ಲಕ್ನೋ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 8 ವಿಕೆಟ್‌ಗಳ ಭರ್ಜರಿ ಗೆಲುವು ಸಿಕ್ಕಿದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೆಂಟ್ಸ್, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಲಕ್ನೋ ನೀಡಿದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಗೆಲುವು ಸಾಧಿಸಿದೆ
ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ಪರ ಕರುಣ್ ನಾಯರ್ 9 ಎಸೆತಗಳಲ್ಲಿ 15, ಅಭಿಷೇಕ್ ಪೊರೆಲ್ 36 ಎಸೆತಗಳಲ್ಲಿ 51, ಕೆಎಲ್ ರಾಹುಲ್ ಔಟಾಗದೇ 42 ಎಸೆತಗಳಲ್ಲಿ 57 ರನ್, ಅಕ್ಷರ್ ಪಟೇಲ್ ಔಟಾಗದೇ 20 ಎಸೆತಗಳಲ್ಲಿ 34 ರನ್‌ಗಳಿಸಿತು. ಲಕ್ನೋ ಪರ ಏಡನ್ ಮಾರ್ಕ್ರಮ್ 2 ವಿಕೆಟ್ ಕಬಳಿಸಿದರು.
ಲಕ್ನೋ ಸೂಪರ್ ಜೆಂಟ್ಸ್ ಪರ ಏಡನ್ ಮಾರ್ಕ್ರಮ್ 33 ಎಸೆತಗಳಲ್ಲಿ 52, ಮಿಚೆಲ್ ಮಾರ್ಷ್ 36 ಎಸೆತಗಳಲ್ಲಿ 45, ಆಯುಷ್ ಬಡೋನಿ 21 ಎಸೆತಗಳಲ್ಲಿ 36 ಹಾಗೂ ಡೇವಿಡ್ ಮಿಲ್ಲರ್ ಔಟಾಗದೇ 15 ಎಸೆತಗಳಲ್ಲಿ 14 ರನ್‌ಗಳಿಸಿ, 160 ರನ್‌ಗಳ ಗೆಲುವಿನ ಗುರಿ ನೀಡುವಲ್ಲಿ ನೆರವಾದರು.