Close Menu
Ain Live News
    Facebook X (Twitter) Instagram YouTube
    Saturday, June 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    World Cup: ಚೋಕರ್ಸ್ ಪಟ್ಟದಿಂದ ಹೊರಬರದ ಸೌತ್ ಆಫ್ರಿಕಾ; ಫೈನಲ್ ಗೆ ಲಗ್ಗೆ ಇಟ್ಟ ಆಸಿಸ್

    By AIN AuthorNovember 17, 2023
    Share
    Facebook Twitter LinkedIn Pinterest Email
    Demo

    ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲಿ ಅಮೋಘ ಪ್ರದರ್ಶನ ತೋರಿದ್ದ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್‌ ಪಂದ್ಯದಲ್ಲಿ ಮುಗ್ಗರಿಸಿತು. ಆ ಮೂಲಕ ತಮ್ಮ ಬೆನ್ನೇರಿರುವ ‘ಚೋಕರ್ಸ್’ ಪಟ್ಟ ಕಳಚಿಕೊಳ್ಳುವಲ್ಲಿ ವಿಫಲವಾಯಿತು.

    ಮೊದಲು ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ಎಂದಿನ ಲಯದಲ್ಲಿ ರನ್‌ ಗಳಿಸಲು ವಿಫಲವಾಯಿತು. ಸಾಹಸಮಯ ಶತಕ (101 ರನ್) ಸಿಡಿಸಿದ ಡೇವಿಡ್‌ ಮಿಲ್ಲರ್‌, ಹೆನ್ರಿಚ್‌ ಕ್ಲಾಸೆನ್‌ (47) ಬಿಟ್ಟರೆ ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಹೀಗಾಗಿ 49.4 ಓವರ್‌ಗಳಲ್ಲಿ 212 ರನ್‌ ಗಳಿಸಿ ಆಲೌಟ್‌ ಆಯಿತು.

    ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 47.2 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 215 ರನ್ ಗಳಿಸಿ 8ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿತು.

    ದಕ್ಷಿಣ ಆಫ್ರಿಕಾ ತಂಡಕ್ಕೆ ಸೆಮಿಫೈನಲ್‌ನಲ್ಲಿ ಎದುರಾದ 5ನೇ ಸೋಲು ಇದು. ಈ ಹಿಂದೆ 1992, 1999, 2007 ಹಾಗೂ 2015ರ ಸೆಮಿಫೈನಲ್‌ಗಳಲ್ಲಿ ಸೋಲು ಎದುರಾಗಿತ್ತು.

    ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಈ ತಂಡ ಪದೇ ಪದೆ ನಾಕೌಟ್ ಪಂದ್ಯಗಳಲ್ಲಿ ಎಡವುತ್ತಿರುವ ಕಾರಣ, ಚೋಕರ್ಸ್ ಪಟ್ಟ ಕಟ್ಟಿಕೊಂಡಿದೆ. ಅದಕ್ಕೆ ತಕ್ಕಂತೆಯೇ ಈ ಬಾರಿಯೂ ಆಡಿತು.

    ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದ್ದ ಆಫ್ರಿಕಾ, ಲೀಗ್‌ ಹಂತದಲ್ಲಿ ರನ್‌ ಹೊಳೆ ಹರಿಸಿತ್ತು. ಲೀಗ್‌ನಲ್ಲಿ ಗೆದ್ದ 7 ಪಂದ್ಯಗಳ ಪೈಕಿ 5ರಲ್ಲಿ ನೂರಕ್ಕಿಂತ ಹೆಚ್ಚು ರನ್‌ ಅಂತರದಲ್ಲಿ ಜಯ ಸಾಧಿಸಿತ್ತು. ಇನ್ನೆರಡು ಗೆಲುವುಗಳನ್ನು ಗುರಿ ಬೆನ್ನತ್ತಿ ದಕ್ಕಿಸಿಕೊಂಡಿತ್ತು. ಹೀಗಾಗಿ ತೆಂಬಾ ಬವುಮಾ ಬಳಗ ಸಾಕಷ್ಟು ನಿರೀಕ್ಷೆಗಳನ್ನು ಸೃಷ್ಟಿಸಿತ್ತು.

    ಆದರೆ ಮಹತ್ವದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿತು.

    Demo
    Share. Facebook Twitter LinkedIn Email WhatsApp

    Related Posts

    Bengaluru Stampede Case: ನೈತಿಕ ಹೊಣೆ ಹೊತ್ತು KSCA ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ..!

    June 7, 2025

    KL Rahul: ಇಂಗ್ಲೆಂಡ್ ಲಯನ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್..!

    June 7, 2025

    ಚಿನ್ನಸ್ವಾಮಿ ಭೀಕರ ಕಾಲ್ತುಳಿತ ಕೇಸ್: CID ತನಿಖೆ ಇಂದಿನಿಂದ ಶುರು!

    June 7, 2025

    ಕಾಲ್ತುಳಿತ ಕೇಸ್: RCB ವಿಜಯೋತ್ಸವಕ್ಕೆ 19 ಷರತ್ತು ವಿಧಿಸಿದ್ದ ರಾಜ್ಯ ಸರ್ಕಾರ!

    June 7, 2025

    RCB ಖರೀದಿಸಲು ಅದೊಂದೇ ಕಾರಣ.. ಹೊರತು ಕ್ರಿಕೆಟ್ ಮೇಲಿನ ಪ್ರೀತಿಯಿಂದಲ್ಲ: ವಿಜಯ್ ಮಲ್ಯ ಸ್ಪೋಟಕ ಹೇಳಿಕೆ!

    June 6, 2025

    ಆರ್ ಸಿಬಿಗೆ ಮತ್ತೆ ಆಘಾತ: ಬೆಂಗಳೂರಿನಲ್ಲಿ ಮತ್ತೊಂದು FIR ದಾಖಲು!

    June 6, 2025

    ನೂಕು ನುಗ್ಗಲಿಗೆ ಕೊಹ್ಲಿ ಕಾರಣ: ಬೆಂಗಳೂರಿನಲ್ಲಿ ವಿರಾಟ್ ವಿರುದ್ಧ ದೂರು ದಾಖಲು!

    June 6, 2025

    Chinnaswamy Stampede: KSCA ವಿರುದ್ಧ ಬಲವಂತದ ಕ್ರಮ ಬೇಡ – ಬಿಗ್ ರಿಲೀಫ್ ನೀಡಿದ ಹೈಕೋರ್ಟ್!

    June 6, 2025

    ಬೆಂಗಳೂರಿನ ಕಾಲ್ತುಳಿತ ಪ್ರಕರಣ: ಭಾರೀ ಟ್ರೆಂಡಿಂಗ್ ನಲ್ಲಿದೆ #ArrestKohli..!

    June 6, 2025

    RCB Victory Parade Stampede: ನಿಖಿಲ್ ಸೋಸಲೆ ಯಾರು?.. ಅವರಿಗೂ RCBಗೂ ಏನು ಸಂಬಂಧ?

    June 6, 2025

    RCB Stampede: ಬೆಂಗಳೂರಿನ ಕಾಲ್ತುಳಿತ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: RCB ವಿರುದ್ಧ ಪ್ರಕರಣ ದಾಖಲು!

    June 6, 2025

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಸೈಲೆಂಟಾಗಿ ಎಸ್ಕೇಪ್ ಆಗುತ್ತಿದ್ದ RCB ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಅರೆಸ್ಟ್!

    June 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.