Close Menu
Ain Live News
    Facebook X (Twitter) Instagram YouTube
    Saturday, May 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    HDK ಗೆ ಬಡವರ ಹೆಣ್ಣು ಮಕ್ಕಳ ನೋವು ಗೊತ್ತಿಲ್ಲ: ಡಿಸಿಎಂ ಕಿಡಿ

    By AIN AuthorNovember 12, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದು ಪಂಚ ಗ್ಯಾರಂಟಿ ಯೋಜನೆಗಳು. ಇದನ್ನೆ ಪಂಚರಾಜ್ಯಗಳ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಮಾಡಿಕೊಳ್ಳೊಕೆ ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಇದಕ್ಕೆ ಬ್ರೇಕ್ ಹಾಕೋದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ. ತೆಲಾಂಗಣದಲ್ಲಿ ಸಿಎಂ, ಡಿಸಿಎಂ ಪ್ರಚಾರ ಮಾಡಿದಕ್ಕೆ HDK ಟಾಂಕ್ ಕೊಟ್ಟಿದ್ದು ಡ್ಯೂಪ್ಲಿಕೇಟ್ ಸಿಎಂ ಅಂತ ಡಿಕೆಶಿಯನ್ನ ವ್ಯಂಗ್ಯವಾಡಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹ್ಯೂಬ್ಲೆಟ್ ವಾಚ್ ನ ಅಪ್ಡೇಟ್ ವರ್ಷನ್ ಬಾಂಬಗ ಸಿಡಿಸಿರೋದು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವಂತಿದೆ..

    DKS Vs HDK: ನಮ್ಮ ಗ್ಯಾರಂಟಿ ಬಗ್ಗೆ ಕುಮಾರಸ್ವಾಮಿಗೆ ಏನು ಗೊತ್ತಿದೆ: ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಮಾಜಿ ಸಿಎಂ ಕುಮಾರಸ್ವಾಮಿ ಒಂದಲ್ಲಾ ಒಂದು ಆರೋಪಗಳನ್ನ ಮಾಡ್ತಾ ಸರ್ಕಾರವನ್ನ ಇಕ್ಕಟಿಗೆ ಸಿಲುಕಿಸ್ತಿದ್ದಾರೆ. ವರ್ಗಾವಣೆ ದಂದೆಯನ್ನ ಸರ್ಕಾರದ ವಿರುದ್ದ ಹೋರಾಟ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಕುಮಾರಸ್ವಾಮಿ ಇದೀಗ ಗ್ಯಾರಂಟಿ ಯೋಜನೆಗಳನ್ನ ಸಮರ್ಪಕವಾಗಿ ಜಾರಿಗೆ ತರದೇ ಜನರನ್ನ ದಾರಿತಪ್ಪಿಸಿದ್ದಾರೆ ಅಂತಾ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸ್ತಿದ್ದಾರೆ. ಕರ್ನಾಟಕದ ಸಕ್ಸಸ್ ಮಂತ್ರ ಪಂಚ ಗ್ಯಾರಂಟಿ ಯೋಜನೆಗಳನ್ನೇ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಯಲ್ಲಿ ಪ್ರಚಾರದ ಅಸ್ತ್ರಗಳನ್ನಾಗಿ ಬಳಸಿಕೊಳ್ತಿದ್ದಾರೆ. ಪಂಚ ಗ್ಯಾರಂಟಿಗಳನ್ನು ಡೋಂಗಿ ಉಂಡೆನಾಮ ಅಂತ ಕಿಡಿ ಕಾರಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ…..

    ತೆಲಾಂಗಣ ಚುನಾವಣೆಯ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್ ಹೋಗಿದ್ದ ವಿಚಾರಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 5 ರಾಜ್ಯಗಳಲ್ಲಿನ ಚುನಾವಣೆ ಅಂಶಗಳನ್ನು ಗಮನಿಸಿದ್ದೇನೆ ಕಳೆದ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ನ ಗ್ಯಾರಂಟಿಗಳ ಯೋಜನೆ ಗಳಲ್ಲಿ ಯಶಸ್ಸುನ್ನು ಪಡೆದಿದ್ದೇವೆ. ಗ್ಯಾರಂಟಿಗಳು ಜನತೆಗೆ ಬದುಕಿನ ಭಾಗ್ಯದ ಬಾಗಿಲು ತೆರೆದಿವೆ ಅಂತ ಕಾಂಗ್ರೆಸ್ ನಾಯಕರು ಪ್ರತಿದಿನ ಬಡಾಯಿಕೊಚ್ಚಿಕೊಳ್ತಿದ್ದಾರೆ. ತೆಲಂಗಾಣದಲ್ಲಿ ನಮ್ಮ ಸಿಎಂ, ಡಿಸಿಎಂ, ಟೆಂಪವರಿ ಚೀಫ್ ಮಿನಿಸ್ಟರ್, ಡೂಪ್ಲಿಕೇಟ್ ಚೀಫ್ ಮಿನಿಸ್ಟರ್ ಗಳು ಹಾಗೂ ಮಂತ್ರಿಗಳು ಮಾತಾಡಿದ್ದಾರೆ ಈ ಗ್ಯಾರಂಟಿಗಳ ಬೆನ್ನು ತಟ್ಟಿಕೊಳ್ಳೋಕೆ ಹೋಗಿ ಮುಖಭಂಗ ಅನುಭವಿಸಿದ್ದಾರೆ ಅಂತಾ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೆ ಟೆಂಪರವರಿ, ಡೂಪ್ಲಿಕೇಟ್ ಚೀಫ್ ಮಿನಿಸ್ಟರ್ ಎಂದು ಟಾಂಗ್ ಕೊಟ್ರು ಕುಮಾರಸ್ವಾಮಿ…

    ತೆಲಾಂಗಣ ರಾಜ್ಯದ ಜನರು ಕಾಂಗ್ರೆಸ್ ನಾಯಕರ ಮಾತು ಕೇಳಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ನಮ್ಮ ರಾಜ್ಯದ ಜನರ ಹಾದಿ ತಪ್ಪಿಸಿದ್ದಾರೆ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಮೋಸ ಆಗಿದೆ ಅಂತಾ ಹಂತಹಂತವಾಗಿ ವಿವರಣೆ ನೀಡಿ ಆರೋಪಗಳ ಸುರುಮಳೆಗೈದಿದ್ದಾರೆ ಮಾಜಿ ಸಿಎಂ. ಇನ್ನೂ ಸಿಎಂ ಮನೆಯಲ್ಲಿ ಕಾನ್ಫರೆನ್ಸ್ ಹಾಲ್ ಮಾಡಿದ್ದಾರೆ, ಮೂರು ಕೋಟಿ ಖರ್ಚು ಆಹಿರಬಹುದು ಇದು ಸರ್ಕಾರದ ದುಡ್ಡಲ್ಲ ಸಚಿವರು ಒಬ್ಬರು ಸಿಎಂ ಮನೆ ರಿನೋವೇಷನ್ ಗೆ ಸ್ಟಾಂಗ್ಲೆ ಅಂತ ಫರ್ನಿಚರ್ ಕೊಟ್ಟಿದ್ದಾರಂತೆ. ಈ ಬಗ್ಗೆ ಸತ್ಯ ಹರಿಶ್ಚಂದ್ರ ರೇ ಉತ್ತರ ಕೊಡಬೇಕು.ಇದರ ಮೌಲ್ಯ 1 ಕೋಟಿ 90 ಲಕ್ಷ ಒಂದು ಸೋಫಾ ಸೆಟ್ ಒಂದು ಕಾಟ್ ಗೆ. ಇದು ಹ್ಯೂಬ್ಲೆಟ್ ನ ಅಬ್ ಡೇಟೆಟ್ ವರ್ಷನ್ ಎಂಬ ಗಂಭೀರ ಆರೋಪ ಮಾಡಿದ್ದಾರೆ ಕುಮಾರಸ್ವಾಮಿ….

    ಗ್ಯಾರಂಟಿ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೆ ಏನು ಸಂಬಂಧ ಕುಮಾರಸ್ವಾಮಿಗೆ ಏನು ಗೋತ್ತಿದೆ ನಮ್ಮ ಗ್ಯಾರಂಟಿ ಬಗ್ಗೆ ಅವರೇನು ಫಲಾನುಭವಿನಾ, ಅವರ ಪಂಚರತ್ನ ಯೋಜನೆ ಇಂಪ್ಲಿಮೆಂಟ್ ಮಾಡಲು ಆಗಲಿಲ್ಲ. ಜನರಿಗೆ ತಲುಪಿದೇಯೋ ಇಲ್ಲ ಅಂತ ಮತದಾರರು ಕೇಳಬೇಕು. ಚನ್ನಪಟ್ಟಣದ ಮತದಾರರನ್ನು ಕೇಳಿದ್ರೆ ಕುಮಾರಸ್ವಾಮಿ ಅವರಿಗೆ ಗೊತ್ತಾಗುತ್ತೆ. ಕುಮಾರಸ್ವಾಮಿ ಅಧಿಕಾರಕ್ಕಾಗಿ ಬಹಳ ಅರ್ಜೆಂಟ್ ಅಲ್ಲಿ ಇದ್ದಾರೆ ಅದಕ್ಕೆ ಏನೇನೊ ಮಾತಾಡ್ತಾರೆ ಅಂತ ತಿರುಗೇಟು ಕೊಟ್ಟಿದ್ದಾರೆ ಡಿಕೆಶಿ….

    ಒಟ್ನಲ್ಲಿ ಕಾಂಗ್ರೆಸ್ ವಿರುದ್ದ ಗ್ಯಾರಂಟಿ ಯೋಜನೆಗಳ ವಿಚಾರವನ್ನ ಇಟ್ಟುಕೊಂಡು ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ಅಖಾಡಕ್ಕೆ ಸಜ್ಜಾಗ್ತಿದ್ದಾರೆ. ಪಂಚರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನೆ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಕಂಟಕವಾಗ್ತಿದ್ದಾರೆ. ಸಿಎಂ ವಿರುದ್ಧ ಕುಮಾರಸ್ವಾಮಿ ಮಾಡಿರೋ ಹ್ಯೂಬ್ಲೆಟ್ ಅಪ್ಡೇಟ್ ವರ್ಷನ್ ಮುಂದಿನ‌ ದಿನಗಳಲ್ಲಿ ಭಾರೀ ಸದ್ದು ಮಾಡುವ ಮುನ್ಸೂಚನೆ ಕಂಡುಬರ್ತಿದೆ…

    Post Views: 2

    Demo
    Share. Facebook Twitter LinkedIn Email WhatsApp

    Related Posts

    ಹ್ಯಾಟ್ರಿಕ್ ಹೀರೋ ಶಿವಣ್ಣ ಮನೆಯಲ್ಲಿ ಒಂದೂವರೆ ಗಂಟೆ ಸಿಕ್ರೇಟ್ ಮೀಟಿಂಗ್: ಯಾರೆಲ್ಲಾ ಭಾಗಿಯಾಗಿದ್ದರು?

    May 17, 2025

    ಕರ್ನಾಟಕದಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ: ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ!

    May 17, 2025

    ಕುಮಾರಸ್ವಾಮಿಯವರ ನಿರ್ಧಾರ ಏನಿತ್ತೋ ಅದನ್ನು ನಾವು ಮುಂದುವರೆಸುತ್ತಿದ್ದೇವೆ: ಡಿಕೆ ಸುರೇಶ್

    May 17, 2025

    IPL 2025: RCB vs KKR ಸೆಣಸಾಟಕ್ಕೆ ಕ್ಷಣಗಣನೆ: ಬೆಂಗಳೂರಿನ ಪ್ಲೇಯಿಂಗ್ XI ನಲ್ಲಿ ಅನಿರೀಕ್ಷಿತ ಬದಲಾವಣೆಗಳು?

    May 17, 2025

    ಟ್ರಂಪ್ ಹೇಳಿದ್ದು, ಪಾಕಿಸ್ತಾನ ಪ್ರಧಾನಿ ಹೇಳಿದ್ದೇ ನಿಜನಾ? ಮೋದಿ ಹೇಳೋದು ನಂಬೊಲ್ಲವಾ?: ರವಿಕುಮಾರ್

    May 17, 2025

    ಜೂನ್ 1 ರಿಂದ ಈ ಬ್ಯಾಂಕಿನ ಕ್ರೆಡಿಟ್ ಕಾರ್ಡ್‌ʼನಲ್ಲಿ ಪ್ರಮುಖ ಬದಲಾವಣೆ..! ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ

    May 17, 2025

    ಬೆಂಗಳೂರಲ್ಲಿ ರೌಡಿಶೀಟರ್ ಅಟ್ಟಹಾಸ: ಮಾರಾಕಾಸ್ತ್ರ ಹಿಡಿದು ಯುವಕರ ಮೇಲೆ ಹಲ್ಲೆ

    May 17, 2025

    PUC, ಪದವಿ ಆದವರಿಗೆ ಈ ಸಂಸ್ಥೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ..! ತಕ್ಷಣ ಇಲ್ಲಿ ಸಂದರ್ಶನಕ್ಕೆ ಹಾಜರಾಗಿ

    May 17, 2025

    ಬಮೂಲ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಸ್ಪರ್ಧೆ

    May 17, 2025

    ಸಂಕಷ್ಟದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ: ಶಿವಣ್ಣ ನಿವಾಸದಲ್ಲಿ ಸೀಕ್ರೆಟ್ ಮೀಟಿಂಗ್ – ಗಣೇಶ್, ದುನಿಯಾ ವಿಜಿ, ಧ್ರುವ ಸೇರಿ ಹಲವು ನಟರು ಭಾಗಿ.!

    May 17, 2025

    IPL 2025: ಇಂದು RCB ಮ್ಯಾಚ್: ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬಾಂಬ್ ಸ್ಕ್ವಾಡ್‌ʼನಿಂದ ಭದ್ರತೆ ಪರಿಶೀಲನೆ

    May 17, 2025

    “KANNAGIDA M***”: ಹೋಟೆಲ್ ಡಿಸ್‌ಪ್ಲೇ ಬೋರ್ಡ್ʼನಲ್ಲಿ ಕನ್ನಡಿಗರಿಗೆ ಅಪಮಾನ – ಭುಗಿಲೆದ್ದ ಆಕ್ರೋಶ

    May 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.