಿತು.

    Demo
    Share. Facebook Twitter LinkedIn Email WhatsApp

    Related Posts

    ಆತನಿಗೆ ಹಲವರೊಂದಿಗೆ ಅಫೇರ್ ಇತ್ತು; ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ!

    June 30, 2025

    ನವೆಂಬರ್ 19 ರಂದು ನಾವು ಕಣ್ಣೀರು ಹಾಕಿದ್ದೇವೆ, ಜೂನ್ 24 ರಂದು ಬಡ್ಡಿಯೊಂದಿಗೆ ಪಾವತಿಸಿದ್ದೇವೆ: ರೋಹಿತ್ ಶರ್ಮಾ

    June 30, 2025

    Virat Kohli: ಅಬ್ಬಬ್ಬಾ… ಒಂದು ಇನ್ಸ್ಟಾಗ್ರಾಮ್ ಪೋಸ್ಟ್’ಗೆ ಕಿಂಗ್ ಕೊಹ್ಲಿ ಗಳಿಸುವ ಆದಾಯ ಇಷ್ಟೊಂದಾ..!

    June 30, 2025

    World Championship of Legends: ಜುಲೈ 20 ರಂದು ಭಾರತ-ಪಾಕ್‌ ಹೈವೋಲ್ಟೇಜ್ ಮ್ಯಾಚ್!

    June 29, 2025

    ಆರ್ ಸಿಬಿ ವೇಗಿ ವಿರುದ್ಧ ಕೇಳಿಬಂತು ಗಂಭೀರ ಆರೋಪ: ದೈಹಿಕ ಕಿರುಕುಳದ ದೂರುಕೊಟ್ಟ ಮಹಿಳೆ!

    June 28, 2025

    Praggnanandhaa: ವಿಶ್ವದ ನಂ. 4 ಸ್ಥಾನ ಅಲಂಕರಿಸಿದ ಭಾರತದ ಚದುರಂಗ ಚತುರ ಆರ್ ಪ್ರಜ್ಞಾನಂದ!

    June 28, 2025

    IND vs ENG: ಇಂದಿನಿಂದ ಭಾರತ- ಇಂಗ್ಲೆಂಡ್ ನಡುವೆ ಟಿ20 ಸರಣಿ ಆರಂಭ..!

    June 28, 2025

    Australia vs West Indies: ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ..!

    June 28, 2025

    ಸೂರ್ಯಕುಮಾರ್’ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಭಾರತ-ಬಾಂಗ್ಲಾದೇಶ ಟಿ20 ಸರಣಿ ಆಡುವುದು ಅನುಮಾನ!

    June 27, 2025

    Shikhar Dhawan: ಹೋಟೆಲ್ ರೂಂಗೆ ಗರ್ಲ್’ಫ್ರೆಂಡ್ ಕರೆದೊಯ್ದಿದ್ದ ಶಿಖರ್ ಧವನ್! ಮುಂದೇನಾಯ್ತು..?

    June 27, 2025

    Sourav Ganguly Biopic: ಸೌರವ್ ಗಂಗೂಲಿ ಬಯೋಪಿಕ್’ಗೆ ಹೀರೋ ಫಿಕ್ಸ್..! ದಾದಾ ಆಗಿ ಮಿಂಚಲಿದ್ದಾರೆ ಬಾಲಿವುಡ್ ನಟ

    June 26, 2025

    IND vs ENG: ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ: ಬುಮ್ರಾ ಬಗ್ಗೆ ಗೌತಮ್ ಗಂಭೀರ್ ಹೇಳಿದ್ದೇನು..?

    June 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.