Close Menu
Ain Live News
    Facebook X (Twitter) Instagram YouTube
    Sunday, June 8
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Subrata Roy: 25 ಸಾವಿರ ಕೋಟಿ ರೂ. ಹಣ ಬಿಟ್ಟು ಇಹಲೋಕ ತ್ಯಜಿಸಿದ ಸುಬ್ರತಾ ರಾಯ್..! ಯಾರಿಗೆ ಸೇರಲಿದೆ?

    By AIN AuthorNovember 22, 2023
    Share
    Facebook Twitter LinkedIn Pinterest Email
    Demo

    ನವದೆಹಲಿ: ಸಹಾರಾ ಗ್ರೂಪ್ (Sahara Group) ಸಂಸ್ಥಾಪಕ ಸುಬ್ರತಾ ರಾಯ್ (Subrata Roy) ಅವರ ನಿಧನದ ಬಳಿಕ ಸೆಬಿ (SEBI) ಖಾತೆಯಲ್ಲಿರುವ 25,000 ಕೋಟಿ ರೂ. ಹಣ ಯಾರಿಗೆ ಸೇರುತ್ತೆ ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ತನಿಖೆ ಆರಂಭವಾದ ಕಳೆದ 10 ವರ್ಷದಿಂದ ಈ ಹಣ ಸೆಬಿ ಖಾತೆಯಲ್ಲಿದೆ. ಕ್ಲೈಮ್ ಮಾಡದ ಹಣ ಏನಾಗುತ್ತದೆ? ಆ ಹಣವನ್ನು ಸರ್ಕಾರದ ಹಣ ಎಂದು ಪರಿಗಣಿಸಬಹುದೇ? ಸರ್ಕಾರ ಈಗ ಸುಬ್ರತಾ ರಾಯ್ ಅವರ ನಿಧನದ ಬಳಿಕ ಹಲವು ಆಯ್ಕೆಯನ್ನು ಪರಿಶೀಲಿಸುತ್ತಿದೆ.

    ಸಹಾರಾ ಮರುಪಾವತಿ ಪೋರ್ಟಲ್ ಮೂಲಕ ಹಣ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಸುಮಾರು 2.5 ಲಕ್ಷ ಹೂಡಿಕೆದಾರರಿಗೆ ಸುಮಾರು 230 ಕೋಟಿ ರೂ. ಪಾವತಿಸಲು ಯಶಸ್ವಿಯಾಗಿದ್ದೇವೆ. ಹೊಸ ನೋಂದಣಿಗಳು ಇನ್ನೂ ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.  ಕಳೆದ ಜುಲೈನಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಬಿಡುಗಡೆ ಮಾಡಿದ ಮರುಪಾವತಿ ಪೋರ್ಟಲ್‌ನಲ್ಲಿ ಪರಿಶೀಲಿಸಿದ ನಂತರ ನೋಂದಣಿಯಾದ 45 ದಿನಗಳಲ್ಲಿ ಸೆಬಿಯಲ್ಲಿರುವ ಹಣವನ್ನು ವರ್ಗಾಯಿಸಲಾಗುತ್ತಿದೆ.

    Vishwas Vaidya: ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ CM ಆಗುವುದು ಅಷ್ಟೇ ಸತ್ಯ: ಕಾಂಗ್ರೆಸ್ ಶಾಸಕ

    ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಮತ್ತು ಸಹಾರಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ತನ್ನ ಹೂಡಿಕೆದಾರರಿಗೆ ಬಡ್ಡಿಯೊಂದಿಗೆ ಹಣವನ್ನು ಮರುಪಾವತಿಸಬೇಕೆಂದು ಸೆಬಿ ನೀಡಿದ ಆದೇಶವನ್ನು 2012ರಲ್ಲಿ ಸುಪ್ರೀಂ ಕೋರ್ಟ್‌ (Supreme Court) ಎತ್ತಿ ಹಿಡಿದಿತ್ತು. ಅಷ್ಟೇ ಅಲ್ಲದೇ ಹೂಡಿಕೆದಾರರಿಗೆ ಹಣ ಪಾವತಿಸಲು 25,000 ಕೋಟಿ ರೂ. ಹಣವನ್ನು ಸೆಬಿ ಖಾತೆಯಲ್ಲಿ ಠೇವಣಿ ಇಡುವಂತೆ ಸೂಚಿಸಿತ್ತು. ಸುಪ್ರೀಂನಿಂದ ಈ ಆದೇಶ ಬಂದ ಬಳಿಕ ಸುಬ್ರತಾ ರಾಯ್ ಸಮಸ್ಯೆ ಎದುರಿಸಲು ಆರಂಭಿಸಿದರು.

    ಹೆಚ್ಚಿನ ಹೂಡಿಕೆದಾರರು ಉತ್ತರ ಪ್ರದೇಶ ಮತ್ತು ಬಿಹಾರದವರು ಎಂದು ಸರ್ಕಾರಿ ದಾಖಲೆಗಳು ಸೂಚಿಸುತ್ತವೆ. ಉತ್ತರ ಪ್ರದೇಶದ ಸುಮಾರು 85 ಲಕ್ಷ ಹೂಡಿಕೆದಾರರು 2,200 ಕೋಟಿ ರೂ. ಮತ್ತು ಬಿಹಾರದ 55 ಲಕ್ಷ ಹೂಡಿಕೆದಾರರು 1,500 ಕೋಟಿ ರೂ. ಹಣವನ್ನು ಠೇವಣಿ ಇಟ್ಟಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸುಬ್ರತಾ ರಾಯ್ ಅವರು ತಮ್ಮ 75 ನೇ ವಯಸ್ಸಿನಲ್ಲಿ ಕಳೆದ ಮಂಗಳವಾರ ಮುಂಬೈನಲ್ಲಿ ನಿಧನರಾದರು.

    Demo
    Share. Facebook Twitter LinkedIn Email WhatsApp

    Related Posts

    ಅನಾರೋಗ್ಯ ಸಮಸ್ಯೆ: ದಿಢೀರ್ ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ!

    June 7, 2025

    Delhi CM: ದೆಹಲಿ ಸಿಎಂಗೆ ಬೆದರಿಕೆ: 25 ವರ್ಷದ ಯುವಕನ ಬಂಧನ

    June 7, 2025

    ಸೂಟ್ ಕೇಸ್’ನಲ್ಲಿ ಬಾಲಕಿಯ ಶವ ಪತ್ತೆ ಕೇಸ್: ಬಿಹಾರದಲ್ಲಿ 7 ಜನರ ಬಂಧನ!

    June 7, 2025

    Rs 500 Currency Notes: ಶೀಘ್ರದಲ್ಲೇ 500 ರೂ. ನೋಟುಗಳನ್ನು ಬ್ಯಾನ್ ಆಗುತ್ತಾ? ಕೇಂದ್ರ ಸರ್ಕಾರ ಹೇಳಿದ್ದೇನು..?

    June 7, 2025

    Corona Virus: ದೇಶದಲ್ಲಿ ಇಂದು 391 ಮಂದಿಗೆ ಕೊರೋನಾ ಸೋಂಕು..! ಸಾವಿನ ಸಂಖ್ಯೆ ಎಷ್ಟು ಗೊತ್ತಾ..?

    June 7, 2025

    Bijapur Encounter: ರಾಷ್ಟ್ರೀಯ ಉದ್ಯಾನವನದಲ್ಲಿ ಗುಂಡಿನ ಚಕಮಕಿ: ಇಬ್ಬರು ಮಾವೋವಾದಿಗಳ ಹತ್ಯೆ.!

    June 7, 2025

    RCB ಖರೀದಿಸಲು ಅದೊಂದೇ ಕಾರಣ.. ಹೊರತು ಕ್ರಿಕೆಟ್ ಮೇಲಿನ ಪ್ರೀತಿಯಿಂದಲ್ಲ: ವಿಜಯ್ ಮಲ್ಯ ಸ್ಪೋಟಕ ಹೇಳಿಕೆ!

    June 6, 2025

    ಜಾಮೀನು ರದ್ದು ಮಾಡಿದ ಸುಪ್ರೀಂ: ಮತ್ತೆ ಜೈಲು ಸೇರ್ತಾರಾ ವಿನಯ್ ಕುಲಕರ್ಣಿ!?

    June 6, 2025

    PM Modi: ಪಾಕಿಸ್ತಾನ ಮಾನವೀಯತೆಯ ಮೇಲೆ ದಾಳಿ ಮಾಡಿದೆ: ಪ್ರಧಾನಿ ಮೋದಿ

    June 6, 2025

    Chenab Bridge: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ..!

    June 6, 2025

    Gold Silver Price: ಯಾವುದೇ ಏರಿಕೆ ಇಲ್ಲ, ನಿನ್ನೆ ಇದ್ದಂತೆಯೇ ಇದೆ ಚಿನ್ನದ ದರ..! ಆದ್ರೆ ಹೊಸ ದಾಖಲೆ ಬರೆದ ಬೆಳ್ಳಿ

    June 6, 2025

    Corona Virus: ದೇಶದಲ್ಲಿ 5,000 ದಾಟಿದ ಕೊರೋನಾ ಪ್ರಕರಣಗಳು: ಸಾವಿನ ಸಂಖ್ಯೆ 55ಕ್ಕೆ ಏರಿಕೆ

    June 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.