ಬೆಂಗಳೂರು (ಆನೇಕಲ್): ಇತ್ತೀಚಿನ ದಿನಗಳಲ್ಲಿ ನಾಗರಿಕ ಸಮಾಜ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಕೆಲವೊಂದು ಕೊಲೆ ಪ್ರಕರಣ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತಿವೆ.
ಇತ್ತೀಚೆಗೆ ನೊಯ್ಡಾದಲ್ಲಿ ಪ್ರಿಯಕರನೊಬ್ಬ ಪ್ರೇಯಸಿಯನ್ನು ಕೊಂದು ಫ್ರಿಡ್ಜ್ ನಲ್ಲಿ ಇಟ್ಟಿದ್ದ. ಕೆಲ ತಿಂಗಳ ಹಿಂದೆ ಬೆಂಗಳೂರಿನ ವೈಯಾಲಿಕಾವಲ್‌ನ ಮನೆಯೊಂದರಲ್ಲಿ ಮಹಿಳೆಯನ್ನು ಕೊಂದಿದ್ದ ಪ್ರಿಯಕರ, ಆಕೆಯ ದೇಹ ಪೀಸ್ ಪೀಸ್ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿದ್ದ. ಇದು ಕರುನಾಡು ಸೇರಿದಂತೆ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿತ್ತು.
ಈ ಘಟನೆ ಜನಮಾನದಿಂದ ಮಾಸುವ ಮುನ್ನವೇ ಬೆಂಗಳೂರಿನ ಆನೇಕಲ್ ನಲ್ಲಿ ಮತ್ತೊಂದು ಘನಗೋರ ದುರಂತ ನಡೆದು ಹೋಗಿದೆ. ಸೂಟ್ ಕೇಸ್ ನಲ್ಲಿ 9 ವರ್ಷದ ಬಾಲಕಿ ಶವಪತ್ತೆಯಾಗಿದೆ.
ಆನೇಕಲ್ ಬಳಿಯ ಹಳೆ ಚಂದಾಪುರದ ನಿರ್ಮಾಣ ಹಂತದ ರೈಲ್ವೆ ಬ್ರಿಡ್ಜ್ ಸಮೀಪ ಬಾಲಕಿ ಶವ ಸೂಟ್ ಕೇಸಲ್ಲಿ ಪತ್ತೆಯಾಗಿದೆ. ಬಾಲಕಿಯನ್ನು ಬೇರೆಡೆ ಕೊಲೆ ಮಾಡಿ ಸೂಟ್ಕೇಸ್ ನಲ್ಲಿ ಶವನ್ನ ಸಾಗಿಸಲಾಗಿದೆ ಅಂತ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ರುಂಡ ಮುಂಡ ಕತ್ತರಿಸಿದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಸೂರ್ಯ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.