Close Menu
Ain Live News
    Facebook X (Twitter) Instagram YouTube
    Tuesday, May 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಮತ್ತೊಂದು ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್‌ ರೋಹಿತ್‌ ಶರ್ಮಾ

    By AIN AuthorNovember 15, 2023
    Share
    Facebook Twitter LinkedIn Pinterest Email
    Demo

    ದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) 2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ (World Cup) ಮತ್ತೊಂದು ದಾಖಲೆ ಬರೆದಿದ್ದಾರೆ. ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ನಾಯಕನಾಗಿ ಹೊರಹೊಮ್ಮಿದ್ದಾರೆ.

    ಟೂರ್ನಿಯ ಲೀಗ್ ಹಂತದಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ಬಲಗೈ ಬ್ಯಾಟರ್ 55.89 ಸರಾಸರಿಯಲ್ಲಿ 503 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಒಂದು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ.

    36 ವರ್ಷ ವಯಸ್ಸಿನ ರೋಹಿತ್‌ ಶರ್ಮಾ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ನಾಯಕನಾಗಿ ದಾಖಲೆ ಮಾಡಿದ್ದಾರೆ. ಆ ಮೂಲಕ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕನಾಗಿ ರೆಕಾರ್ಡ್‌ ಮಾಡಿದ್ದಾರೆ. ಗಂಗೂಲಿ ಭಾರತ ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ 2003 ವಿಶ್ವಕಪ್‌ನಲ್ಲಿ 465 ರನ್ ಗಳಿಸಿ ಇದುವರೆಗೆ ಅಗ್ರಸ್ಥಾನದಲ್ಲಿದ್ದರು.

    ಒಂದೇ ವಿಶ್ವಕಪ್‌ ಆವೃತ್ತಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಭಾರತದ ನಾಯಕರ ಪಟ್ಟಿಯಲ್ಲಿ ರೋಹಿತ್‌ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗಂಗೂಲಿ ಇದ್ದಾರೆ. ಇವರ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ (2019 ರಲ್ಲಿ 443 ರನ್), ಮೊಹಮ್ಮದ್ ಅಜರುದ್ದೀನ್ (1992 ರಲ್ಲಿ 332 ರನ್) ಮತ್ತು ಕಪಿಲ್ ದೇವ್ (1983 ರಲ್ಲಿ 303 ರನ್) ಇದ್ದಾರೆ

    ಭಾನುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ 54 ಎಸೆತಗಳಲ್ಲಿ 61 ರನ್ ಗಳಿಸುವ ಮೂಲಕ ರೋಹಿತ್ ಈ ಸಾಧನೆ ಮಾಡಿದ್ದಾರೆ. ಅವರು ನಾಕ್ ಸಮಯದಲ್ಲಿ ಒಟ್ಟು ಎರಡು ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳನ್ನು ಬಾರಿಸಿದ್ದರು.

    Post Views: 2

    Demo
    Share. Facebook Twitter LinkedIn Email WhatsApp

    Related Posts

    IPL 2025: ಐಪಿಎಲ್ ಫೈನಲ್ ಪಂದ್ಯ ನಡೆಯೋದು ಎಲ್ಲಿ!? ಪ್ಲೇಆಫ್ ವೇಳಾಪಟ್ಟಿ ಹೀಗಿದೆ!

    May 20, 2025

    IPL 2025: RCB ಫ್ಯಾನ್ಸ್ ಗೆ ಸಿಕ್ತು ಗುಡ್ ನ್ಯೂಸ್:ಸ್ಟಾರ್​ ಬೌಲರ್​ ಫುಲ್ ಫಿಟ್!

    May 20, 2025

    Digvesh Rathi: ಲಕ್ನೋಗೆ ಬ್ಯಾಡ್ ನ್ಯೂಸ್: IPL ಪಂದ್ಯದಿಂದ ದಿಗ್ವೇಶ್ ರಾಥಿ ಅಮಾನತು..!

    May 20, 2025

    Breaking: RCB V/s SRH ಪಂದ್ಯ ಬೆಂಗಳೂರಿನಲ್ಲಿ ರದ್ದು..ಹಾಗಿದ್ರೆ ಎಲ್ಲಿ ನಡೆಯಲಿದೆ ಮ್ಯಾಚ್!‌

    May 20, 2025

    2 ಕ್ಯಾಚ್’ಗಳು, ಓ ಸ್ಟಂಪಿಂಗ್.. ಬ್ಯಾಟಿಂಗ್’ನಲ್ಲಿಯೇ ಅಲ್ಲ, ಕೀಪಿಂಗ್’ನಲ್ಲೂ ವಿಫಲ..!

    May 20, 2025

    CSK vs RR: ಗೌರವಕ್ಕಾಗಿ ಹೋರಾಟ: ಚೆನ್ನೈ vs ರಾಜಸ್ಥಾನ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ..?

    May 20, 2025

    LSG vs SRH: ಲಕ್ನೋಗೆ ಬಿಗ್ ಶಾಕ್ ಕೊಟ್ಟ ಹೈದರಾಬಾದ್..! ಪ್ಲೇ-ಆಫ್ ರೇಸ್’ನಿಂದ ಔಟ್

    May 20, 2025

    ಹೈದರಾಬಾದ್ ವಿರುದ್ಧ ಸೋತು ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಲಕ್ನೋ.. ಕ್ಯಾಪ್ಟನ್ ಕೊಟ್ಟ ಸಮರ್ಥನೆ ಹೀಗಿದೆ!

    May 20, 2025

    IPL ನಲ್ಲಿ ಆರ್ಭಟ: T20 ತಂಡಕ್ಕೆ ಕನ್ನಡಿಗ KL ರಾಹುಲ್ ಆಯ್ಕೆ ಖಚಿತ!

    May 19, 2025

    IPL 2025: ಇತಿಹಾಸ ಸೃಷ್ಟಿಸಿದ ಗುಜರಾತ್‌ʼನ ಓಪನಿಂಗ್‌ ಪ್ಲೇಯರ್..! 800 ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ಭಾರತೀಯ ಜೋಡಿ

    May 19, 2025

    IPL 2025: SRH ತಂಡದ ಸ್ಟಾರ್ ಪ್ಲೇಯರ್ ಟ್ರಾವಿಸ್ ಹೆಡ್’ಗೆ ಕೊರೋನಾ ಪಾಸಿಟಿವ್..!

    May 19, 2025

    Ayush Mhatre: ಸಚಿನ್ ತೆಂಡೂಲ್ಕರ್ ಭೇಟಿಯಾದ CSK ಯುವ ಬ್ಯಾಟ್ಸ್‌ಮನ್! ಆಯುಷ್ ಮ್ಹಾತ್ರೆಗೆ ಸಿಕ್ಕ ಗಿಫ್ಟ್‌ ಏನೂ ಗೊತ್ತಾ..?

    May 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.