Close Menu
Ain Live News
    Facebook X (Twitter) Instagram YouTube
    Friday, May 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್:‌ ರಾಜ್ಯದಲ್ಲಿ ನಿಲ್ಲದ ಖಾಸಗಿ ಬಸ್ ಗಳ ಹಗಲು ದರೋಡೆ!

    By AIN AuthorNovember 6, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಹಬ್ಬ ಬಂತು ಅಂದರೆ ಖಾಸಗಿ ಬಸ್ಗಳಿಂದ ಹಗಲು ದರೋಡೆ ಶುರುವಾಗುತ್ತೆ. ಸಾಲು ಸಾಲು ರಜೆ ಅಂತ ಗೊತ್ತಾದ್ರೆ ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ಸುಲಿಗೆ ಶುರುವಾಗುತ್ತೆ. ದೀಪಾವಳಿಗೆ ಅಂತ ಮನೆ ಕಡೆ ಹೊಗಲು ಸಿದ್ದವಾಗಿರೋರಿಗೆ ಶಾಕ್ ಎದುರಾಗಿದೆ.. ಪ್ರವೈಟ್ ಬಸ್ನಲ್ಲಿ ಟಿಕೆಟ್ ಬುಕ್ ಮಾಡಲು ಹೋದವರು ಡಬಲ್, ತ್ರಿಬಲ್ ರೇಟ್ ಕೊಡಬೇಕಿದೆ.

     

    ಹಬ್ಬ, ಸಾಲು ಸಾಲು ರಜೆ ಬಂದ್ರೆ ಸಾಕು ಖಾಸಗಿ ಬಸ್ ಗಳ ಸುಲಿಗೆ ಶುರುವಾಗುತ್ತೆ. ಕಣ್ಣುಮುಂದೆ ಸಿಕ್ಕಾಪಟ್ಟೆ ಪ್ರಯಾಣಿಕರಿಂದ ಸುಲಿಗೆ ನಡೆಯುತ್ತಿದ್ರೂ ಸಾರಿಗೆ ಇಲಾಖೆ ಮಾತ್ರ ತಲೆನೇಕೆಡಿಸಿಕೊಳ್ಳಲ್ಲ.ಪ್ರತಿ ಹಬ್ಬ ಹರಿದಿನದ ವೇಳೆ ಹೆಸರಿಗೆ ಮಾತ್ರ ಖಾಸಗಿ ಬಸ್ ಗಳ ಮೇಲೆ ದಾಳಿ ಮಾಡೋ ಇಲಾಖೆ ಶಾಶ್ವತವಾಗಿ ಏರಿಕೆಗೆ ಕಡಿವಾಣ ಹಾಕಲು ಪ್ರಯತ್ನ ನಡೆಯುತ್ತಿಲ್ಲ.ಇದೀಗ ದೀಪಾವಳಿ ಬರುತ್ತಿದ್ದು, ಇದನ್ನ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು ಯರಬಿರ್ರಿ ಟಿಕೆಟ್ ದರವನ್ನ ಹೆಚ್ಚಸಿದ್ದಾರೆ.

    .ಹೌದು ದೀಪಾವಳಿ ಹೀಗೆ ಹಬ್ಬಗಳ ಸೀಜನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಹಬ್ಬವೇ ಹಬ್ಬ…ಸಿಕ್ಕಿದ್ದೆ ಚಾನ್ಸ್ ಅಂತ ಜನರಿಂದ ಸುಲಿಗೆಗೆ ಇಳಿದು ಬಿಡ್ತಾರೆ. ರಜೆ ಅಂತ ಮನೆ ಕಡೆ ಹೊರಟವರ ಬಳಿ ಹಗಲು ದರೋಡೆ ಶುರು ಮಾಡ್ತಾರೆ. ಈಗ ದೀಪಾವಳಿ ಅಂತ ಮನೆ ಕಡೆ ಹೊಗಲು ಖಾಸಗಿ ಬಸ್ ಬುಕ್ ಮಾಡೋಕೆ ಹೋದ್ರೆ ಆಘಾತ ಎದುರಾಗಿದೆ. ಸಾಮಾನ್ಯ ದಿನದಲ್ಲಿ ಇದ್ದ ಬಸ್ ದರ ದೀಪಾವಳಿ ರಜೆ ಬರ್ತಿದ್ದಂತೆ ಎರಡ್ಮೂರು ಪಟ್ಟು ಹೆಚ್ಚಳವಾಗಿದೆ. ರಜೆಯಿಂದ ಖಾಸಗಿ ಬಸ್ ಬುಕ್ಕಿಂಗ್ ಹೆಚ್ಚಳವಾಗ್ತಿದಂತೆ ಖಾಸಗಿ ಬಸ್ ಮಾಲೀಕರು ದಿಢೀರ್ ಆಗಿ ದರ ಏರಿಕೆ ಮಾಡಿ ಶಾಕ್ ಕೊಟ್ಟಿದ್ದಾರೆ. ಟಿಕೆಟ್ ಬುಕಿಂಗ್ ವೆಬ್ ಸೈಟ್ನಲ್ಲಿ ಮನಸ್ಸಿಗೆ ಬಂದಂತೆ ದರ ಡಬಲ್ ಆಗಿದೆ. ನವೆಂಬರ್ 11ರಿಂದ ದೀಪಾವಳಿ ಹಿನ್ನೆಲೆ ಸಾಲು ಸಾಲು ರಜೆ ಶುರುವಾಗುತ್ತೆ. ನವೆಂಬರ್ 11 ಎರಡನೇ ಶನಿವಾರ ಆದರೆ, ನವೆಂಬರ್ 12ರಿಂದ ದೀಪಾವಳಿ ಹಬ್ಬ ಆರಂಭವಾಗುತ್ತೆ. ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ನವೆಂಬರ್ 10ರಂದು ಊರಿಗೆ ತೆರಳಲು ಟಿಕೆಟ್ ಬುಕ್ ಮಾಡಲು ಹೋದವರಿಗೆ ರೇಟ್ ಹೈಕ್ ಬಿಸಿ ತಟ್ಟಿದೆ.ಯಾವೆಲ್ಲಾ ರೂಟ್ ಗೆ ಎಷ್ಟೆಷ್ಟು ಇದೆ ಅಂತ ನೋಡೋದ್ರಾ

    ಬಸ್ ಟಿಕೆಟ್ ಶಾಕ್
    ಬೆಂಗಳೂರು-ಬೆಳಗಾವಿ( ನಾನ್ ಎಸಿ)
    ನವೆಂಬರ್ 6 ದರ ₹700-₹800
    ನವೆಂಬರ್ 10 ದರ ₹2000-₹2800
    ಬೆಂಗಳೂರು-ಬೆಳಗಾವಿ ( ಎಸಿ)
    ನವೆಂಬರ್ 6 ದರ ₹1000-₹1500
    ನವೆಂಬರ್ 10 ದರ ₹3000-₹4000
    (ಇವತ್ತು ಬೆಂಗಳೂರುನಿಂದ ಬೆಳಗಾವಿಗೆ ನಾನ್ ಎಸಿ ಸ್ಲೀಪರ್ ಬಸ್ ದರ ₹700ರಿಂದ ₹800 ಇದೆ. ಆದರೆ ನವೆಂಬರ್ 10ರಂದು ₹2000 ರಿಂದ ₹2800ಕ್ಕೆ ಏರಿಕೆ ಆಗಿದೆ. ಇನ್ನೂ ಎಸಿ ಸ್ಲೀಪರ್ ಬಸ್ ದರ ಇಂದು ₹1000 ದಿಂದ ₹1500 ಇದೆ. ನವೆಂಬರ್ 10 ದರ ಬರೊಬ್ಬರಿ ಮೂರು ಪಟ್ಟು ಹೆಚ್ಚಾಗಿದೆ. ಟೆಕೆಟ್ ರೇಟ್ ₹3000 ರಿಂದ ₹4000 ಆಗಿದೆ.)

    ಬಸ್ ಟಿಕೆಟ್ ಶಾಕ್
    ಬೆಂಗಳೂರು – ಬೀದರ್ (ನಾನ್ ಎಸಿ)
    ನವೆಂಬರ್ 6 ದರ ₹800-₹900
    ನವೆಂಬರ್ 10 ದರ ₹2500-₹3000

    ಬೆಂಗಳೂರು – ಬೀದರ್ (ಎಸಿ)
    ನವೆಂಬರ್ 6 ದರ ₹900-₹1300
    ನವೆಂಬರ್ 10 ದರ ₹3150-₹3800
    (ಬೆಂಗಳೂರುನಿಂದ ಬೀದರ್ ಗೆ ನಾನ್ಎಸಿ ಸ್ಲೀಪರ್ ಬಸ್ ದರ ಇವತ್ತು ₹800 ರಿಂದ ₹900 ಇದೆ. ಆದರೆ ನವೆಂಬರ್ 10ಕ್ಕೆ ಮೂರು ಪಟ್ಟು ಹೆಚ್ಚಾಗಿದ್ದು ₹2500ಯಿಂದ ₹3000 ಆಗಿದೆ. ಹಾಗೆಯೇ ಎಸಿ ಬಸ್ ದರ ಇವತ್ತು ₹900 ರಿಂದ ₹1300 ಇದೆ. ನವೆಂಬರ್ 10ಕ್ಕೆ ₹3150 ರಿಂದ ₹3800ಕ್ಕೆ ಏರಿಕೆ ಆಗಿದೆ)
    ಬಸ್ ಟಿಕೆಟ್ ಶಾಕ್
    ಬೆಂಗಳೂರು – ವಿಜಯಪುರ (ನಾನ್ ಎಸಿ)
    ನವೆಂಬರ್ 6 ದರ ₹550- ₹1000
    ಬೆಂಗಳೂರು – ವಿಜಯಪುರ (ಎಸಿ)
    ನವೆಂಬರ್ 6 ದರ ₹800-₹1200
    ನವೆಂಬರ್ 10 ದರ ₹2500-₹2900
    ಬೆಂಗಳೂರಿನಿಂದ ವಿಜಯಪುರಕ್ಕೆ ಇವತ್ತಿನ ನಾನ್ ಎಸಿ ಬಸ್ ಟಿಕೆಟ್ ದರ ₹550 ರಿಂದ ₹1000 ಇದೆ. ನವೆಂಬರ್ 10 ದರ ₹1900ರಿಂದ ₹2200ಕ್ಕೆ ಏರಿಕೆ ಆಗಿದೆ. ಎಸಿ ಬಸ್ ದರ ಇವತ್ತು ₹800-₹1200 ಇದ್ರೆ, ನವೆಂಬರ್ 10 ರಂದು ₹2500-₹2900 ಆಗಿದೆ.)

    ಖಾಸಗಿ ಬಸ್ ಗಳ ಸುಲಿಗೆ
    ಬೆಂಗಳೂರು-ಶಿವಮೊಗ್ಗ(ನಾನ್ ಎಸಿ)
    ನವೆಂಬರ್ 6 ದರ ₹500-₹700
    ನವೆಂಬರ್ 10 ದರ ₹1500-₹2000
    ಬೆಂಗಳೂರು-ಶಿವಮೊಗ್ಗ(ಎಸಿ)
    ನವೆಂಬರ್ 6 ದರ ₹600-₹700
    ನವೆಂಬರ್ 10 ದರ ₹2000-₹2500
    ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನಾನ್ ಎಸಿ ಬಸ್ ಟಿಕೆಟ್ ದರ ಇವತ್ತು ₹500 ರಿಂದ ₹700 ಇದೆ. ಆದ್ರೆ ನವೆಂಬರ್ 10 ದರ ₹1500 ರಿಂದ ₹2000 ಆಗಿದೆ. ಎಸಿ ಬಸ್ ದರ ಇವತ್ತು ₹600-₹700 ಇದ್ರೆ ನವೆಂಬರ್ 10ರ ದರ ₹2000 ದಿಂದ ₹2500 ಆಗಿದೆ.ಇನ್ನು ಬೆಂಗಳೂರಿನಿಂದ ಹುಬ್ಬಳಿಗೆ ನಾನ್ ಎಸಿ ಬಸ್ ಟಿಕೆಟ್ ದರ ಇಂದು ₹600-₹800 ಇದೆ. ನವೆಂಬರ್ 10ಕ್ಕೆ ಈ ದರ ₹1600-₹2000ಕ್ಕೆ ಏರಿದೆ. ಎಸಿ ಬಸ್ ಟಿಕೆಟ್ ದರ ಇವತ್ತು ₹750 ರಿಂದ ₹1200 ಇದ್ರೆ ನವೆಂಬರ್ 10ಕ್ಕೆ ₹1700 ರಿಂದ ₹1800 ಆಗಿದೆ.ಪದೇ ಪದೇ ರೇಡ್ ಡಬಲ್ ಆದ್ರೂ ಸಾರಿಗೆ ಇಲಾಖೆ ಸೈಲೆಂಟ್ ಯಾಕೆ ಅನ್ನೋ ಪ್ರಶ್ನೆ ಮೂಡಿದೆ. ಈ ಬಗ್ಗೆ ಸಾರಿಗೆ ಸಚಿವರು ಹೇಳೋದು ಹೀಗೆ.

    ಒಟ್ಟಾರೆ ಪ್ರತಿ ಸಲ ಕೂಡ ಸಾಲು ಸಾಲು ರಜೆ ಬಂದಾಗ ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಏರಿಸ್ತಾನೆ ಇರ್ತಾರೆ.. ಸಾರಿಗೆ ಇಲಾಖೆ ಇನ್ನೂ ಕೂಡ ಈ ಹಗಲು ದರೋಡೆಗೆ ಬ್ರೇಕ್ ಹಾಕದೇ ಇರೋದು ಜನರ ಕಂಗೆಣ್ಣಿಗೆ ಗುರಿಯಾಗಿದೆ.

    Post Views: 3

    Demo
    Share. Facebook Twitter LinkedIn Email WhatsApp

    Related Posts

    ಕೆಲವರು ಕುತಂತ್ರ ಮಾಡಿ ದೂರು ಕೊಡಿಸಿದ್ದಾರೆ: ವಿಚಾರಣೆಯಲ್ಲಿ ಮನು ಹೇಳ್ತಿರೋದೇನು?

    May 23, 2025

    IPL 2025: ಇಂದು ಆರ್​ಸಿಬಿ- ಹೈದರಾಬಾದ್ ಸೆಣಸಾಟ: ಪಂದ್ಯಕ್ಕೆ ಮಳೆ ಕಾಟ!? ಪಿಚ್ ಯಾರಿಗೆ ಸಹಕಾರಿ? -ಇಲ್ಲಿದೆ ಡೀಟೈಲ್ಸ್!

    May 23, 2025

    ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರಗಳಿಗೆ ನಿರ್ಬಂಧ: ವಿಪಕ್ಷಗಳಿಂದ ತೀವ್ರ ಆಕ್ರೋಶ!

    May 23, 2025

    ತಾಂತ್ರಿಕ ತೊಂದರೆ: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲು ಬರಲ್ಲ!

    May 23, 2025

    ಕರುನಾಡಿಗೆ ಕೊರೊನಾ ಭೀತಿ: ಸೋಂಕಿನ ಕೇಸ್ ಹೆಚ್ಚಳ!

    May 23, 2025

    ಗುಡ್ ನ್ಯೂಸ್: ಕ್ಯಾನ್ಸರ್ ರೋಗಿಗಗಳಿಗಾಗಿ ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ!

    May 23, 2025

    ಮುಂದಿನ ಐದಾರು ದಿನ ಕರ್ನಾಟಕದಲ್ಲಿ ಭಾರೀ ಮಳೆ: ಹವಮಾನ ಇಲಾಖೆ!

    May 23, 2025

    ಅತ್ಯಾಚಾರ ಕೇಸ್: ಮಡೆನೂರ್ ಮನುನನ್ನ ಬೆಂಗ್ಳೂರಿಗೆ ಕರೆತಂದ ಪೊಲೀಸ್! ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ ರಿವಿಲ್!

    May 22, 2025

    ವನ್ಯಜೀವಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳೋ ಮುನ್ನ ಹುಷಾರ್: ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ಅರಣ್ಯ ಸಚಿವ!

    May 22, 2025

    ಮೆಟ್ರೋ 3ನೇ ಯೋಜನೆಗೆ ಸಚಿವ ಸಂಪುಟ ಅನುಮತಿ; ರಾಮನಗರ ಜಿಲ್ಲೆ ಈಗ ಬೆಂಗಳೂರು ದಕ್ಷಿಣ – ಡಿಕೆಶಿ!

    May 22, 2025

    ನಿತ್ಯವೂ ರೋಗಿಗಳ ಹಾರೈಕೆಯಲ್ಲಿರುವ ನರ್ಸ್‌ಗಳಿಗೆ ವಿಶೇಷ ದಿನಾಚರಣೆ!

    May 22, 2025

    ಕ್ಯಾನ್ಸರ್‌ ರೋಗಿಗಳಿಗೆ ಗುಡ್‌ ನ್ಯೂಸ್.. 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರಗಳ ಆರಂಭಕ್ಕೆ ಸರ್ಕಾರ ನಿರ್ಧಾರ!

    May 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.