Close Menu
Ain Live News
    Facebook X (Twitter) Instagram YouTube
    Sunday, April 27
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Raichur: ತಾಯಿಗೆ ಕಿರುಕುಳ ನೀಡುತ್ತಿದ್ದ ತಂದೆಯನ್ನು ಕಲ್ಲು ಎತ್ತಿ ಹಾಕಿ ಕೊಂದ ಮಗ..!

    By AIN AuthorNovember 6, 2023
    Share
    Facebook Twitter LinkedIn Pinterest Email

    ರಾಯಚೂರು: ತಾಯಿಗೆ ಸದಾ ಕಿರುಕುಳ ನೀಡುತ್ತಿದ್ದಾನೆ ಎಂಬ ಸಿಟ್ಟಿನಲ್ಲಿ ಮಗನೊಬ್ಬ ತಂದೆಯನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಂಡಿ ತಿಮ್ಮಣ್ಣ (55) ಎಂಬಾತನನ್ನು ಅವನ ಮಗ ಶೀಲವಂತ (32) ಕೊಲೆ ಮಾಡಿದ್ದಾನೆ. ಕೊಂದ ಬಳಿಕ ಮೊದಲು ಶವವನ್ನು ನಾಶ ಮಾಡಲು ಮುಂದಾಗಿದ್ದನಾದರೂ ಬಳಿಕ ಭಯಗೊಂಡು ತಾನೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

    ಬಂಡಿ ತಿಮ್ಮಪ್ಪ, ಅವನ ಪತ್ನಿ, ಮಗ ಶೀಲವಂತ, ಸೊಸೆ ಮತ್ತು ಇಬ್ಬರು ಮಕ್ಕಳು ಜತೆಯಾಗಿ ವಾಸಿಸುತ್ತಿದ್ದರು. ಬಂಡಿ ತಿಮ್ಮಣ್ಣ ಯಾವಾಗಲೂ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಗ ಶೀಲವಂತ ಹಲವಾರು ಬಾರಿ ಹೇಳಿದರೂ ಜಗಳ ನಿಲ್ಲಲೇ ಇಲ್ಲ. ಇದರಿಂದ ಆತ ಕುಪಿತನಾಗಿದ್ದ ಎನ್ನಲಾಗಿದೆ. ಭಾನುವಾರದಂದು ಈ ಕುರಿತ ಮಾತುಕತೆ ತಾರಕಕ್ಕೆ ಏರಿದೆ. ಈ ವೇಳೆ ಉಂಟಾದ ಘರ್ಷಣೆಯಲ್ಲಿ ಕೊಲೆ ಸಂಭವಿಸಿದೆ. ಎಲ್ಲ ಕುಟುಂಬಿಕರ ಮುಂದೆಯೇ ಮಗ ತಂದೆಯನ್ನು ಕೊಂದು ಹಾಕಿದ್ದಾನೆ.

    ಮನೆಯಲ್ಲಿ ಜಗಳ ಜೋರಾಗುತ್ತಿದ್ದಂತೆಯೇ ಶೀಲವಂತ ತನ್ನ ಸಣ್ಣ ಮಗನನ್ನು ಮೊದಲು ಒಂದು ಕೋಣೆಗೆ ಹೋಗುವಂತೆ ಹೇಳಿದ್ದಾನೆ. ಬಳಿಕ ಹೆಂಡತಿ ಮತ್ತು ಮಗಳ ಮುಂದೆಯೇ ಒಂದು ಕಲ್ಲು ತಂದು ತಂದೆಯ ತಲೆಯ ಮೇಲೆ ಎತ್ತಿ ಹಾಕಿದ್ದಾನೆ. ಮನೆಯಲ್ಲಿದ್ದವರು ತಡೆಯಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

    ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಬಂಡಿ ತಿಮ್ಮಪ್ಪ ಅಲ್ಲೇ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾನೆ. ಈ ನಡುವೆ, ಕೊಲೆ ಮಾಡಿದ ಮಗ ಪ್ರಕರಣ ಮುಚ್ಚಿ ಹಾಕಲು ಮೊದಲು ಯತ್ನಿಸಿದ್ದಾರೆ. ಶವವನ್ನು ಮನೆಯಿಂದ ಹೊರಗೆ ಎಳೆದು ತಂದು ದೇಹವನ್ನು ನಾಶ ಮಾಡಲು ಯತ್ನಿಸಿದ್ದಾನೆ. ಆದರೆ, ತೀವ್ರ ರಕ್ತಸ್ರಾವ ಆಗಿದ್ದರಿಂದ ಆತನ ಪ್ಲ್ಯಾನ್‌ ಯಶಸ್ವಿಯಾಗಲಿಲ್ಲ.

    ಕೊನೆಗೆ ಅವನು ಅನಿವಾರ್ಯವಾಗಿ ಪೊಲೀಸ್‌ ಸಹಾಯವಾಣಿ 112 ಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ನಡುವೆ ಬಂಡಿ ತಿಮ್ಮಪ್ಪನ ಹೆಂಡತಿ ಮತ್ತು ಸೊಸೆ ಶೀಲವಂತನ ಪರವಾಗಿ ಮಾತನಾಡಿದ್ದಾರೆ. ಮನೆಯಲ್ಲಿ ಒಂದು ದಿನವೂ ನೆಮ್ಮದಿ ಇಲ್ಲದ ಪರಿಸ್ಥಿತಿ ಇತ್ತು. ಅನಗತ್ಯವಾಗಿ ಚಿತ್ರಹಿಂಸೆ ನೀಡುತ್ತಿದ್ದ.

    ಅವನನ್ನು ತಡೆಯುವ ಪ್ರಯತ್ನಗಳ್ಯಾವುದೂ ಕೈಗೂಡಿರಲಿಲ್ಲ. ಇದೀಗ ಮಗ ಸಿಟ್ಟಿನಿಂದ ಈ ರೀತಿ ಮಾಡಿದ್ದಾನೆ ಎಂದು ಶೀಲವಂತನ ತಾಯಿ ಹೇಳಿದ್ದಾರೆ. ಆದರೆ, ಯಾರು ಏನೇ ಮಾಡಿದರೂ ಅದಕ್ಕೆ ಸೂಕ್ತವಾದ ನ್ಯಾಯದ ದಾರಿಗಳಿವೆ. ಅದನ್ನು ಬಿಟ್ಟು ಕೊಲೆ ಮಾಡುವುದು ಅಪರಾಧವಾಗುತ್ತದೆ ಎಂದು ಹೇಳಿರುವ ಪೊಲಿಸರು ಶೀಲವಂತನನ್ನು ಬಂಧಿಸಿದ್ದಾರೆ. ಮುಂದಿನ ಕ್ರಮಗಳನ್ನು ಜರುಗಿಸಲು ಸೂಚಿಸಲಾಗಿದೆ.

    Demo Demo
    Share. Facebook Twitter LinkedIn Email WhatsApp

    Related Posts

    ಶ್ರೀ ಚೌಡೇಶ್ವರಿ ದೇವಾಲಯದ ವಾರ್ಷಿಕ ಮಹೋತ್ಸವಕ್ಕೆ ಕೌಂಟ್ ಡೌನ್: ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ!

    April 27, 2025

    ಸಾರಿಗೆ ಬಸ್-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಸಾವು!

    April 27, 2025

    ಅಮಿತ್ ಶಾ, ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರೋಪಿ ಅರೆಸ್ಟ್!

    April 26, 2025

    ಪಹಲ್ಗಾಮ್ ದಾಳಿ: ಕೇಂದ್ರದ ಇಂಟಲಿಜೆನ್ಸಿ ಸಂಪೂರ್ಣ ವಿಫಲ- ಶಾಸಕ ಶರತ್ ಬಚ್ಚೇಗೌಡ!

    April 26, 2025

    ಹಾಸನದಲ್ಲಿ ಆಲಿಕಲ್ಲು ಮಳೆ: ಜನಜೀವನ ಅಸ್ತವ್ಯಸ್ತ!

    April 26, 2025

    ಪಹಲ್ಗಾಮ್ ದಾಳಿ ಖಂಡಿಸಿ ಪ್ರೊಟೆಸ್ಟ್: ಪಾಕ್ ಧ್ವಜದ ಮೇಲೆ ಚಪ್ಪಲಿ ಇಟ್ಟು ಆಕ್ರೋಶ!

    April 26, 2025

    Pahalgam Terror Attack: ದೇಶದ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ – ಶಾಸಕ ಎಸ್.ಎನ್.ನಾರಾಯಣಸ್ವಾಮಿ!

    April 26, 2025

    ಚಿಕ್ಕಬಳ್ಳಾಪುರ : ಈಜು ಕಲಿಸಲು ಹೋಗಿ ತಂದೆ, ಮಗಳು ಇಬ್ಬರು ಸಾವು

    April 26, 2025

    ಧಾರವಾಡ ಉಪನಗರ ಠಾಣಾ ಪೊಲೀಸರು ಕಾರ್ಯಾಚರಣೆ ; ಬೈಕ್ ಕಳ್ಳರ ಬಂಧನ

    April 26, 2025

    ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ಕೇಂದ್ರ ಸಚಿವೆ ರಕ್ಷಾ ಕಾಡ್ಸೆ ಭೇಟಿ: ಸಚಿವರಿಗೆ ಸಾಥ್ ನೀಡಿದ ಶಾಸಕ ಬೆಲ್ಲದ

    April 26, 2025

    ವಿದ್ಯಾರ್ಥಿಗಳಿಗೆ ವಿದ್ಯೆ ಬುದ್ದಿ ಎರಡು ಜೊತೆಯಲ್ಲಿ ಇರಬೇಕು : ಶಾಸಕ ಕೊತ್ತೂರು ಮಂಜುನಾಥ್

    April 26, 2025

    ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ; ಆರ್.ಬಿ.ತಿಮ್ಮಾಪುರ

    April 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.