ಬೆಂಗಳೂರು:- ಬಿಡದಿಯಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ನಿಗದಿ ವಿಚಾರವಾಗಿ ಗೃಹ ಸಚಿವ ಜಿ. ಪರಮೇ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ರಾಕಿಭಾಯ್ ʼಟಾಕ್ಸಿಕ್ʼನಲ್ಲಿ ಗುಬ್ಬಿ ವೀರಣ್ಣನ ಮೊಮ್ಮಗಳು ಬಿ.ಜಯಶ್ರೀ?
ಈ ಸಂಬಂಧ ಮಾತನಾಡಿದ ಅವರು, 2ನೇ ವಿಮಾನ ನಿಲ್ದಾಣಕ್ಕೆ ಬಿಡದಿಯಲ್ಲಿ 5,000 ಎಕ್ರೆ ಜಮೀನು ಕೊಟ್ರೆ ಆಗುತ್ತಾ? ಬೆಟ್ಟಗುಡ್ಡ ಇದ್ಯಾ? ಗಾಳಿ ಹೆಚ್ಚಾಗಿದ್ಯಾ ಅನ್ನೋದನ್ನು ನೋಡುತ್ತಾರೆ ಎಂದರು.
ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ನಿಗದಿ ವಿಚಾರದಲ್ಲಿ ನಾವು ಏನು ಹೇಳಬೇಕು ಅದನ್ನ ಹೇಳಿದ್ದೇವೆ. ಈ ಹಿಂದೆ ಬಿಡದಿಯಲ್ಲಿ ಆಗಲ್ಲ ಎಂದು ತಾಂತ್ರಿಕ ಸಮಿತಿ ಹೇಳಿತ್ತು. ಆಗ ದೇವನಹಳ್ಳಿಗೆ ಶಿಫ್ಟ್ ಮಾಡಿದ್ದೆವು. ಈಗ ಮತ್ತೆ ಬಿಡದಿ ಭಾಗದಲ್ಲಿ ಆಗುತ್ತಾ? ಇಲ್ಲವಾ? ಏನು ಹೇಳುತ್ತಾರೆ ಎನ್ನುವುದನ್ನು ನೋಡಬೇಕು. ತಾಂತ್ರಿಕವಾಗಿ ಸಮಸ್ಯೆಯಿದ್ದು, ಅದಕ್ಕೆ ಒತ್ತಡ ಹಾಕಿದರೆ ಬದಲಾವಣೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.
ಎರಡನೇ ವಿಮಾನ ನಿಲ್ದಾಣಕ್ಕೆ ನೆಲಮಂಗಲ, ಬಿಡದಿ ಎರಡು ಸ್ಥಳಗಳನ್ನ ಗುರುತಿಸಿದ್ದಾರೆ. ಟೆಕ್ನಿಕಲ್ ಕಮಿಟಿ ಏನು ರಿಪೋರ್ಟ್ ಕೊಡುತ್ತಾರೆ ನೋಡೋಣ. ಫಿಸಿಬಲಿಟಿ ರಿಪೋರ್ಟ್ ಕೊಟ್ಟ ಬಳಿಕ ಗೊತ್ತಾಗುತ್ತದೆ. ಯಾರ ಒತ್ತಡದ ಬಗ್ಗೆಯೂ ನನಗೆ ಗೊತ್ತಿಲ್ಲ. ಆದರೆ ಹಾಗೆ ಮಾಡಲು ಬರಲ್ಲ ಎಂದು ಹೇಳಿದರು.
ಇದೇ ವೇಳೆ ಅಹಮದಾಬಾದ್ ಗೆ ಹೋಗುವ ವಿಚಾರವಾಗಿ ಮಾತನಾಡಿ, ನಾನೇನು ಹೋಗ್ತಾ ಇಲ್ಲ. ಬೇರೆ ಬೇರೆ ಕೆಲಸ ಇದ್ದಾವೆ ಇಲ್ಲಿ ಹಾಗಾಗಿ ಹೋಗ್ತಾ ಇಲ್ಲ. ಸಂಘಟನಾತ್ಮಕವಾಗಿ ಏನು ಬೇಕಾದ್ರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ನಮ್ಮ ಮುಂದಿನ ನೋಟ ಏನು ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚೆ ಮತ್ತು ತೀರ್ಮಾನ ಆಗುತ್ತದೆ. ಹಿಂದೆ ಜೈಪುರದಲ್ಲಿ ತೀರ್ಮಾನ ಮಾಡಿದಾಗ ಜೈಪುರ ರೆಸ್ಯುಲೇಷನ್ ಅಂತ ಹೆಸರಿಟ್ರು. ಈಗ ಅಹಮದಾಬಾದ್ ನಲ್ಲಿ ಮಾಡ್ತಾ ಇದ್ದಾರೆ ಇದರ ರೆಸ್ಯುಲೇಷನ್ ಅಂತನೇ ಹೇಳಬಹುದು. ಮುಂದಿನ ದೃಷ್ಡಿಕೋನ ಇಟ್ಟುಕೊಂಡು ಏನು ತೀರ್ಮಾನ ಮಾಡ್ತಾರೋ ಅದನ್ನ ಅನುಷ್ಠಾನ ಮಾಡಲು ರೆಡಿ ಇರ್ತೇವೆ ಎಂದರು.
ಕೇಂದ್ರದಿಂದ ಬೆಲೆ ಏರಿಕೆ ವಿಚಾರ:
ಕೇಂದ್ರದಿಂದ ಬೆಲೆ ಏರಿಕೆ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿ, ಬೆಲೆ ಏರಿಕೆ ಬಗ್ಗೆ ನಮ್ಮ ವಿರುದ್ಧ ಪ್ರತಿಭಟನೆ ಮಾಡ್ತಿದ್ದರು. ಲೋಕಲ್ ಬಿಜೆಪಿಗೆ ಕೇಂದ್ರದ ಬೆಲೆ ಏರಿಕೆ ಬಗ್ಗೆ ಗೊತ್ತಿಲ್ಲ. ಇದರಿಂದಲೇ ಅವರ ನೀತಿಗಳು ಹೇಗಿದೆ ಅನ್ನೋ ಬಗ್ಗೆ ಗೊತ್ತಾಗುತ್ತದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ಬಗ್ಗೆ ಅವರು ಏನು ಹೇಳ್ತಾರೆ ನೋಡೋಣ. ಆಮೇಲೆ ಅದರ ಬಗ್ಗೆ ಪ್ರತಿಕ್ರಿಯೆ ಕೊಡೋಣ. ರಾಜ್ಯದ ಜನರು ಜನಾಕ್ರೋಶ ಯಾತ್ರೆ ನೋಡ್ತಾರೆ ಎಂದಿದ್ದೆ. ಅದು ಬಿಟ್ಟು ನೀವು ಏನೇನೋ ಹಾಕ್ತಿರಿ. ಜನಾಕ್ರೋಶ ಯಾತ್ರೆ ಅಲ್ಲ, ಬಿಜೆಪಿ ಆಕ್ರೋಶ ಅಂತ ನಿನ್ನೆ ಹೇಳಿದ್ದೆ ಆಕ್ರೋಶ ಮಾಡೋಕೆ ಹೊರಟಿರೋರು ಉತ್ತರ ಕೊಡಲಿ ಎಂದರು.
ಇದೇ ವೇಳೆ ಮಹಿಳೆಯರ ಮೇಲಿನ ದೌರ್ಜನ್ಯ ವಿಚಾರವಾಗಿ ನಿನ್ನೆಯ ಸುದ್ದಿಗೆ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಬೇರೆ ಬೇರೆ ವೇದಿಕೆಯಲ್ಲಿ ಬೇರೆ ಬೇರೆ ರೀತಿ ಅರ್ಥ ಮಾಡಿಕೊಂಡಿದ್ದಾರೆ. ನಾವು ಮಹಿಳೆಯರ ರಕ್ಷಣೆ ಪರವಾಗಿ ಇರುವವರು. ನಾನು ಗೃಹ ಸಚಿವನಾಗಿ ಬಂದ ಮೇಲೆ ನಿರ್ಭಯಾ ಸೇರಿದಂತೆ ಅನೇಕ ಕಾರ್ಯಕ್ರಮ ಮಾಡಿದ್ದೇನೆ. ನಾನು ಅಧಿಕಾರಕ್ಕೆ ಬಂದಾಗ ಆ ನಿಟ್ಟಿನಲ್ಲಿ ಮಹಿಳೆಯರ ಪರ ಅನೇಕ ಕೆಲಸ ಮಾಡಿದ್ದೇನೆ. ಬೇರೆ ರಾಜ್ಯಗಳಿಗಿಂದ ಹೆಚ್ಚು ಹಣ ನಿರ್ಭಯಾ ಯೋಜನೆಗೆ ಅಂತಾನೆ ಖರ್ಚು ಮಾಡಿದ್ದೇವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜೊತೆಗೆ ನಿರ್ಭಯಾ ಯೋಜನೆ ಜಾರಿ ಮಾಡಿದ್ದೇವೆ ಅದಕ್ಕಾಗಿ ಒಂದು ಪ್ರತ್ಯೇಕ ಸುದ್ದಿಗೋಷ್ಟಿ ಮಾಡುತ್ತೇನೆ ಸುಮ್ಮನೆ ಹೇಳಿಕೆ ತಿರುಚಿ ಹೇಳುವುದು ಸರಿಯಲ್ಲ. ನನ್ನ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಅನೇಕ ಕ್ರಮ ತೆಗದುಕೊಂಡಿದ್ದೇನೆ.ನಮ್ಮ ಮಹಿಳೆಯರು, ತಾಯಂದಿರು, ಸಹೋದರಿಯರ ರಕ್ಷಣೆ ಆಗಬೇಕು ಅಂತ ಇರೋವ್ನು ಯಾರಿಗೆ ತೊಂದರೆ ಆದರೂ ಕೂಡ ನೇರವಾಗಿ ನಮ್ಮ ಇಲಾಖೆಯಲ್ಲಿ ಇರುವವರನ್ನೇ ಹೊಣೆ ಮಾಡಿದ್ದೇವೆ. ನನ್ನ ಹೇಳಿಕೆ ತಿರುಚಿ ಹೇಳುವುದು ಆಗಬಾರದು. ತಾಯಂದಿರ ರಕ್ಷಣೆ ಆಗಬೇಕು ಅನ್ನೋ ನಂಬಿಕೆಯಲ್ಲಿ ಇರುವವನು. ಬಿಜೆಪಿ ಇದರಲ್ಲಿ ರಾಜಕೀಯ ಮಾಡೋದು ಸಾಮಾನ್ಯ. ಅವರಿಗೆ ನಾನು ಈ ಮಾತು ಹೇಳುತ್ತಿಲ್ಲ. ಆದ್ರೆ ನನ್ನ ಹೇಳಿಕೆಯಿಂದ ನಾಡಿನ ಮಹಿಳೆಯರಿಗೆ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.