ಯಾದಗಿರಿ:- ಜೆಸ್ಕಾಂ ನಿರ್ಲಕ್ಷ್ಯಕ್ಕೆ 23 ವರ್ಷದ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಯಾದಗಿರಿಯ ಮಾತಾಮಣಿಕೇಶ್ವರ ನಗರದಲ್ಲಿ ಜರುಗಿದೆ.
ವಾಟ್ಸಪ್ ಸ್ಟೇಟಸ್ ಬಳಕೆದಾರರಿಗೆ ಸಿಕ್ತು ಸಿಹಿ ಸುದ್ದಿ: ಹೊಸ ಫೀಚರ್ ಹೀಗಿದೆ!
23 ವರ್ಷದ ಕಾಜಾ ಪಟೇಲ್ ಮೃತ ಬೈಕ್ ಸವಾರ. ಕಾಜಾ ಪಟೇಲ್, ಯಾದಗಿರಿಯ ಸಹೋದರಿ ಮನೆಗೆ ತೆರಳಿ, ವಾಪಸ್ ಆಗುತ್ತಿದ್ದ ವೇಳೆ ತುಂಡರಿಸಿ ಬಿದ್ದಿದ್ದ ಹೈಟೆನ್ಷನ್ ವೈಯರ್ ನೋಡದೇ ಬೈಕ್‌ನಲ್ಲಿ ಹೋಗುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
ಕಳೆದ ಮೂರು ದಿನದ ಹಿಂದೆ ಬಿರುಗಾಳಿ ಮಳೆಗೆ ಹೈಟೆನ್ಷನ್ ವೈಯರ್ ತುಂಡರಿಸಿ ಬಿದ್ದಿದ್ದು, ತುಂಡರಿಸಿ ಬಿದ್ದಿದ್ದ ವೈಯರನ್ನು ಸರಿಪಡಿಸದೇ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.