Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Mumbai Terror Attacks: ಭಾರತದಲ್ಲಿ ಕರಾಳ ಅಧ್ಯಾಯ ಬರೆದ 26/11 ಮುಂಬೈ ರಕ್ಕಸ ದಾಳಿಗೆ ಇಂದಿಗೆ 15 ವರ್ಷ.!

    By AIN AuthorNovember 26, 2023
    Share
    Facebook Twitter LinkedIn Pinterest Email
    Demo

    ಮುಂಬೈ: ಹದಿನೈದು ವರ್ಷಗಳ ಹಿಂದೆ ಈ ದಿನ (26/11/2008) ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Mumbai Terror Attacks) 166 ಜನ ಬಲಿಯಾಗಿದ್ದರು. 10 ಭಯೋತ್ಪಾದಕರ ಗುಂಪಿನ ಈ ಸಂಘಟಿತ ದಾಳಿ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಭಾರೀ ಸಂಚಲನ ಮೂಡಿಸಿತ್ತು. ಈ ಭೀಕರ ದಾಳಿ ನಡೆದು ಅದರ ತೀವ್ರತೆ ಇಂದಿಗೂ ಕಡಿಮೆಯಾಗಿಲ್ಲ. ಕುಟುಂಬಗಳ ರೋಧನೆ, ದಾಳಿಯಿಂದ ಕಲಿತ ಪಾಠಗಳೂ ಇಂದಿಗೂ ಮರೆತಿಲ್ಲ.

     ಮುಂಬೈ ದಾಳಿಯ ನಂತರ ಪಾಕಿಸ್ತಾನವು ಭಾರತದ (India vs Pakistan) ಪಾಲಿಗೆ ಶತ್ರು ರಾಷ್ಟ್ರವಾಗಿಯೇ ಉಳಿದುಬಿಟ್ಟಿದೆ. ಪ್ರತಿ ವರ್ಷವೂ ನವೆಂಬರ್‌ 26ನೇ ತಾರೀಖು ಬಂದಾಗೆಲ್ಲಾ ಇಡೀ ದೇಶದ ಜನ ಈ ದಾಳಿಯನ್ನ ನೆನೆದು ಶತ್ರು ರಾಷ್ಟ್ರಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. 2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ (Lashkar-e-Taiba) ಭಯೋತ್ಪಾದಕರು ಪ್ರವೇಶಿಸಿದ್ದರು.

    Namma Metro: ಇನ್ಮುಂದೆ ಮೆಟ್ರೋದಲ್ಲೂ ನಡೆಯಲಿದೆ ಶೂಟಿಂಗ್ – ಬಿಎಂಆರ್​ಸಿಎಲ್ ಗ್ರೀನ್ ಸಿಗ್ನಲ್

    60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಲ್‌ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು. ಈ ಸ್ಥಳಗಳಿಗೆ ಯುರೋಪಿಯನ್ನರು, ಭಾರತೀಯರು ಮತ್ತು ಯಹೂದಿಗಳು ಆಗಾಗ್ಗೆ ಭೇಟಿ ನೀಡುವುದರಿಂದ ಗರಿಷ್ಠ ಪ್ರಮಾಣದಲ್ಲಿ ಜನಸಂದಣಿ ಸೇರುತ್ತಿದ್ದರು.

    ಇದರ ಬಗ್ಗೆ ಸಮೀಕ್ಷೆ ನಡೆಸಿದ ನಂತರ ಪೂರ್ವನಿಯೋಜಿತ ದಾಳಿ ನಡೆಸಲಾಗಿತ್ತು. ಅಂದು ನಡೆದ ದಾಳಿಗೆ ನೂರಾರು ಆಮಾಯಕ ಜೀವಗಳು ಪ್ರಾಣತೆತ್ತವು. ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ 10 ಭಯೋತ್ಪಾದಕರ ಪೈಕಿ 9 ಮಂದಿ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೇ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದರು. ಬದುಕುಳಿದಿದ್ದ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ‘ಮೊಹಮ್ಮದ್ ಅಜ್ವಲ್ ಅಮೀರ್ ಕಸಬ್’ಗೆ 2010ರಲ್ಲಿ ಮರಣದಂಡನೆ ವಿಧಿಸಿ.

    2012ರಲ್ಲಿ ಪುಣೆಯಲ್ಲಿ ಗಲ್ಲಿಗೇರಿಸಲಾಯಿತು. 2008ರ ಈ ದುರಂತಕ್ಕೆ 15 ವರ್ಷಗಳು ಕಳೆದರೂ ಘಟನೆಯ ಭೀಕರತೆ, ಮೃತಪಟ್ಟವರ ನೆನಪು, ಕುಟುಂಬಗಳ ರೋಧನೆ ಇನ್ನೂ ಜೀವಂತ, ಕಲಿತ ಪಾಠಗಳು ಜಾಗತಿಕ ಭದ್ರತೆಗೆ ನಿರ್ಣಾಯಕವಾಗಿವೆ. ಈ ವರ್ಷ ದುರಂತ ಭಯೋತ್ಪಾದನಾ ದಾಳಿಯ 15ನೇ ವಾರ್ಷಿಕೋತ್ಸವ ಗುರುತಿಸುವ ಮೂಲಕ, ಇಸ್ರೇಲ್ ಅಧಿಕೃತವಾಗಿ ಲಷ್ಕರ್-ಎ-ತೊಯ್ಯಾ(ಎಲ್‌ಇಟಿ) ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಭಾರತ ಸರ್ಕಾರದ ಯಾವುದೇ ಮನವಿ ಇಲ್ಲದೇ ಈ ಕ್ರಮ ಕೈಗೊಳ್ಳಲಾಗಿದೆ. 

    Demo
    Share. Facebook Twitter LinkedIn Email WhatsApp

    Related Posts

    ವಿಮಾನ ದುರಂತ: ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು!

    June 14, 2025

    ಭಾರೀ ಮಳೆ: ಕೇರಳದ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ!

    June 14, 2025

    ಪ್ರಯಾಣಿಕರ ಗಮನಕ್ಕೆ: ವಿಮಾನ ಹಾರಾಟದ ವೇಳೆ ಫೋನ್ ಫ್ಲೈಟ್ ಮೋಡ್‌ನಲ್ಲಿ ಇಡೋದು ಯಾಕೆ?

    June 14, 2025

    Ahmedabad Plane Crash: ಎರಡು ಬಾರಿ ಲಂಡನ್ ಟಿಕೆಟ್ ರದ್ದುಗೊಳಿಸಿದ್ದ ವಿಜಯ್ ರೂಪಾನಿ..!

    June 14, 2025

    Axiom-4 mission: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಯಾವಾಗ ಗೊತ್ತಾ..? ಇಲ್ಲಿದೆ ಉತ್ತರ

    June 14, 2025

    Ahmedabad Plane Crash: ವಿಮಾನ ಮೇಲಕ್ಕೆ ಏರುತ್ತಿಲ್ಲ..: ಕ್ಯಾಪ್ಟನ್ ಸುಮಿತ್ ಕೊನೆ 5 ಸೆಕೆಂಡ್’ಗಳ ಆಡಿಯೋ ವೈರಲ್

    June 14, 2025

    ಪ್ಯಾನ್ ಕಾರ್ಡ್ ಇರುವವರಿಗೆ ಎಚ್ಚರಿಕೆ.. ಹೀಗೆ ಮಾಡದಿದ್ದರೆ ನಿಮಗೆ ಬೀಳಲಿದೆ 10 ಸಾವಿರ ರೂ. ದಂಡ!

    June 14, 2025

    ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 7,400 ಕ್ಕೆ ಏರಿಕೆ..! 87 ಮಂದಿ ಸಾವು

    June 14, 2025

    11 ಸೀಟ್ ನಿಗೂಢತೆ: ವಿಮಾನ ದುರಂತದಲ್ಲಿ ವಿಶ್ವಾಸ್​ ಕುಮಾರ್ ರೀತಿ ಬದುಕಿ ಬಂದಿದ್ದ ನಟ..ಯಾರದು?

    June 14, 2025

    PM Modi: ನಾಳೆಯಿಂದ 3 ದಿನ ಕೆನಡಾದಲ್ಲಿ ಜಿ7 ಶೃಂಗಸಭೆ: ಪ್ರಧಾನಿ ಮೋದಿ ಭಾಗಿ

    June 14, 2025

    ಏರ್ ಇಂಡಿಯಾ ವಿಮಾನ ದುರಂತ: ಕಾರಣ ಪತ್ತೆ ಹಚ್ಚಲು ಉನ್ನತ ಮಟ್ಟದ ಸಮಿತಿ ರಚನೆ!

    June 14, 2025

    Air India Plane Crash: ಏರ್ ಇಂಡಿಯಾ ದುರಂತ: ಮೃತರ ಸಂಖ್ಯೆ 274ಕ್ಕೆ ಏರಿಕೆ

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.